
ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ MURDER !
ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾರ್ ಬಳಿ ನಡೆದ ಗಲಾಟೆ ವೇಳೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾಪೀಠ ಸರ್ಕಲ್ ಸಮೀಪದ ಭಾರತ್ ಬಾರ್ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಮಂಜು ಅಲಿಯಾಸ್ ಕೋಳಿ ಮಂಜು ಎಂಬಾತ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಮರ್ಡರ್!
ಹೌದು.. ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಬಳಿ ಇರುವ ಭಾರತ್ ಬಾರ್ ಸಮೀಪ ನಿನ್ನೆ ರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಮಂಜು ಅಲಿಯಾಸ್ ಕೋಳಿ ಮಂಜು ಎಂಬಾತನಿಗೆ ಚಾಕುವಿನಿಂದ ಇರಿದು MURDER ಮಾಡಲಾಗಿದೆ. ಇನ್ನು ಗಲಾಟೆ ಯಾವ ವಿಚಾರಕ್ಕೆ ಆರಂಭವಾಯ್ತು..? ಕೊಲೆಗೆ ನಿಖರ ಕಾರಣವೇನು..? ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
READ THIS : ಆಸ್ತಿಗಾಗಿ ತಂದೆಯನ್ನೇ ಕೊಂದ್ಳಾ ಮಗಳು? 2 ತಿಂಗಳ ಬಳಿಕ ಸಮಾಧಿ ಅಗೆದು ಪರೀಕ್ಷೆ

ಕೊಲೆಗೆ ಕಾರಣವೇನು?
ಇನ್ನು ಕೊಲೆಯಾದ ಮಂಜು ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಹೀಗಾಗಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆಯಾ..? ಅಥವಾ ಬಾರ್ ಬಳಿ ನಡೆದ ಗಲಾಟೆಯೇ ಕೊಲೆಗೆ ಕಾರಣವಾಯ್ತಾ..? ಎಂಬ ಪ್ರಶ್ನೆಗಳು ಎದುರಾಗಿದೆ.
MURDER – ಪೊಲೀಸರು ಭೇಟಿ, ಪರಿಶೀಲನೆ
ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

MUST WATCH : ಆಸ್ತಿಗಾಗಿ ತಂದೆಯನ್ನೇ ಕೊಂದ್ಳಾ ಮಗಳು.2 ತಿಂಗಳ ಬಳಿಕ ಸಮಾಧಿ ಅಗೆದು ಪರೀಕ್ಷೆ




