Mysuru : ಪತಿಯನ್ನು ಕೊಂದು ಹಾರ್ಟ್ ಅಟ್ಯಾಕ್ ಕಥೆ ಕಟ್ಟಿದ ಶಿಕ್ಷಕಿ ಅಂದರ್

ಮೈಸೂರಿನ (Mysuru) ಕುವೆಂಪು ನಗರದಲ್ಲಿ ಗಂಡನನ್ನೇ ಹೆಂಡ್ತಿಯೊಬ್ಬಳು ಕೊಂದಿರುವ ಅನುಮಾನ ವ್ಯಕ್ತವಾಗಿದೆ. 50 ವರ್ಷದ ನಿತ್ಯಾನಂದ ಎಂಬಾತನನ್ನು ಆತನ ಹೆಂಡ್ತಿಯಾದ ಸುಶೀಲ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗ್ತಿದೆ. ಶೋ ರೂಂನಲ್ಲಿ ಕೆಲಸ ಮಾಡ್ತಿದ್ದ ನಿತ್ಯಾನಂದ ಹಾಗೂ ಹೆಂಡ್ತಿ ಸುಶೀಲ ನಡುವೆ ಆಗಾಗ ಜಗಳ ಆಗ್ತಾ ಇತ್ತು, ಎನ್ನಲಾಗಿದೆ. ಇದೇ ಕಾರಣಕ್ಕೆ ಗಂಡನನ್ನು ಕೊಲೆ ಮಾಡಿದ್ಲಾ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ಬರ್ಬರ Murder – ಆಗಿದ್ದೇನು?

ಪತಿಯನ್ನು ಕೊಂದು ಹಾರ್ಟ್ ಅಟ್ಯಾಕ್ ಕಥೆ
ನಿನ್ನೆ ಮಧ್ಯಾರಾತ್ರಿ 2 ಗಂಟೆ ಸುಮಾರಿಗೆ ನಿತ್ಯಾನಂದನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಅಂತಾ ಸಂಬಂಧಿಕರಿಗೆ ಹೆಂಡ್ತಿ ತಿಳಿಸಿದ್ದಳು. ಬೆಳಗ್ಗೆ 6 ಗಂಟೆ ಸುಮಾರಿಗೆ ನಿತ್ಯಾನಂದ ಅವರ ಅಣ್ಣ ಬಂದು ಮೃತದೇಹವನ್ನು ರೂಂನಿಂದ ಹಾಲ್ಗೆ ಶಿಫ್ಟ್ ಮಾಡುವಾಗ, ಮೃತದೇಹದ ಮೇಲೆ ರಕ್ತದ ಕಲೆ ಕಂಡು ಬಂದಿದೆ. ಆಗ ಮೃತ ನಿತ್ಯಾನಂದ ಅಣ್ಣನಿಗೆ ಅನುಮಾನ ಬಂದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೆಂಡ್ತಿಯೇ ಕೊಲೆ ಮಾಡಿದ್ದಾಳೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಸಂಬಂಧಿಕರು, ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ್ರು.

ಕೊಲೆಯೋ..? ಹೃದಯಾಘಾತವೋ?
ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗಂಡನ ಸಾವು ಕೊಲೆಯೋ..? ಹೃದಯಾಘಾತವೋ ಅನ್ನೋದು ತನಿಖೆ ಬಳಿಕ ತಿಳಿದು ಬರಲಿದೆ.
ಇದನ್ನು ನೋಡಿ : ಟೈರ್ ಬ್ಲಾಸ್ಟ್ ಆಗಿ KSRTC ಬಸ್ ಪಲ್ಟಿ – ಸ್ಥಳದಲ್ಲೇ ಇಬ್ಬರು ಸಾ 60 ಮಂದಿಗೆ ಗಾಯ




