ಹಣದ ವಿಚಾರಕ್ಕೆ ಅಳಿಯಂದಿರ ಜಗಳ – ಕತ್ತರಿಯಿಂದ ಇರಿದು ವ್ಯಕ್ತಿಯ Murder

ಹಣದ ವಿಚಾರಕ್ಕೆ ಒಂದೇ ಮನೆಯ ಅಳಿಯಂದಿರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಮಹಮದ್ ಸಿದ್ದಿಕ್ (33) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿಯನ್ನು ಸುಜೀತ್ (29) ಎಂದು ತಿಳಿದುಬಂದಿದೆ.
ಕತ್ತರಿಯಿಂದ ಇರಿದು ವ್ಯಕ್ತಿಯ ಕೊಲೆ!
ಸುಮಾರು ಒಂದು ವರ್ಷದ ಹಿಂದೆ ದಿವ್ಯಾ ಅವರಿಗೆ ಅವರ ಅಕ್ಕ ರೇಷ್ಮಾ ಅವರು ₹50 ಸಾವಿರ ಸಾಲವಾಗಿ ನೀಡಿದ್ದರು ಎನ್ನಲಾಗಿದೆ. ಈ ಹಣವನ್ನು ವಾಪಸ್ ನೀಡುವಂತೆ ರೇಷ್ಮಾ ಅವರು ತಂಗಿ ದಿವ್ಯಾ ಅವರನ್ನು ಕೇಳಿದ್ದರು. ಇದೇ ಹಣದ ವಿಚಾರವಾಗಿ ರೇಷ್ಮಾ ಅವರ ಪತಿ ಮಹಮದ್ ಸಿದ್ದಿಕ್ ಹಾಗೂ ದಿವ್ಯಾ ಅವರ ಪತಿ ಸುಜೀತ್ ನಡುವೆ ವಾಗ್ವಾದ ಆರಂಭವಾಗಿದೆ.
READ THIS : 8 ತಿಂಗಳ ಹಿಂದೆ ಮಿಸ್ಸಿಂಗ್ ಆದ ಇಬ್ಬರು ಯುವತಿಯರು ಪತ್ತೆ! ಇಷ್ಟು ದಿನ ಎಲ್ಲಿದ್ರು?

ವಾಗ್ವಾದ ತಾರಕಕ್ಕೇರಿದ ವೇಳೆ ಸುಜೀತ್ ತನ್ನ ಬಳಿಯಿದ್ದ ಕತ್ತರಿಯಿಂದ ಮಹಮದ್ ಸಿದ್ದಿಕ್ ಅವರಿಗೆ ಹಲವು ಬಾರಿ ಇರಿದಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಿದ್ದಿಕ್ ಅವರನ್ನು ಅರೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
Murder – ಪೊಲೀಸರಿಂದ ಪರಿಶೀಲನೆ
ಆದರೆ ಸಿದ್ದಿಕ್ ಅವರ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಮದ್ ಸಿದ್ದಿಕ್ ಮೃತಪಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಅರೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

MUST WATCH : MRPಗಿಂತ ಹೆಚ್ಚಿನ ಹಣ ವಸೂಲಿ – ವೈನ್ಸ್ ವಿರುದ್ಧ ಮದ್ಯಪ್ರಿಯರು ಕೆಂಡ.!




