ಮುಡಾ ಹಗರಣದ ಹಿನ್ನಲೆ Yathindra ಖಾತೆ ಬದಲಾವಣೆಗಾಗಿ ನೈಜ್ಯ ಹೋರಾಟಗಾರರ ವೇದಿಕೆ ಆಗ್ರಹ

ಕರ್ನಾಟಕ ರಾಜಕೀಯದಲ್ಲಿ ಮುಡಾ ಬದಲಿ ನಿವೇಶನ ಹಂಚಿಕೆ ಹಗರಣ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿದೆ. ನಗರಾಭಿವೃದ್ಧಿ ಇಲಾಖೆಯ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಖಾತೆ ಬದಲಾವಣೆ ಮಾಡುವಂತೆ ‘ನೈಜ ಹೋರಾಟಗಾರರ ವೇದಿಕೆ’ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಆಗ್ರಹಿಸಿದೆ.
ಮುಡಾ ಹಗರಣದಲ್ಲಿ ಯತೀಂದ್ರ ಪಾತ್ರವೇನು
ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು, ಅವರ ಪತ್ನಿ ಪಾರ್ವತಿ ಎರಡನೇ ಆರೋಪಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕರ್ನಾಟಕ ಹೈಕೋರ್ಟ್ ಹಾಗೂ ಜಾರಿ ನಿರ್ದೇಶನಾಲಯದ ಮಟ್ಟದಲ್ಲೂ ಪ್ರಕರಣಗಳು ವಿಚಾರಣೆಯಲ್ಲಿವೆ.
ಇದನ್ನು ನೋಡಿ : ಭುವನಾ ಸಾ*ಗೆ ನ್ಯಾಯಕ್ಕಾಗಿ ಆಗ್ರಹ – ಡಿಸಿ ಕಚೇರಿ ಮುಂದೆ ಸಿಬ್ಬಂದಿ ಆಕ್ರೋಶ

ಖಾತೆ ಬದಲಾವಣೆ ಇಲ್ಲದಿದ್ದರೆ ಹಿತಾಸಕ್ತಿ ಸಂಘರ್ಷ?
ಈ ಹಿನ್ನೆಲೆಯಲ್ಲಿ, ಆರೋಪಿಗಳ ಪುತ್ರರಾಗಿರುವ ಡಾ. ಯತೀಂದ್ರ ಅವರೇ ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿರುವುದು ‘ಹಿತಾಸಕ್ತಿ ಸಂಘರ್ಷ’ಕ್ಕೆ ಕಾರಣವಾಗಬಹುದು ಎಂದು ವೇದಿಕೆ ತನ್ನ ಪತ್ರದಲ್ಲಿ ಅಭಿಪ್ರಾಯಪಟ್ಟಿದೆ. ಇದರಿಂದ ತನಿಖೆಯ ನಿಷ್ಪಕ್ಷಪಾತತೆ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡುವ ಸಾಧ್ಯತೆ ಇದೆ ಎಂದು ಹೇಳಿದೆ.
Yathindra ವಿರುದ್ಧ ತನಿಖೆಗೆ ಆಗ್ರಹ
ಪಾರದರ್ಶಕ ಆಡಳಿತ ಹಾಗೂ ನ್ಯಾಯಸಮ್ಮತ ತನಿಖೆ ನಡೆಯುವ ಉದ್ದೇಶದಿಂದ ಡಾ. ಯತೀಂದ್ರ ಅವರನ್ನು ನಗರಾಭಿವೃದ್ಧಿ ಇಲಾಖೆಯಿಂದ ಬಿಡುಗಡೆ ಮಾಡಿ, ಬೇರೆ ಯಾವುದೇ ಇಲಾಖೆಯ ಜವಾಬ್ದಾರಿ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವೇದಿಕೆ ಒತ್ತಾಯಿಸಿದೆ.

ಇದನ್ನು ಓದಿ : RSS ನವರು ಹಿಂದುಗಳಲ್ಲ, ಹಿಂದುತ್ವವಾದಿಗಳು ’ – ಸಚಿವ Yathindra Siddaramaiah ಹೇಳಿಕೆ




