ಒಂದೇ ದಿನ 11.19 ಲಕ್ಷ ಜನ ಸಂಚಾರ – Namma Metro ಇತಿಹಾಸದಲ್ಲಿ ದಾಖಲೆ

ಒಂದೇ ದಿನ 11.19 ಲಕ್ಷ ಮಂದಿ ‘ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸುವ ಮೂಲಕ ಹಿಂದಿನ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಆಗಸ್ಟ್ 10ರಂದು ಸೋಮವಾರ ಬೆಂಗಳೂರಿನ Namma Metro ದಲ್ಲಿ ಬರೋಬ್ಬರಿ 11,19,815 ಮಂದಿ ಪ್ರಯಾಣಿಸಿದ್ದಾರೆ. ಇದು ಮೆಟ್ರೋ ಆರಂಭವಾದ ಬಳಿಕ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ರೈಡರ್ಶಿಪ್ ಆಗಿದೆ.
ಇದನ್ನು ಓದಿ : ಬೆಂಗಳೂರು Metro ಬ್ಲೂ ಲೈನ್ ಶೀಘ್ರ ಆರಂಭ..!!

‘ನಮ್ಮ ಮೆಟ್ರೋ’ ರೈಡರ್ಶಿಪ್ ಹೆಚ್ಚಳಕ್ಕೆ ಕಾರಣವೇನು?
ಕಳೆದ ಐದು ತಿಂಗಳ ಹಿಂದಷ್ಟೇ, ಅಂದರೆ ಯುಗಾದಿ ಸಂದರ್ಭದಲ್ಲಿ, ‘ನಮ್ಮ ಮೆಟ್ರೋ’ದಲ್ಲಿ ಒಂದೇ ದಿನ 10.73 ಲಕ್ಷ ಮಂದಿ ಪ್ರಯಾಣಿಸಿದ್ದು ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ಮೀರಿ 11.19 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ಸೇವೆ ಬಳಸಿದ್ದಾರೆ. ಮೆಟ್ರೋ ಜಾಲ ವಿಸ್ತರಣೆ, ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಾಗೂ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಗೆ ಹೆಚ್ಚುತ್ತಿರುವ ಆದ್ಯತೆ ‘ನಮ್ಮ ಮೆಟ್ರೋ’ ರೈಡರ್ಶಿಪ್ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

Namma Metro – ಒಂದೇ ದಿನ 11.19 ಲಕ್ಷ ಜನ ಸಂಚಾರ
ಒಂದೇ ದಿನ 11,19,815 ಮಂದಿ ಪ್ರಯಾಣಿಸಿರುವುದು ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ‘ನಮ್ಮ ಮೆಟ್ರೋ’ಗೆ ಹೆಚ್ಚುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಇದನ್ನು ನೋಡಿ : ದೇಶಕ್ಕೆ ಮಹಿಳಾ ಪ್ರಧಾನಿ ಕೊಟ್ಟಿದ್ದೆ ಕಾಂಗ್ರೆಸ್ – ಬಿಜೆಪಿ ವಿರುದ್ಧ ಪ್ರಿಯಾಂಕ ಖರ್ಗೆ ವಾಗ್ದಾಳಿ





