
ಸೆಪ್ಟೆಂಬರ್ 9ಕ್ಕೆ iPhone 18 ಪ್ರೋ ಬಿಡುಗಡೆ
ಆಪಲ್ ತನ್ನ ಮುಂಬರುವ ಲಾಂಚ್ ಇವೆಂಟ್ಗೆ ದಿನಾಂಕ ನಿಗದಿಪಡಿಸಿರುವುದಾಗಿ ಮಾಹಿತಿ ಹಂಚಿಕೊಂಡಿದೆ. ಸೆಪ್ಟೆಂಬರ್ 9ರಂದು ಕಂಪನಿಯ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಹಲವು ಹೊಸ ಉತ್ಪನ್ನಗಳನ್ನು ಪರಿಚಯಿಸುವ ನಿರೀಕ್ಷೆಯಿದೆ.
ಆಪಲ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 9ರಂದು ಬೆಳಿಗ್ಗೆ 10 ಗಂಟೆಗೆ ‘Surprise and Shine’ ಎಂಬ ಟ್ಯಾಗ್ಲೈನ್ನೊಂದಿಗೆ ಲಾಂಚ್ ಇವೆಂಟ್ ನಡೆಯಲಿದೆ. ಕಂಪನಿಯ ಅಧಿಕೃತ ಎಕ್ಸ್ ಖಾತೆಯಲ್ಲೂ ಈ ಕುರಿತು ಮಾಹಿತಿ ಪ್ರಕಟಿಸಲಾಗಿದೆ.

iPhone 18 ಸರಣಿ ಬಿಡುಗಡೆಯಾಗುತ್ತಾ?
ಐಫೋನ್ ಅಭಿಮಾನಿಗಳ ಪ್ರಮುಖ ನಿರೀಕ್ಷೆ ಇದೀಗ iPhone 18 ಸರಣಿ ಮೇಲೆ ನೆಟ್ಟಿದೆ. ಸೆಪ್ಟೆಂಬರ್ 9ರ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಬಿಡುಗಡೆಯಾಗಬಹುದು ಎಂಬ ಚರ್ಚೆ ನಡೆಯುತ್ತಿದೆ.
ಆದರೆ, iPhone 18 ಸರಣಿಯ ಬಿಡುಗಡೆಯನ್ನು ಆಪಲ್ ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಹೀಗಾಗಿ ಕಾರ್ಯಕ್ರಮದಲ್ಲಿ ಯಾವೆಲ್ಲಾ ಉತ್ಪನ್ನಗಳು ಬಿಡುಗಡೆಯಾಗಲಿವೆ ಎಂಬುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ.
READ THIS : Samsung S25 FE ಭಾರತದಲ್ಲಿ ಪ್ರಾರಂಭ -4,900mAh ಬ್ಯಾಟರಿ ಮತ್ತು ಅತ್ಯುತ್ತಮ ಕ್ಯಾಮೆರಾ ವೈಶಿಷ್ಟ್ಯಗಳು

ಯಾವೆಲ್ಲಾ ಉತ್ಪನ್ನಗಳ ನಿರೀಕ್ಷೆ?
ಲಾಂಚ್ ಇವೆಂಟ್ನಲ್ಲಿ ಈ ಕೆಳಗಿನ ಉತ್ಪನ್ನಗಳು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂಬ ಚರ್ಚೆ ಟೆಕ್ ವಲಯದಲ್ಲಿ ನಡೆಯುತ್ತಿದೆ:
- iPhone 18 Pro
- iPhone 18 Pro Max
- iPhone Fold
- Apple Watch Series 12
- Apple Watch Ultra 4
- AirPods 6
- iPad mini
- HomePod mini 2
- Apple TV 4K
- Apple Home Hub
ಈ ಪೈಕಿ ಐಫೋನ್ 18 ಪ್ರೊ ಸರಣಿ ಮತ್ತು ಫೋಲ್ಡಬಲ್ ಐಫೋನ್ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ. ಆದರೆ ಇವುಗಳ ಬಿಡುಗಡೆಯನ್ನು ಅಧಿಕೃತವಾಗಿ ಖಚಿತಪಡಿಸಲು ಸೆಪ್ಟೆಂಬರ್ 9ರ ಕಾರ್ಯಕ್ರಮದವರೆಗೆ ಕಾಯಬೇಕಾಗಿದೆ.

ಯೂಟ್ಯೂಬ್ನಲ್ಲೂ ಲೈವ್
ಆಪಲ್ನ ಲಾಂಚ್ ಇವೆಂಟ್ ಅನ್ನು YouTube, Appleನ ಅಧಿಕೃತ ವೆಬ್ಸೈಟ್ ಹಾಗೂ Apple TV ಮೂಲಕ ನೇರಪ್ರಸಾರ ಮಾಡಲಾಗುತ್ತದೆ. ಹೀಗಾಗಿ ವಿಶ್ವದಾದ್ಯಂತದ ಆಪಲ್ ಅಭಿಮಾನಿಗಳು ಕಾರ್ಯಕ್ರಮವನ್ನು ಆನ್ಲೈನ್ನಲ್ಲಿ ವೀಕ್ಷಿಸಬಹುದಾಗಿದೆ.
ಸೆಪ್ಟೆಂಬರ್ 9ರ ಕಾರ್ಯಕ್ರಮದಲ್ಲಿ ಆಪಲ್ ಯಾವ ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಲಿದೆ ಎಂಬುದರ ಮೇಲೆ ಇದೀಗ ಟೆಕ್ ಜಗತ್ತಿನ ಗಮನ ನೆಟ್ಟಿದೆ.
MUST WATCH : ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ಸಿಎಂ ಡಿಕೆಶಿ ಹಾಗೂ ಕುಮಾರಸ್ವಾಮಿ




