
ಶುಕ್ರವಾರ ದೇಶಾದ್ಯಂತ ಮುಷ್ಕರ – ಸತತ ನಾಲ್ಕು ದಿನ Bank ಸೇವೆ ಬಂದ್!
ಬ್ಯಾಂಕ್ ಯೂನಿಯನ್ಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಈ ಬೇಡಿಗಳನ್ನು ಈಡೇರಿಸುವಂತೆ ಸರ್ಕಾರಸ ಮೇಲೆ ಒತ್ತಡ
ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿ ಜಾರಿ, ಪಿಂಚಣಿ ಸಮಸ್ಯೆಗಳ ಶೀಘ್ರ ಪರಿಹಾರ ಹಾಗೂ ಕೆಲಸದ ಸಾಮರ್ಥ್ಯ ಆಧರಿತ ಪ್ರೋತ್ಸಾಹ ಯೋಜನೆ ಜಾರಿಗೊಳಿಸುವಂತೆ ಬ್ಯಾಂಕ್ ಸಿಬ್ಬಂದಿ ಒತ್ತಾಯಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮುಷ್ಕರಕ್ಕೆ ಕರೆ ನೀಡಿದೆ.
READ THIS : ಸೆಪ್ಟೆಂಬರ್ನಲ್ಲಿ ಈ ಎಲ್ಲಾ ದಿನಗಳು ಬ್ಯಾಂಕ್ ಸೇವೆ ಬಂದ್!

ಸತತ ನಾಲ್ಕು ದಿನ ಬ್ಯಾಂಕ್ ಸೇವೆ ಸ್ಥಗಿತ?
ಸೆಪ್ಟೆಂಬರ್ 11ರಂದು ಮುಷ್ಕರ ನಡೆಯಲಿದ್ದು, ನಂತರ ಎರಡನೇ ಶನಿವಾರ ಹಾಗೂ ಭಾನುವಾರದ ಪ್ರಯುಕ್ತ ಬ್ಯಾಂಕ್ಗಳಿಗೆ ರಜೆ ಇರಲಿದೆ. ಸೋಮವಾರ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಇರುವುದರಿಂದ ಸತತ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಮುಚ್ಚಿರುವ ಪರಿಸ್ಥಿತಿ ಎದುರಾಗಲಿದೆ.
ಇದರಿಂದ ನಗದು ಠೇವಣಿ, ಹಣ ತೆಗೆಯುವುದು, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಶಾಖೆ ಆಧಾರಿತ ಬ್ಯಾಂಕಿಂಗ್ ಸೇವೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ನಂತಹ ಡಿಜಿಟಲ್ ಸೇವೆಗಳು ಎಂದಿನಂತೆ ಲಭ್ಯವಿರುವ ಸಾಧ್ಯತೆ ಇದೆ.

ಗ್ರಾಹಕರಿಗೆ ಮುನ್ನೆಚ್ಚರಿಕೆ
ಸತತ ರಜೆ ಹಾಗೂ ಮುಷ್ಕರದ ಹಿನ್ನೆಲೆಯಲ್ಲಿ Bank ಗೆ ಸಂಬಂಧಿಸಿದ ತುರ್ತು ವ್ಯವಹಾರಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸುವಂತೆ ಗ್ರಾಹಕರು ಗಮನಹರಿಸಬೇಕಾಗಿದೆ. ವಿಶೇಷವಾಗಿ ನಗದು ವಹಿವಾಟು ಹಾಗೂ ಶಾಖೆಯಲ್ಲಿ ಮಾಡಬೇಕಾದ ಕೆಲಸಗಳನ್ನು ರಜೆಗೂ ಮುನ್ನವೇ ಮುಗಿಸಿಕೊಳ್ಳುವುದು ಸೂಕ್ತ.
MUST WATCH : K.N.RAJANNAಗೆ ಮತ್ತೆ ಕೈಕೊಟ್ಟ ಕಾಂಗ್ರೆಸ್ – ತುಮಕೂರಲ್ಲಿ ಸಿಡಿದೆದ್ದ ವಾಲ್ಮೀಕಿ ಸಮುದಾಯ





