
MADHUGIRI ಯಲ್ಲಿ ಹೇಗಿದೆ ಜಿ.ಪಂ ಟ್ರೆಂಡ್? ಕೆ.ಎನ್ ರಾಜಣ್ಣ ಕೋಟೆಯಲ್ಲಿ ಯಾರಿಗೆ ಮೀಸಲಾತಿ?
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಕಾವು ಜೋರಾಗ್ತಿದೆ. ಹಿರಿಯೂರು ಉಪಚುನಾವಣೆ ಮುಗಿದ ಬೆನ್ನಲ್ಲೇ ಜಿಲ್ಲಾ ಪಂಚಾಯಿತಿ ಚುನಾವಣೆಯ ಘೋಷಣೆ ಆಗೋ ಸಾಧ್ಯತೆ ಇದೆ. ಹೀಗಾಗಿ ತುಮಕೂರು ಜಿಲ್ಲೆಯಲ್ಲಿ ಈಗಿನಿಂದಲೇ ಜಿ.ಪಂ ಚುನಾವಣೆಯ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.
ಮಧುಗಿಯಲ್ಲಿ ಹೇಗಿದೆ ಜಿ.ಪಂ ಟ್ರೆಂಡ್?
ಕ್ಷೇತ್ರ ವಿಂಗಡಣೆ ಜೊತೆಗೆ ಮೀಸಲಾತಿಯಲ್ಲೂ ಬದಲಾವಣೆ ಆಗಿರೋದ್ರಿಂದ ಹಲವರ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆ ಇದೆ. ಅದರಲ್ಲೂ ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರ ಕ್ಷೇತ್ರ ಮಧುಗಿರಿಯಲ್ಲಿ ಈ ಬಾರಿ ಜಿ.ಪಂ ಚುನಾವಣೆ ಹೇಗಿರುತ್ತೆ ಅನ್ನೋ ಕುತೂಹಲ ಜೋರಾಗಿದೆ.
ಯಾರ ರಾಜಕೀಯ ಲೆಕ್ಕಾಚಾರಕ್ಕೆ ಬ್ರೇಕ್ ಬೀಳುತ್ತೆ?
ಹಾಗಾದ್ರೆ ಮಧುಗಿರಿಯ ಯಾವ ಕ್ಷೇತ್ರದಲ್ಲಿ ಮೀಸಲಾತಿ ಬದಲಾಗಿದೆ? ಯಾರಿಗೆ ಹೊಸ ಅವಕಾಶ ಸಿಗುತ್ತೆ? ಯಾರ ರಾಜಕೀಯ ಲೆಕ್ಕಾಚಾರಕ್ಕೆ ಬ್ರೇಕ್ ಬೀಳುತ್ತೆ? ಅನ್ನೋದು ಈಗಿನ ಕುತೂಹಲ. ಹಾಗಾದ್ರೆ ರಾಜಣ್ಣ ಕೋಟೆಯಲ್ಲಿ ಯಾವ ಕ್ಷೇತ್ರಕ್ಕೆ ಯಾವ ಮೀಸಲಾತಿ ಬಂದಿದೆ? ಹಳೆಯ ಮೀಸಲಾತಿಗೂ ಈಗಿನ ಮೀಸಲಾತಿಗೂ ಏನು ವ್ಯತ್ಯಾಸ? ಯಾರ ರಾಜಕೀಯ ಲೆಕ್ಕಾಚಾರ ಉಲ್ಟಾ ಆಗುತ್ತೆ? ಅನ್ನೋದನ್ನ ನೋಡೋಣ ಬನ್ನಿ.

ಯಾರ ರಾಜಕೀಯ ಲೆಕ್ಕಾಚಾರ ಉಲ್ಟಾ ಆಗುತ್ತೆ?
ದೊಡ್ಡೇರಿ
ಮೊದಲಿಗೆ ದೊಡ್ಡೇರಿ ಕ್ಷೇತ್ರದ ವಿಚಾರಕ್ಕೆ ಬರೋಣ. 2015ರಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ದೊಡ್ಡೇರಿ ಕ್ಷೇತ್ರವನ್ನು 2026ರ ಕರಡು ಪಟ್ಟಿಯಲ್ಲಿ ಸಾಮಾನ್ಯ ಮಹಿಳೆಗೆ ನೀಡಲಾಗಿದೆ. ಅಂದರೆ ಈ ಬಾರಿ ಮಹಿಳಾ ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ.
ವರ್ಷ ಮೀಸಲಾತಿ
2015 ಸಾಮಾನ್ಯ
2026 ಸಾಮಾನ್ಯ (ಮಹಿಳೆ)
ಸಿದ್ದಾಪುರ
ಇನ್ನು ಸಿದ್ದಾಪುರ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2015ರಲ್ಲೂ ಬಿಸಿಎಂ-ಎ ಮೀಸಲಾತಿ ಇತ್ತು. 2026ರ ಕರಡು ಪಟ್ಟಿಯಲ್ಲೂ ಅದೇ ಮೀಸಲಾತಿ ಮುಂದುವರಿದಿದೆ.
ವರ್ಷ ಮೀಸಲಾತಿ
2015 ಬಿಸಿಎಂ ಎ
2026 ಬಿಸಿಎಂ ಎ
READ THIS : ದೆಹಲಿ ಪ್ರತಿಭಟನೆಗಳಿಗೆ ಹೊಸ ರೂಲ್ಸ್ ಜಾರಿ? ಸುಪ್ರೀಂ ಕೋರ್ಟ್ ಹೇಳಿದ್ದೇನು?
ಮಿಡಿಗೇಶಿ
ಮಿಡಿಗೇಶಿ ಮೀಸಲಾತಿಯಲ್ಲಿ ಬದಲಾವಣೆ ಆಗಿದೆ. 2015ರಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದ ಈ ಕ್ಷೇತ್ರವನ್ನು ಈಗ ಪರಿಶಿಷ್ಟ ಜಾತಿ ಮಹಿಳೆ ಎಂದು ನಿಗದಿಪಡಿಸಲಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಸ್ಪರ್ಧೆಯ ಸಾಮಾಜಿಕ ವರ್ಗವೇ ಬದಲಾಗಿದೆ.
ವರ್ಷ ಮೀಸಲಾತಿ
2015 ಎಸ್ಟಿ ಮಹಿಳೆ
2026 ಎಸ್ಸಿ ಮಹಿಳೆ
ಕೊಡಿಗೇನಹಳ್ಳಿ
ಇನ್ನು ಕೊಡಿಗೇನಹಳ್ಳಿ ಕ್ಷೇತ್ರದತ್ತ ಗಮನಹರಿಸಿದರೆ, 2015ರಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆದರೆ 2026ರ ಕರಡು ಪಟ್ಟಿಯಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾತಿ ನೀಡಲಾಗಿದೆ. ಇದ್ರಿಂದ ಅಭ್ಯರ್ಥಿಗಳ ಆಯ್ಕೆಯ ಲೆಕ್ಕಾಚಾರವೂ ಬದಲಾಗಲಿದೆ.
ವರ್ಷ ಮೀಸಲಾತಿ
2015 ಸಾಮಾನ್ಯ ಮಹಿಳೆ
2026 ಎಸ್ಟಿ ಮಹಿಳೆ
ಪುರವರ
ಪುರವರ ಕ್ಷೇತ್ರದಲ್ಲೂ ಇದೇ ರೀತಿಯ ಬದಲಾವಣೆ ಕಂಡುಬಂದಿದೆ. 2015ರಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಕ್ಷೇತ್ರವನ್ನು ಈ ಬಾರಿ ಸಾಮಾನ್ಯ ಮಹಿಳೆ ಎಂದು ನಿಗದಿಪಡಿಸಲಾಗಿದೆ. ಹೀಗಾಗಿ ಮಹಿಳಾ ಆಕಾಂಕ್ಷಿಗಳಿಗೆ ಅವಕಾಶ ಸೃಷ್ಟಿಯಾಗಿದೆ.
ವರ್ಷ ಮೀಸಲಾತಿ
2015 ಸಾಮಾನ್ಯ
2026 ಸಾಮಾನ್ಯ (ಮಹಿಳೆ)
ಇಟಕದಿಬ್ಬನಹಳ್ಳಿ
ಕೊನೇದಾಗಿ ಇಟಕದಿಬ್ಬನಹಳ್ಳಿ ಕ್ಷೇತ್ರದ ಮೀಸಲಾತಿ ಬದಲಾವಣೆ ಮತ್ತೊಂದು ಪ್ರಮುಖ ಅಂಶ. 2015ರಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಈ ಕ್ಷೇತ್ರವನ್ನು 2026ರ ಕರಡು ಪಟ್ಟಿಯಲ್ಲಿ ಸಾಮಾನ್ಯ ವರ್ಗಕ್ಕೆ ಬದಲಾಯಿಸಲಾಗಿದೆ. ಇದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೂ ಸ್ಪರ್ಧಿಸುವ ಅವಕಾಶ ದೊರೆಯಲಿದೆ.
ವರ್ಷ ಮೀಸಲಾತಿ
2015 ಎಸ್ಸಿ
2026 ಸಾಮಾನ್ಯ

ಒಟ್ಟಾರೆ ಮಧುಗಿರಿಯ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ದೊಡ್ಡೇರಿ, ಮಿಡಿಗೇಶಿ, ಕೊಡಿಗೇನಹಳ್ಳಿ, ಪುರವರ ಮತ್ತು ಇಟಕದಿಬ್ಬನಹಳ್ಳಿ ಕ್ಷೇತ್ರಗಳಲ್ಲಿ ಮೀಸಲಾತಿ ಬದಲಾವಣೆಯಾಗಿದೆ. ಸಿದ್ದಾಪುರದಲ್ಲಿ ಮಾತ್ರ ಹಿಂದಿನ ಮೀಸಲಾತಿಯೇ ಮುಂದುವರಿದಿದೆ. ಹೀಗಾಗಿ ಮಧುಗಿರಿ ಜಿ.ಪಂ ಚುನಾವಣೆಯಲ್ಲಿ ಹಳೆಯ ಆಕಾಂಕ್ಷಿಗಳ ಲೆಕ್ಕಾಚಾರ ಬದಲಾಗುತ್ತಾ? ಹೊಸ ಮುಖಗಳಿಗೆ ಅವಕಾಶ ಸಿಗುತ್ತಾ? ಕೆ.ಎನ್. ರಾಜಣ್ಣ ಅವರ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಯಾವ ರೀತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ? ಎನ್ನುವುದು ಈಗಿನ ಕುತೂಹಲ.
MUST WATCH : ಬಸ್ ದರ ಏರಿಕೆ ಬರೆ.! – ಮೆಜೆಸ್ಟಿಕ್ನಲ್ಲಿ ಭಿಕ್ಷೆ ಎತ್ತಿ ಬಿಜೆಪಿ ಆಕ್ರೋಶ.!




