ಸಾರಿಗೆ ಸಚಿವ ಭೈರತಿ ಸುರೇಶ್ ಅವರನ್ನು ಭೇಟಿಯಾದ K.N Rajanna

ಮಧುಗಿರಿ ಕ್ಷೇತ್ರಕ್ಕೆ 50 ನೂತನ ಬಸ್ ಹಾಗೂ ಆರ್ಟಿಒ ಕಚೇರಿಗೆ ಹೆಚ್ಚುವರಿ ಅನುದಾನ ನೀಡುವ ಕುರಿತು ಸಚಿವ ಕೆ.ಎನ್. ರಾಜಣ್ಣ ಅವರು ಸಾರಿಗೆ ಸಚಿವ ಬೈರತಿ ಸುರೇಶ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸಾರಿಗೆ ಸಚಿವರನ್ನ ಭೇಟಿಯಾದ ರಾಜಣ್ಣ
ಇಂದು ಶಾಂತಿನಗರದಲ್ಲಿರುವ ಬಿಎಂಟಿಸಿ ಸಚಿವರ ಕಚೇರಿಯಲ್ಲಿ ಸಚಿವ ಕೆ.ಎನ್. ರಾಜಣ್ಣ ಅವರು ಸಾರಿಗೆ ಸಚಿವ ಬೈರತಿ ಸುರೇಶ್ ಅವರನ್ನು ಭೇಟಿ ಮಾಡಿ ಮಧುಗಿರಿ ಕ್ಷೇತ್ರದ ಸಾರಿಗೆ ವ್ಯವಸ್ಥೆ ಸುಧಾರಣೆ ಕುರಿತು ಚರ್ಚಿಸಿದರು.

ಇದನ್ನು ಓದಿ : DK ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ ಎಂದ K.N Rajanna
ಮಧುಗಿರಿ ಅನುದಾನ ಕುರಿತು ಸಚಿವರೊಂದಿಗೆ K.N Rajanna ಚರ್ಚೆ
ಈ ವೇಳೆ ಮಧುಗಿರಿಗೆ 50 ನೂತನ ಬಸ್ ಹಾಗೂ ಆರ್.ಟಿ.ಓ ಕಛೇರಿಗೆ ಹೆಚ್ಚುವರಿ ಅನುದಾನಕ್ಕೆ ಸಂಬಂಧಪಟ್ಟಂತೆ ಸಾರಿಗೆ ಸಚಿವರಾದ ಬೈರತಿ ಸುರೇಶ್ ರವರು, KSRTC ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಾರಿಗೆ ಇಲಾಖೆ ಆಯುಕ್ತರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿ ಚರ್ಚಿಸಲಾಯಿತು. ಇನ್ನು ಈ ಸಂದರ್ಭದಲ್ಲಿ ನಿಖಿತ್ ರಾಜ್ ಮೌರ್ಯ ಅವರು ಉಪಸ್ಥಿತರಿದ್ದಾರೆ.

ಇದನ್ನು ನೋಡಿ : ಆರನೇ ತರಗತಿ ಪ್ರವೇಶ ಕೌನ್ಸಿಲಿಂಗ್ನಲ್ಲಿ ಅಕ್ರಮ ಆರೋಪ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ




