
BENGALURU : ಖಾಸಗಿ ಆಸ್ಪತ್ರೆಗಳಿಗೆ ಬಿಗ್ ಶಾಕ್ – ಡೆಡ್ಬಾಡಿ ಮೇಲೆ ಬಿಲ್ ವಸೂಲಿ ಬಂದ್
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ವೇಳೆ ರೋಗಿ ಮೃತಪಟ್ಟರೆ, ಬಾಕಿ ಬಿಲ್ ಪಾವತಿಸುವವರೆಗೂ ಮೃತದೇಹ ನೀಡುವುದಿಲ್ಲ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಚಿಕಿತ್ಸೆಯ ಬಾಕಿ ಹಣ ವಸೂಲಿಗಾಗಿ ಮೃತದೇಹ ತಡೆಹಿಡಿಯುವಂತಿಲ್ಲ ಎಂಬ ನಿಯಮವನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೊಸ ನೀತಿ ರೂಪಿಸಲು ಮುಂದಾಗಿದೆ.
ಬಿಲ್ ಕಟ್ಟಿದ್ರೆ ಮಾತ್ರ ಮೃತದೇಹ ?
ಹೌದು.. ಕುಟುಂಬದ ಸದಸ್ಯರೊಬ್ಬರು ಮೃತಪಟ್ಟ ದುಃಖದಲ್ಲಿರುವ ಸಂಬಂಧಿಕರಿಗೆ ಆಸ್ಪತ್ರೆಯ ಬಿಲ್ ವಿಚಾರ ಮತ್ತಷ್ಟು ಸಂಕಷ್ಟ ತಂದೊಡ್ಡುವ ಪ್ರಕರಣಗಳು ವರದಿಯಾಗುತ್ತಿವೆ.
ಚಿಕಿತ್ಸೆ ವೆಚ್ಚ ಬಾಕಿ ಇದೆ ಎಂಬ ಕಾರಣಕ್ಕೆ ಮೃತದೇಹ ಹಸ್ತಾಂತರ ವಿಳಂಬವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಆಸ್ಪತ್ರೆಗಳ ಬಿಲ್ಲಿಂಗ್ ವ್ಯವಸ್ಥೆಗೆ ಹೊಸ ಮಾರ್ಗಸೂಚಿ?
ಇನ್ನು ರೋಗಿ ಮೃತಪಟ್ಟ ಬಳಿಕ ಆಸ್ಪತ್ರೆಯ ಬಾಕಿ ಬಿಲ್ ಪಾವತಿಸದಿದ್ದರೆ ಮೃತದೇಹ ಹಸ್ತಾಂತರ ಮಾಡುವುದಿಲ್ಲ ಎಂಬ ಷರತ್ತು ವಿಧಿಸುವುದಕ್ಕೆ ಕಡಿವಾಣ ಹಾಕುವುದು ಉದ್ದೇಶವಾಗಿದೆ. ಮೃತದೇಹ ಹಸ್ತಾಂತರ ಹಾಗೂ ಚಿಕಿತ್ಸಾ ವೆಚ್ಚ ವಸೂಲಿ ಎರಡನ್ನೂ ಪ್ರತ್ಯೇಕವಾಗಿ ನಿರ್ವಹಿಸುವಂತೆ ಹೊಸ ನೀತಿಯಲ್ಲಿ ಸ್ಪಷ್ಟ ನಿಯಮಗಳನ್ನು ರೂಪಿಸುವ ಸಾಧ್ಯತೆ ಇದೆ. ಆದರೆ ಅಂತಿಮ ಮಾರ್ಗಸೂಚಿಗಳು ಪ್ರಕಟವಾದ ಬಳಿಕವಷ್ಟೇ ಅದರ ವಿವರಗಳು ತಿಳಿಯಲಿವೆ.
READ THIS : ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಮರ್ಡರ್! ವೈಯಕ್ತಿಕ ದ್ವೇಷನಾ?

ಖಾಸಗಿ ಆಸ್ಪತ್ರೆಗಳ ವಿರುದ್ಧದ ದೂರುಗಳಿಗೆ ಕಡಿವಾಣ
ಇನ್ನು ಬಾಕಿ ಬಿಲ್ಗಾಗಿ ಮೃತದೇಹ ತಡೆಹಿಡಿಯುವ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ವಿಚಾರವೂ ಚರ್ಚೆಯಲ್ಲಿದೆ ಎಂದು ತಿಳಿದುಬಂದಿದೆ. ಆದರೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ, ದಂಡ ಅಥವಾ ಪ್ರಕರಣ ದಾಖಲಿಸುವ ಬಗ್ಗೆ ಯಾವ ನಿಯಮಗಳು ಅನ್ವಯವಾಗುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೊಸ ನೀತಿ ಜಾರಿಯಾದ ಬಳಿಕ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ.
BENGALURU – ಮೃತದೇಹ ಹಸ್ತಾಂತರ ಪ್ರಕ್ರಿಯೆ ಸರಳಗೊಳಿಸಲು ಚಿಂತನೆ
ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳ ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಹಾಗೂ ಮೃತರ ಕುಟುಂಬಸ್ಥರಿಗೆ ಅನಗತ್ಯ ತೊಂದರೆ ಆಗದಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ಬಾಕಿ ಚಿಕಿತ್ಸಾ ವೆಚ್ಚದ ವಿವಾದದಿಂದ ಮೃತದೇಹ ಹಸ್ತಾಂತರ ವಿಳಂಬವಾಗದಂತೆ ಸ್ಪಷ್ಟ ಮಾರ್ಗಸೂಚಿ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ.

MUST WATCH : ಮುಖ್ಯಮಂತ್ರಿಯಾಗಿ ಏನು ಕಡಿದಾಕಿದ್ಯಾ ಡಿಕೆಶಿ ವಿರುದ್ಧ ಶ್ರೀ ರಾಮುಲು ವಾಗ್ದಾಳಿ




