
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಹಾಗಲಗೆರೆ ಗ್ರಾಮದಲ್ಲಿ ಭೀಕರ Accident ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಹಾಗಲಗೆರೆ ಗ್ರಾಮದಲ್ಲಿ ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಯೊಂದು ರಸ್ತೆ ಬದಿಯಲ್ಲಿ ನಿಂತಿದ್ದವರ ಮೇಲೆ ಉರುಳಿಬಿದ್ದಿದೆ.
READ THIS : ಘೋರ ದುರಂತ – ಟ್ರ್ಯಾಕ್ಟರ್ಗೆ ಸಿಲುಕಿ ಬಾಲಕಿ ದಾರುಣ ಸಾವು!

ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!
ಅಪಘಾತದಲ್ಲಿ ಹಾಗಲಗೆರೆ ಗ್ರಾಮದ 28 ವರ್ಷದ ರಮೇಶ್ ಸ್ಥಳದಲ್ಲೆ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭೀಕರ ಅಪಘಾತದ ದೃಶ್ಯ ಶಾಲೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.A
Accident – ದೊಡ್ಡ ಅನಾಹುತ ಜಸ್ಟ್ ಮಿಸ್!
ಶಾಲೆ ಬಿಡುವ ಹತ್ತು ನಿಮಿಷದ ಮೊದಲು ಈ ಘಟನೆ ನಡೆದಿದ್ದು. ದೊಡ್ಡ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಸದ್ಯ ಗಾಯಾಳುಗಳಿಗೆ ಹೊಸದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಘಟನಾ ಸ್ಥಳಕ್ಕೆ ಶ್ರೀರಾಂಪುರ ಠಾಣಾ ಪೊಲೀಸರು ಬೇಟಿ ನೀಡಿ ಕೇಸು ದಾಖಲಿಸಿಕೊಂಡಿದ್ದಾರೆ.

MUST WATCH : CONGRESS ಪಕ್ಷ ರಾಷ್ಟ್ರದ್ರೋಹಿಗಳ ಪರ – BASAVARAJ BOMMAI ಆರೋಪ




