ನಾಡಿನೆಲ್ಲೆಡೆ Varamahalakshmi ಹಬ್ಬದ ಸಂಭ್ರಮ – ಶ್ರೀ ಕ್ಷೇತ್ರ ಗೊರವನಹಳ್ಳಿಗೆ ಹರಿದು ಬಂದ ಭಕ್ತ ಸಾಗರ

ಶ್ರಾವಣ ಮಾಸದ ಮೊದಲ ಹಬ್ಬವಾದ ವರಮಹಾಲಕ್ಷ್ಮೀ ಹಬ್ಬವನ್ನು ಇಂದು ನಾಡಿನಾದ್ಯಂತ ಅತ್ಯಂತ ಸಂಭ್ರಮ, ಸಡಗರ ಹಾಗೂ ಭಕ್ತಿಯಿಂದ ಆಚರಣೆ ಮಾಡಲಾಗ್ತಿದೆ.
ಮನೆ ಮನೆಗಳಲ್ಲೂ ಲಕ್ಷ್ಮೀಯನ್ನು ಕೂರಿಸಿ, ವ್ರತಾಚರಣೆ ಮಾಡಲಾಗ್ತಿದೆ. ಇತ್ತ ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಪೂಜೆ, ವಿಶೇಷ ಅಲಂಕಾರ ಮಾಡಲಾಗಿದ್ದು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ, ಲಕ್ಷ್ಮೀ ದರ್ಶನ ಪಡೆದು ಪುನೀತರಾದ್ರು.
ಶ್ರೀ ಕ್ಷೇತ್ರ ಗೊರವನಹಳ್ಳಿಗೆ ಹರಿದು ಬಂದ ಭಕ್ತರು
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯಕ್ಕೆ, ಇಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇಗುಲದ ಆವರಣ ಹಾಗೂ ಲಕ್ಷ್ಮಿ ದೇವರಿಗೆ ವಿಶೇಷ ಅಲಂಕಾರವನ್ನ ಮಾಡಲಾಗಿತ್ತು. ಹಬ್ಬದ ಪ್ರಯುಕ್ತ ಮುಂಜಾನೆ 6 ಗಂಟೆಯಿಂದಲೇ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯ್ತು. ಅಲ್ದೇ ಹಬ್ಬದ ಹಿನ್ನಲೆ ಭಕ್ತರಿಗಾಗಿ ಇಡೀ ದೇವಾಲಯವೇ ತಳಿರು ತೋರಣ ಹಾಗೂ ವಿವಿಧ ಪುಷ್ಪಗಳಿಂದ ಅಲಂಕಾರಗೊಂಡಿತ್ತು.ಇನ್ನು ಗೊರವನಹಳ್ಳಿ ಕ್ಷೇತ್ರದಲ್ಲಿ ಇಷ್ಟಾರ್ಥಗಳು ಹೀಡೇರುತ್ತವೆ ಎನ್ನುವ ಪ್ರತೀತಿ ಇದ್ದು, ಮುಂಜಾನೆಯಿಂದಲೂ 5 ಗಂಟೆಯಿಂದಲೂ ಬೆಂಗಳೂರು, ತುಮಕೂರು ಭಾಗದ ಭಕ್ತರು ಮಾತ್ರವಲ್ಲದೇ ರಾಜ್ಯದ ಮೂಲೆ ಮೂಲೆಯಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದೇವಿಯ ಕೃಪೆಗೆ ಪಾತ್ರರಾದ್ರು.
READ THIS : ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ- ಆಚರಣೆ, ವ್ರತ ಹೇಗೆ ಮಾಡಬೇಕು?

ಭಕ್ತರಿಗೆ ಪ್ರಸಾದ ವ್ಯವಸ್ಥೆ!
ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರಕ್ಕೆ ಬಂದ ಸಾವಿರಾರು ಭಕ್ತರಿಗಾಗಿ ಸಕಲ ಸಿದ್ಧತೆಗಳನ್ನು ಸುವ್ಯವಸ್ಥಿತವಾಗಿ ಮಾಡಿಕೊಟ್ಟಿದ್ದು, ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಭಕ್ತರಿಗಾಗಿ ವಿಶೇಷ ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ತೀರ್ಥ ಪ್ರಸಾದ ಹಾಗೂ ಅನ್ನದಾಸೋಹದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಇನ್ನು ಶ್ರೀ ಕ್ಷೇತ್ರದಲ್ಲಿ ಲಕ್ಷಾಂತರ ಮಂದೀ ಭಕ್ತರು ಆಗಮಿಸುತ್ತಿದ್ದು, ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಒಟ್ನಲ್ಲಿ, ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಗೊರವನಹಳ್ಳಿ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಕಳೆಗಟ್ಟಿದ್ದು, ನಾಡಿನ ವಿವಿಧೆಡೆಯಿಂದ ಆಗಮಿಸಿದ ಭಕ್ತರು ತಾಯಿಯ ದರ್ಶನ ಪಡೆದು, ಇಷ್ಟಾರ್ಥ ಈಡೇರಲಿ, ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದ್ರು.

MUST WATCH : BUSಗೆ LUGGAGE ಹಾಕಲ್ಲಾ ಎಂದಿದ್ದಕ್ಕೆ ಥಳಿತ – ಕೈ ಮುಖಂಡನಿಂದ ಇದೆಂಥಾ ಕೃತ್ಯ?




