
Pavagada ದಲ್ಲಿ ನಕ್ಸಲ್ ಚಟುವಟಿಕೆಯ ಪತ್ರ ಪತ್ತೆ!
ಆಂಧ್ರ ಪ್ರದೇಶ ಹಾಗೂ ಪಾವಗಡ ತಾಲೂಕು ಗಡಿಭಾಗದಲ್ಲಿ ನಿಷ್ಕ್ರಿಯವಾಗಿದ್ದ ನಕ್ಸಲ್ ಚಟುವಟಿಕೆಗಳು ಮತ್ತೆ ಸಕ್ರಿಯವಾಗಿವೆಯೇ ಎಂಬ ಅನುಮಾನ ಮೂಡಿದೆ. ಗಂಗಸಾಗರ ಗ್ರಾಮದ ರೈತರೊಬ್ಬರಿಗೆ ‘ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ (ಪಿಡಬ್ಲ್ಯೂಜಿ) ಕಾಮ್ರೇಡ್ ದೇವನ್ನ ದಳಂ’ ಹೆಸರಿನಲ್ಲಿ ₹5 ಲಕ್ಷ ನೀಡುವಂತೆ ಬೆದರಿಕೆ ಪತ್ರ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
5 ಲಕ್ಷ ಕೊಡುವಂತೆ ಡಿಮ್ಯಾಂಡ್
ಗುರುವಾರ ರಾತ್ರಿ ಗಂಗಸಾಗರ ಗ್ರಾಮದ ರೈತ ಮುತ್ತಕುಂಟ್ಲ ಭೂಷಪ್ಪ ಅವರ ತೋಟದ ಗೇಟ್ಗೆ ತೆಲುಗು ಭಾಷೆಯಲ್ಲಿ ಬರೆಯಲಾಗಿದ್ದ ಪತ್ರವೊಂದನ್ನು ಅಂಟಿಸಿ ಹೋಗಲಾಗಿದೆ.
ಸೆಪ್ಟೆಂಬರ್ 16ರೊಳಗೆ ವಕೀಲ ಸುಬ್ಬರಾಯಪ್ಪ ಅವರ ಮೂಲಕ ₹5 ಲಕ್ಷ ಹಣ ಕಳುಹಿಸಿಕೊಡುವಂತೆ ಪತ್ರದಲ್ಲಿ ಬೇಡಿಕೆ ಇಡಲಾಗಿದೆ.
READ THIS : ಸೋಲಾರ್ ಪಾರ್ಕ್ ಕಾರ್ಮಿಕರ ಜೀವಕ್ಕೆ ಕುತ್ತು | ಕನಿಷ್ಠ ಮೂಲಭೂತ ಸೌಕರ್ಯ ಕೂಡ ಇಲ್ವಂತೆ

ಪತ್ರದಲ್ಲಿ ಏನಿದೆ?
ಇನ್ನು ಪತ್ರದಲ್ಲಿ ‘ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ, ದೇವನ್ನ ದಳಂ, ಆಂಧ್ರ ಪ್ರದೇಶ’ ಎಂಬ ಉಲ್ಲೇಖವಿದೆ. ಗಂಗಸಾಗರ ಸಮೀಪದ ಪೊನ್ನಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಿಕಲಬಂಡೆ ಗ್ರಾಮದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿರುವ ಪತ್ರ ಬರಹಗಾರರು, ಉಪ್ಪಾರ ವೆಂಕಟೇಶ್ ಎಂಬುವವರ ಪರವಾಗಿ ತಾವು ಮಧ್ಯಪ್ರವೇಶಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಕನಿಕಲಬಂಡೆ ಗ್ರಾಮದಲ್ಲಿ ದೌರ್ಜನ್ಯ ನಡೆಸುತ್ತಿರುವವರ ಮಾಹಿತಿ ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದೇ ವೇಳೆ ಪಕ್ಷದ ಬೆಳವಣಿಗೆಗೆ ಸಹಕರಿಸುವಂತೆ ಭೂಷಪ್ಪ ಅವರಿಗೆ ₹5 ಲಕ್ಷ ನೀಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.
ಹಣ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಹಾಗೂ ಈ ವಿಷಯವನ್ನು ಪೊಲೀಸರಿಗೆ ಅಥವಾ ಬೇರೆಯವರಿಗೆ ತಿಳಿಸಿದರೆ ಅನಾಹುತ ಎದುರಾಗಲಿದೆ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.

ಪೊಲೀಸರಿಗೆ ದೂರು
ತೋಟದ ಬಳಿ ಹೋಗಿದ್ದ ವೇಳೆ ರೈತ ಮುತ್ತಕುಂಟ್ಲ ಭೂಷಪ್ಪ ಅವರಿಗೆ ಗೇಟ್ಗೆ ಅಂಟಿಸಿದ್ದ ಪತ್ರ ಸಿಕ್ಕಿದ್ದು, ನಿಜವಾಗಿಯೂ ಅದೇ ಸಂಘಟನೆಯ ಪತ್ರವೇ ಅಥವಾ ಅವರ ಹೆಸರಿನಲ್ಲಿ ಯಾರಾದರೂ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಪಾವಗಡ ಪೊಲೀಸ್ ಠಾಣೆಗೆ ದೂರು ಸಲ್ಲಿದ್ದಾರೆ.
MUST WATCH : ತುಮಕೂರು ಗ್ರಾಮಾಂತರಕ್ಕಿಲ್ಲ ರಸ್ತೆಭಾಗ್ಯ – ಶಾಸಕರ ವಿರುದ್ಧ ಗ್ರಾಮಸ್ಥರ ಆಕ್ರೋಶ.!





