
MURDER : ಆಸ್ತಿ ಆಸೆಗೆ ಹೆತ್ತ ತಂದೆಯನ್ನೇ ಕೊಂದಳಾ ಮಗಳು.? ಎರಡು ತಿಂಗಳ ಬಳಿಕ ಸಮಾಧಿ ಅಗೆದು FSL ಪರೀಕ್ಷೆ
ಆಸ್ತಿಯಾಸೆಗೆ ಸ್ವಂತ ಮಗಳೇ ತಂದೆಯನ್ನ ಕೊಲೆ ಮಾಡಿದ್ದಾಳೆ ಎನ್ನುವ ಆರೋಪ ಕೇಳಿಬಂದಿದ್ದು, ಎರಡು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ವೃದ್ಧರೊಬ್ಬರ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ಮೂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
READ THIS : ರೈಲಿಗೆ ತಲೆಕೊಟ್ಟು ವ್ಯಕ್ತಿ ಸಾವು! ಆತ್ಮಹತ್ಯೆಯೋ, ಕೊಲೆಯೋ?

70–80 ಕೋಟಿ ಆಸ್ತಿಗಾಗಿ ತಂದೆಯ ಕೊಲೆ ಶಂಕೆ
ಮಂಗಳೂರಿನ ಕೊಟ್ಟಾರದ ನಿವಾಸಿ ಆಲ್ಬರ್ಟ್ ರೇಗೋ ಎಂಬುವರು ಜುಲೈ 19ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ರು. ಅಲ್ದೇ ತರಾತುರಿಯಲ್ಲಿ ಅವರ ಅಂತ್ಯಕ್ರಿಯೆಯನ್ನ ಕೂಡ ನಡೆಸಲಾಗಿತ್ತು. ಆದ್ರೆ ಇದೀಗ ಆಲ್ಬರ್ಟ್ ಪುತ್ರಿ ಮಾಯಾ ರೇಗೋ ವಿರುದ್ಧ ಮೃತರ ಆಪ್ತ ಸ್ನೇಹಿತರು ಕೊಲೆ ಶಂಕೆ ವ್ಯಕ್ತಪಡಿಸಿ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ದೇ ಆಲ್ಬರ್ಟ್ ರೇಗೋ ಅವರಿಗೆ ಸುಮಾರು 70ರಿಂದ 80 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದ್ದು. ಆಸ್ತಿಗಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದು, ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಪಾತ್ರವಿದೆ ಎಂದೂ ಆರೋಪಿಸಿದ್ದಾರೆ.

MURDER – ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ತೆಗೆದು ಪರೀಕ್ಷೆ
ಇನ್ನು ನ್ಯಾಯಾಲಯದ ಆದೇಶದಂತೆ ಮಂಗಳೂರು ತಹಶೀಲ್ದಾರ್ ಹಾಗೂ ಉರ್ವ ಪೊಲೀಸರ ಸಮ್ಮುಖದಲ್ಲಿ ದೇರೆಬೈಲ್ ಚರ್ಚ್ನ ಸಮಾಧಿಯಿಂದ ಆಲ್ಬರ್ಟ್ ರೇಗೋ ಅವರ ಮೃತದೇಹದ ಅವಶೇಷಗಳನ್ನು ಹೊರತೆಗೆದು ವಿಧಿವಿಜ್ಞಾನ ತಜ್ಞರು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿ ಬಂದ ಬಳಿಕ ಸಾವಿನ ನೈಜ ಕಾರಣ ತಿಳಿದುಬರಬೇಕಿದೆ.

MUST WATCH : ರಾಜ್ಯದಲ್ಲಿ ಕ್ರೈಂ ಕಂಟ್ರೋಲ್ ಮಾಡೋಕೆ ಬೆಂಗಳೂರಲ್ಲಿ ಕಮಾಂಡ್ ಸೆಂಟರ್.!




