MADHUGIRI : ಊರಿಗೆ ಬಂದಿದ್ದ ಯುವಕ ನಾಪತ್ತೆ – ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಹತ್ತಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿರುವ ಘಟನೆ ಮಧುಗಿರಿ ತಾಲೂಕಿನ ಕಂತಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇನ್ನು ಮೃತ ಯುವಕನನ್ನು ಕಂತಾನಹಳ್ಳಿ ಗ್ರಾಮದ ನಿವಾಸಿ 28 ವರ್ಷದ ಬಾಬು ಎಂದು ಗುರುತಿಸಲಾಗಿದ್ದು, ಯುವಕನ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಊರಿಗೆ ಬಂದಿದ್ದ ಯುವಕ ನಾಪತ್ತೆ!
ಸುಮಾರು ಎರಡು ವರ್ಷಗಳ ಹಿಂದೆ ಯುವತಿಯೊಬ್ಬಳನ್ನು, ಪ್ರೀತಿಸಿ ಬೆಂಗಳೂರಿಗೆ ತೆರಳಿದ್ದ ಬಾಬು, ಆಕೆಗೆ ಅಪ್ರಾಪ್ತ ವಯಸ್ಸಾಗಿದ್ದ ಕಾರಣ, ಪ್ರಕರಣ ದಾಖಲಾಗಿ ಜೈಲು ಸೇರಿ ಬಿಡುಗಡೆಯಾಗಿದ್ದಾನಂತೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಬಾಬು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದನಂತೆ. ಇನ್ನು ಅಕ್ಟೋಬರ್ 3ರಂದು ಗ್ರಾಮಕ್ಕೆ ಮರಳಿದ್ದ ಬಾಬು ಬಳಿಕ ನಾಪತ್ತೆಯಾಗಿದ್ದನು. ಆತ ಬೆಂಗಳೂರಿಗೆ ತೆರಳಿರಬಹುದು ಎಂದು ಕುಟುಂಬಸ್ಥರು ಭಾವಿಸಿದ್ರು.
READ THIS : ರೈಲಿಗೆ ತಲೆಕೊಟ್ಟು ವ್ಯಕ್ತಿ ಸಾವು! ಆತ್ಮಹತ್ಯೆಯೋ, ಕೊಲೆಯೋ?
ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ
ಆದ್ರೆ, ಅಕ್ಟೋಬರ್ 9ರಂದು ಗ್ರಾಮದ ಹೊರವಲಯದಲ್ಲಿರುವ ನರಸಿಂಹಪ್ಪ ಎಂಬುವರ ಜಮೀನಿನ ಬಳಿ ಹತ್ತಿ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಇನ್ನು, ಬಾಬು ಊರಿಗೆ ಬಂದಾಗ ಮನೆಯಲ್ಲಿ ಇರ್ತಿರಲಿಲ್ಲ, ಯುವತಿಯ ಮನೆಗೆ ಹೋಗ್ತಿದ್ದ, ಮೊನ್ನೆಯೂ ಆಕೆಯ ಮನೆಗೆ ಹೋಗಿದ್ದನು. ಯುವತಿ ಪದೇಪದೇ ಫೋನ್ ಮಾಡಿ ಬಾಬುವನ್ನು ಕರೆಸಿಕೊಳ್ತಿದ್ದಳು. ಹೀಗಾಗಿ, ಯುವತಿಯ ಕುಟುಂಬದವರೇ ಬಾಬುವಿನ ಸಾವಿಗೆ ಕಾರಣವಾಗಿರಬಹುದು ಅನ್ನೋ ಅನುಮಾನ ಇದೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಯುವಕನ ಸಾವಿನ ಬಗ್ಗೆ ಅನುಮಾನ
ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಮಿಡಿಗೇಶಿ ಠಾಣೆಯ ಪಿಎಸ್ಐ ರವೀಂದ್ರ ಹಾಗೂ ಸಿಪಿಐ ಹನುಮಂತರಾಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಈ ಕುರಿತು ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದ್ರೆ ಯುವಕನ ಸಾವಿನ ಹಿಂದಿನ ನಿಖರ ಕಾರಣ ಏನು ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ಬಯಲಾಗಬೇಕಿದೆ.

MUST WATCH : ಜಂತರ್ಮಂತರ್ನಲ್ಲಿ CJP ಪ್ರೊಟೆಸ್ಟ್ ಮೆಟ್ರೋ ಬಂದ್.. ಪ್ರಯಾಣಿಕರು ಹೈರಾಣು




