BREAKING : ತುಮಕೂರು ಮಹಾನಗರ ಪಾಲಿಕೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ

ತುಮಕೂರು ಮಹಾನಗರ ಪಾಲಿಕೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಗರದ ಶಿರಾ ಗೇಟ್ ಸಮೀಪದ IDSMT ಬಡಾವಣೆಯ ನಿವೇಶನಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಪಾಲಿಕೆ ಕಚೇರಿಗೆ ಆಗಮಿಸಿರುವ ಆರು ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಪಾಲಿಕೆ ಅಧಿಕಾರಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗ್ತಿದೆ.
ಪಾಲಿಕೆಯ ಹಳೆಯ ಕಚೇರಿಯ ಜೋನ್-1 ವಿಭಾಗದಲ್ಲಿ ಪರಿಶೀಲನೆ
ಹೌದು.. ತುಮಕೂರು ಮಹಾನಗರ ಪಾಲಿಕೆಯ ಹಳೆಯ ಕಚೇರಿಯ ಜೋನ್-1 ವಿಭಾಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. IDSMT ಬಡಾವಣೆಯ ನಿವೇಶನಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು, ಪಾಲಿಕೆಯ ಸಿಬ್ಬಂದಿಯಿಂದಲೂ ಅಗತ್ಯ ಮಾಹಿತಿ ಪಡೆಯುತ್ತಿದ್ದಾರೆ.

READ THIS : ಮಹಾನಗರ ಪಾಲಿಕೆಗೆ DC ದಿಢೀರ್ ಭೇಟಿ – ಅಧಿಕಾರಿಗಳಿಗೆ ಖಡಕ್ ಸೂಚನೆ
BREAKING – IDSMT ಬಡಾವಣೆಯ ನಿವೇಶನಗಳ ಅಕ್ರಮ ಆರೋಪ
ಇನ್ನು ತುಮಕೂರು ನಗರದ ಶಿರಾಗೇಟ್ ಸಮೀಪವಿರುವ IDSMT ಬಡಾವಣೆಯ ನಿವೇಶನಗಳ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇದೀಗ ಈ ಆರೋಪಗಳ ಹಿನ್ನೆಲೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಮತ್ತೊಂದೆಡೆ IDSMT ನಿವೇಶನಗಳ ಅಕ್ರಮ ಆರೋಪದ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಈ ಹಿಂದೆಯೇ ನಿರಂತರವಾಗಿ ಸುದ್ದಿಗಳನ್ನು ಪ್ರಸಾರ ಮಾಡಿತ್ತು. ನಿವೇಶನಗಳ ವಿಚಾರದಲ್ಲಿ ಕೇಳಿಬಂದಿದ್ದ ಆರೋಪಗಳು ಹಾಗೂ ದೂರುಗಳ ಕುರಿತು ವರದಿ ಮಾಡಿತ್ತು.
ಇನ್ನು ಲೋಕಾಯುಕ್ತ ಅಧಿಕಾರಿಗಳು ಯಾವೆಲ್ಲ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ..? ನಿವೇಶನಗಳಿಗೆ ಸಂಬಂಧಿಸಿದಂತೆ ಯಾವ ಮಾಹಿತಿಯನ್ನು ಸಂಗ್ರಹಿಸಿದ್ದಾರೆ..? ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

MUST WATCH : 4 ನಿಮಿಷದಲ್ಲೇ 277 PHOTO CLICK – ತುಮಕೂರಿನ ಯುವತಿಗೆ IBR ಗೌರವ




