Karnataka Bandh ಆದರೆ ಯಾವೆಲ್ಲ ಸೇವೆ ಲಭ್ಯವಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಬಂದ್ ನಡೆಸುವುದಾಗಿ ಅವರು ಘೋಷಿಸಿದ್ದಾರೆ. ಆದರೆ ಬಂದ್ಗೆ ಕೆಲ ಸಂಘಟನೆಗಳು ಬೆಂಬಲ ಸೂಚಿಸಿದ್ದರೆ, ಇನ್ನು ಕೆಲವು ಕನ್ನಡಪರ ಸಂಘಟನೆಗಳು ಬಂದ್ನಿಂದ ಹಿಂದೆ ಸರಿದಿವೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 13ರಂದು ಬಂದ್ ನಡೆದರೆ ರಾಜ್ಯದಲ್ಲಿ ಯಾವ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ, ಯಾವ ಸೇವೆಗಳಿಗೆ ವ್ಯತ್ಯಯ ಉಂಟಾಗಬಹುದು ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.

ಸಾರಿಗೆ ಸೇವೆ ಇರಲಿದೆ
ಬಂದ್ ಹಿನ್ನೆಲೆಯಲ್ಲಿ ಬಹುತೇಕ ಸಾರಿಗೆ ಸೇವೆಗಳು ಎಂದಿನಂತೆ ಮುಂದುವರಿಯುವ ನಿರೀಕ್ಷೆಯಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಹಾಗೂ ನಮ್ಮ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಖಾಸಗಿ ವಾಹನಗಳ ಸಂಚಾರವೂ ಸಾಮಾನ್ಯವಾಗಿರಲಿದೆ. ಖಾಸಗಿ ಸಾರಿಗೆ ಒಕ್ಕೂಟ ಈ ಬಾರಿಯ ಕರ್ನಾಟಕ ಬಂದ್ಗೆ ಬೆಂಬಲ ನೀಡುತ್ತಿಲ್ಲ.
ಜಲಾಶಯಗಳು ತುಂಬಿರುವ ಹಿನ್ನೆಲೆಯಲ್ಲಿ ಸದ್ಯ ಬಂದ್ ಮಾಡುವ ಅಗತ್ಯವಿಲ್ಲ ಎಂದು ಖಾಸಗಿ ಸಾರಿಗೆ ಒಕ್ಕೂಟ ತಿಳಿಸಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗಿ ಬಂದ್ ಮಾಡುವ ಪರಿಸ್ಥಿತಿ ಬಂದರೆ ಖಂಡಿತ ಬೆಂಬಲ ನೀಡುವುದಾಗಿ ಒಕ್ಕೂಟ ಹೇಳಿದೆ.

ಈ ಸೇವೆಗಳು ಎಂದಿನಂತೆ ಲಭ್ಯ
ಬಂದ್ ನಡೆದರೂ ಸಾರ್ವಜನಿಕರಿಗೆ ಅಗತ್ಯವಿರುವ ಹಲವು ಸೇವೆಗಳು ಎಂದಿನಂತೆ ಲಭ್ಯವಿರುವ ಸಾಧ್ಯತೆಯಿದೆ.
- ಸರ್ಕಾರಿ ಶಾಲೆಗಳು
- ಆಸ್ಪತ್ರೆಗಳು
- ಆಂಬುಲೆನ್ಸ್ ಸೇವೆ
- ತುರ್ತು ಸೇವೆಗಳು
- ಮೆಟ್ರೋ
- ಹಾಲು ಮತ್ತು ತರಕಾರಿ ಮಾರಾಟ
- ಮೆಡಿಕಲ್ ಶಾಪ್ಗಳು
- ಖಾಸಗಿ ವಾಹನಗಳ ಸಂಚಾರ
ಇದನ್ನು ಓದಿ : ಕಾವೇರಿ ಕಿಚ್ಚು, ನಾಳೆ ಕರ್ನಾಟಕ ಬಂದ್ ಆಗುತ್ತಾ?

ಯಾವೆಲ್ಲ ಬಂದ್ ಆಗಬಹುದು?
ಮಾಲ್, ಮಲ್ಟಿಫ್ಲೆಕ್ಸ್, ಓಲಾ-ಉಬರ್, ಬೀದಿ ಬದಿ ವ್ಯಾಪಾರ, ಎಪಿಎಂಸಿ, ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಬಂದ್ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.
ಹೀಗಾಗಿ ಆಗಸ್ಟ್ 13ರಂದು ಬಂದ್ ನಡೆದರೂ ರಾಜ್ಯಾದ್ಯಂತ ಬಹುತೇಕ ಅಗತ್ಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿರುವ ಸಾಧ್ಯತೆಯಿದೆ.
‘ಆಗಸ್ಟ್ 13ರಂದು Karnataka Bandh ಮಾಡಿಯೇ ತೀರುತ್ತೇವೆ’: ವಾಟಾಳ್ ನಾಗರಾಜ್
ಬಂದ್ಗೆ ಯಾರು ಬೆಂಬಲ ನೀಡಿದರೂ, ನೀಡದಿದ್ದರೂ ಆಗಸ್ಟ್ 13ರಂದು Karnataka Bandh ಮಾಡಿಯೇ ತೀರುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಮಾತನಾಡಿದ ಅವರು, “ಆಗಸ್ಟ್ 13ರಂದು ಕರ್ನಾಟಕ ಬಂದ್ ಮಾಡಿಯೇ ಮಾಡ್ತೇವೆ. ಬಂದ್ ದಿನ ಪ್ರತಿಯೊಬ್ಬ ಜನರೂ ಬೀದಿಗೆ ಇಳಿಯಬೇಕು” ಎಂದು ಕರೆ ನೀಡಿದ್ದಾರೆ.

ಇದನ್ನು ನೋಡಿ : ಅಧಿವೇಶನದೊಳಗೆ ಎಲ್ಲವೂ ಫೈನಲ್ – CM DKS ಕೊಟ್ರು BIG UPDATE.!




