
ಹಬ್ಬದ ಖುಷಿಯಲ್ಲಿದ್ದ ಗ್ರಾಹಕರಿಗೆ ಶಾಕ್ – GOLD RATE ಯಲ್ಲಿಂದು ಭಾರೀ ಏರಿಕೆ!
ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿ ಮಾಡೋ ಗ್ರಾಹಕರಿಗೆ ಶಾಕ್ ಎದುರಾಗಿದೆ. ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ ಕಂಡುಬಂದಿದೆ. ಆಭರಣ ಖರೀದಿಸಲು ಸಿದ್ಧತೆ ನಡೆಸುತ್ತಿರುವ ಗ್ರಾಹಕರಿಗೆ ಚಿನ್ನದ ದರ ಏರಿಕೆ ಬಿಸಿ ಮುಟ್ಟಿಸಿದೆ. ನವೆಂಬರ್ 5ರಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹295 ಏರಿಕೆಯಾಗಿದ್ದು, ದರ ₹13,385ಕ್ಕೆ ತಲುಪಿದೆ. ಅದೇ ರೀತಿ 24 ಕ್ಯಾರಟ್ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ₹322 ಹೆಚ್ಚಳವಾಗಿದ್ದು, ಹೊಸ ದರ ₹14,602 ಆಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗುವಂತಾಗಿದೆ. 8 ಗ್ರಾಂ ಚಿನ್ನಕ್ಕೆ ₹1,16,816 ಪಾವತಿಸಬೇಕಾಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ₹1,46,020ಕ್ಕೆ ತಲುಪಿದೆ. 100 ಗ್ರಾಂ ಚಿನ್ನ ಖರೀದಿಸಲು ಬರೋಬ್ಬರಿ ₹14,60,200 ವೆಚ್ಚವಾಗಲಿದೆ.
READ THIS : ಚಿನ್ನದ ಬೆಲೆ ಮತ್ತೆ ಏರಿಕೆ – ಗ್ರಾಹಕರಿಗೆ ತುಸು ನಿರಾಸೆ!
ಪ್ರಮುಖ ನಗರಗಳಲ್ಲಿ ಇಂದಿನ GOLD RATE
ದೇಶದ ಪ್ರಮುಖ ನಗರಗಳಲ್ಲಿಯೂ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ವಿವಿಧ ನಗರಗಳಲ್ಲಿನ 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ದರದ ವಿವರ ಇಲ್ಲಿದೆ.
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹12,825 | ₹13,991 |
| ಮುಂಬೈ | ₹12,825 | ₹13,991 |
| ದೆಹಲಿ | ₹12,840 | ₹14,006 |
| ಕೋಲ್ಕತಾ | ₹12,825 | ₹13,991 |
| ಹೈದರಾಬಾದ್ | ₹12,825 | ₹13,991 |

ಬೆಳ್ಳಿ ಬೆಲೆಯಲ್ಲೂ ಏರಿಕೆ
ಚಿನ್ನದ ಬೆಲೆ ಏರಿಕೆಯ ಬೆನ್ನಲ್ಲೇ ಬೆಳ್ಳಿ ದರದಲ್ಲಿಯೂ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ ₹210ಕ್ಕೆ ತಲುಪಿದೆ.
MUST WATCH : ಪಿಂಚಣಿ ಇಲ್ಲ.. ರೇಷನ್ ಕಾರ್ಡ್ ಕಟ್! – ಬಡವರ ಬದುಕಿನ ಜೊತೆ ಚೆಲ್ಲಾಟ.!





