
ಹೂವಿನ ಅಲಂಕಾರಕ್ಕೆ 90 ಲಕ್ಷ, ಡಾನ್ಸ್ ಮಾಡೋಕೆ 80 ಲಕ್ಷ – ಹಾಸನಾಂಬ ಜಾತ್ರೆಯ ಖರ್ಚು ಕೇಳಿ ಬೆಚ್ಚಿಬಿದ್ದ REVANNA !
ಹಾಸನಾಂಬ ಜಾತ್ರಾ ಮಹೋತ್ಸವ ಆರಂಭಕ್ಕೂ ಮುನ್ನವೇ ಖರ್ಚು-ವೆಚ್ಚದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಲಿ ಸಚಿವ ಶಿವಲಿಂಗೇಗೌಡ ಅವರ ಬಳಿಕ ಇದೀಗ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕೂಡ ಜಿಲ್ಲಾಡಳಿತದ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೂವಿನ ಅಲಂಕಾರಕ್ಕೆ 90 ಲಕ್ಷ, ಡ್ಯಾನ್ಸ್ ಕಾರ್ಯಕ್ರಮಕ್ಕೆ 80 ಲಕ್ಷ, ಕಂಟ್ರೋಲ್ ರೂಂಗೆ 50 ಲಕ್ಷ ರೂಪಾಯಿ ಖರ್ಚು ಮಾಡುತ್ತಿರುವುದಾಗಿ ಆರೋಪಿಸಿರುವ ರೇವಣ್ಣ, ಇಷ್ಟೊಂದು ಹಣ ಖರ್ಚು ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
ಹಣದ ಬಗ್ಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪ್ರಶ್ನೆ
ಹೌದು.. ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಜಾತ್ರೆಯ ವಿವಿಧ ಕಾರ್ಯಕ್ರಮಗಳಿಗೆ ಮೀಸಲಿಟ್ಟಿರುವ ಹಣದ ಬಗ್ಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪ್ರಶ್ನೆ ಎತ್ತಿದ್ದಾರೆ.

ಹೂವಿನ ಅಲಂಕಾರಕ್ಕೆ 90 ಲಕ್ಷ
ಇನ್ನು ಹಾಸನಾಂಬ ದೇವಾಲಯದ ಹೂವಿನ ಅಲಂಕಾರಕ್ಕೆ 90 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ರೇವಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಕ್ತರಿಗೆ ತಿಳಿಸಿದ್ದರೆ ಅವರೇ ಹೂವಿನ ಅಲಂಕಾರ ಮಾಡಿಸಿಕೊಡುತ್ತಿದ್ದರು. ಬರಗಾಲದ ಸಂದರ್ಭದಲ್ಲಿ ದೇವರ ಹಣ ಬಳಸಿ ಫಲಪುಷ್ಪ ಪ್ರದರ್ಶನ ನಡೆಸುವ ಅಗತ್ಯವೇನಿದೆ..? ರೈತರು ಸಂಕಷ್ಟದಲ್ಲಿರುವಾಗ ಇಷ್ಟೊಂದು ವೆಚ್ಚ ಯಾಕೆ ಎಂದು ಪ್ರಶ್ನಿಸಿದ್ದಾರೆ.
READ THIS : ಮಧ್ಯಂತರ ತಡೆಯಾಜ್ಞೆ ರದ್ದು- H.D. Revannaಗೆ ಹೈಕೋರ್ಟ್ನಿಂದ ಬಿಗ್ ಶಾಕ್.!

ಡಾನ್ಸ್ ಮಾಡೋಕೆ 80 ಲಕ್ಷ
ಕಂಟ್ರೋಲ್ ರೂಂಗೆ 50 ಲಕ್ಷ ರೂ. ಮೀಸಲಿಟ್ಟಿರುವುದಕ್ಕೂ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೆಚ್ಚದ ಬಗ್ಗೆ ಸಚಿವರೇ ತಲೆ ಚಚ್ಚಿಕೊಳ್ಳುತ್ತಿದ್ದರು. ಹಾಗಾದರೆ ಸಚಿವರ ಮಾತಿಗೆ ಬೆಲೆ ಇಲ್ಲದಂತಾಯಿತು. ಡಾನ್ಸ್ ಕಾರ್ಯಕ್ರಮಕ್ಕೆ 80 ಲಕ್ಷ ಅಂತಿದ್ದಾರೆ. ಲ್ಲಾ ಉಸ್ತುವಾರಿ ಸಚಿವರನ್ನು ಹೊಗಳಲು ಇಂತಹ ಕಾರ್ಯಕ್ರಮಗಳನ್ನ ರೂಪಿಸಲಾಗಿದೆಯೇ?ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ, ಡಿಸಿಎಂ ಬಂದು ಹೋಗಲು 4 ಲಕ್ಷ
ಇನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬಂದು ಹೋಗಲು ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದೂ ರೇವಣ್ಣ ಆರೋಪಿಸಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಆಹ್ವಾನ ಪತ್ರಿಕೆ ಹಾಗೂ ವಿವಿಧ ಕಾರ್ಯಕ್ರಮಗಳ ಆಯೋಜನೆ ಕುರಿತು ಪ್ರಶ್ನೆ ಎತ್ತಿದ್ದಾರೆ. ನಿರ್ಮಿತಿ ಕೇಂದ್ರದ ಮೂಲಕ ನಡೆಯುತ್ತಿರುವ ಕೆಲಸಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

MUST WATCH : ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶ* ಪತ್ತೆ…. ಕೊ * ಎಂದು ಕುಟುಂಬಸ್ಥರ ಆರೋಪ




