DHARMASTHALA ಬುರುಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸ್ ದಾಖಲೆ ಒಂದು, ಪಂಚಾಯತ್ ದಾಖಲೆ ಮತ್ತೊಂದು? 30 ಮೃತದೇಹಗಳ ಲೆಕ್ಕದಲ್ಲಿ ವ್ಯತ್ಯಾಸ?

ರಾಜ್ಯಾದ್ಯಂತ ಕುತೂಹಲ ಮೂಡಿಸಿರುವ ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಸ್ಟೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಸರ್ಕಾರಕ್ಕೆ ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ, ಧರ್ಮಸ್ಥಳ ಗ್ರಾಮದ ಅಸ್ವಾಭಾವಿಕ ಸಾವು (UDR) ಪ್ರಕರಣಗಳ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದಾಗಿ ಉಲ್ಲೇಖಿಸಲಾಗಿದೆ.
1998ರಿಂದ 2014ರವರೆಗಿನ ದಾಖಲೆಗಳ ಪರಿಶೀಲನೆ
SIT ಪರಿಶೀಲನೆಯ ಪ್ರಕಾರ, 1998ರಿಂದ 2014ರವರೆಗಿನ 16 ವರ್ಷಗಳ ಅವಧಿಯ ದಾಖಲೆಗಳನ್ನು ಪರಿಶೀಲಿಸಿದಾಗ DHARMASTHALA ಗ್ರಾಮ ಪಂಚಾಯಿತಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಲಾಗಿದೆ.

ಪೊಲೀಸ್ ದಾಖಲೆ ಒಂದು, ಪಂಚಾಯತ್ ದಾಖಲೆ ಮತ್ತೊಂದು?
ಗ್ರಾಮ ಪಂಚಾಯಿತಿ ದಾಖಲೆಗಳ ಪ್ರಕಾರ, ಈ ಅವಧಿಯಲ್ಲಿ ಧರ್ಮಸ್ಥಳ ವ್ಯಾಪ್ತಿಯಲ್ಲಿ 1,510 ಮೃತದೇಹಗಳನ್ನು ದಫನ ಮಾಡಲಾಗಿದೆ ಎಂದು ದಾಖಲಾಗಿದೆ. ಮತ್ತೊಂದೆಡೆ, ಧರ್ಮಸ್ಥಳ ಪೊಲೀಸ್ ಠಾಣೆಯ ಅಧಿಕೃತ ರಿಜಿಸ್ಟರ್ನಲ್ಲಿ 1,480 UDR ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಇದರಿಂದ ಎರಡೂ ದಾಖಲೆಗಳ ನಡುವೆ 30 ಪ್ರಕರಣಗಳ ವ್ಯತ್ಯಾಸ ಕಂಡುಬಂದಿದೆ. ಈ 30 ಮೃತದೇಹಗಳಿಗೆ ಸಂಬಂಧಿಸಿದ ಮಾಹಿತಿಯು ಪೊಲೀಸ್ ಠಾಣೆಯ ದಾಖಲೆಗಳಲ್ಲಿ ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
READ THIS : ಧರ್ಮಸ್ಥಳ ಬುರುಡೆ ಕೇಸ್ – ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಅಸ್ಥಿಪಂಜರ FSL ಗೆ ರವಾನೆ

ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ
ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ತನಿಖೆಗೆ ಸಂಬಂಧಿಸಿದ ವರದಿಯನ್ನು ತರಿಸಿಕೊಂಡು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. SITಯ ಪ್ರಸ್ತುತ ತನಿಖಾ ವ್ಯಾಪ್ತಿಗೆ ಈ 30 ಪ್ರಕರಣಗಳು ಸ್ವಯಂಚಾಲಿತವಾಗಿ ಒಳಪಡುವುದಿಲ್ಲ ಎಂಬ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿ SIT ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಮಹಿಳಾ ಆಯೋಗ ಒತ್ತಾಯಿಸಿದೆ.
ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳು, ಪೊಲೀಸ್ ರಿಜಿಸ್ಟರ್ಗಳು, ಗ್ರಾಮ ಪಂಚಾಯತ್ ಮರಣ ನೋಂದಣಿ ಪುಸ್ತಕಗಳು ಹಾಗೂ ವೈದ್ಯಕೀಯ ವರದಿಗಳು ದುರುಪಯೋಗವಾಗದಂತೆ ಸುರಕ್ಷಿತವಾಗಿಡಲು ಆಡಳಿತಾತ್ಮಕ ನಿರ್ದೇಶನ ನೀಡಬೇಕೆಂದು ಮಹಿಳಾ ಆಯೋಗ ಆಗ್ರಹಿಸಿದೆ.

MUST WATCH : ಈ ಊರಂದ್ರೆ ನನಗೆ ಬಲು ಪ್ರೀತಿ ಚಾಮರಾಜನಗರದ ಬಗ್ಗೆ ಡಿಕೆಶಿ ಮೆಚ್ಚುಗೆ




