ಪಾಗಲ್ ಪ್ರೇಮಿಯಿಂದ ಯುವತಿಯ ಬರ್ಬರ Murder – ಪ್ರೀತಿ ನಿರಾಕರಿಸಿದ್ದಕ್ಕೆ ಬಸ್ ನಿಲ್ದಾಣದಲ್ಲೇ ಮಚ್ಚಿನಿಂದ ದಾಳಿ

ಪ್ರೀತಿ ನಿರಾಕರಿಸಿದ್ದಕ್ಕೆ ಬಸ್ ನಿಲ್ದಾಣದಲ್ಲೇ ಪಾಗಲ್ ಪ್ರೇಮಿಯೊಬ್ಬ, ಸಾರ್ವಜನಿಕರ ಎದುರಲ್ಲೇ ಯುವತಿಯ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಎಸ್ಕೇಪ್ ಆಗಿದ್ದು, ಗಂಭೀರ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ. ರೋಡ್ನ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹಾಡಹಗಲೇ ಪ್ರೇಯಸಿಯ ಬರ್ಬರ ಹತ್ಯೆ!
ಇನ್ನು ಮೃತ ಯುವತಿಯನ್ನ ಕಕ್ಕೆಪದವು ನಿವಾಸಿ ಲಾವಣ್ಯ ಎಂದು ಗುರುತಿಸಲಾಗಿದ್ದು, ಮೃತ ಲಾವಣ್ಯಳ ದೂರದ ಸಂಬಂಧಿ ಚೇತನ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಲಾವಣ್ಯ ಮತ್ತು ಚೇತನ್ ಇಬ್ಬರೂ ಪ್ರೀತಿ ಮಾಡ್ತಿದ್ರು ಎನ್ನಲಾಗಿದ್ದು, ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಬ್ರೇಕಪ್ ಆಗಿತ್ತಂತೆ. ಆದ್ರೆ ಚೇತನ್ ಮಾತ್ರ ಲಾವಣ್ಯಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಲಾವಣ್ಯಳನ್ನ ಹಿಂಬಾಲಿಸಿ ಬಂದ ಚೇತನ್, ಬಸ್ಸಿನಿಂದ ಕೆಳಗಿಳಿಸಿ ಬಸ್ ನಿಲ್ದಾಣದಲ್ಲೇ ಹಾಡಹಗಲೇ ಆಕೆಯ ಮೇಲೆ ಮಚ್ಚಿನಿಂದ ಯದ್ವಾತದ್ವಾ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನು ಓದಿ : ನಾಯಿ ಕಟ್ಟೋ ಹಗ್ಗದಿಂದ ಗರ್ಭಿಣಿ ಪತ್ನಿಯ ಜೀವ ತೆಗೆದ ಗಂಡ!

Murder – ಪ್ರಿಯಕರ ಅರೆಸ್ಟ್!
ಕೂಡಲೇ ಸ್ಥಳೀಯರು ಲಾವಣ್ಯಳನ್ನ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ನಗರ ಠಾಣೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಕೂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ನಡೆದ 24 ಗಂಟೆಯೊಳಗೇ ಪೊಲೀಸರು ಕಾರ್ಯಪ್ರವೃತ್ತರಾಗಿ, ಆರೋಪಿಯನ್ನು ಮಂಗಳೂರು ಬಳಿಯ ವಾಮಂಜೂರು ಪಚ್ಚನಾಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ನೋಡಿ : CMಗೆ ಡೈಲಾಗ್ ಹೇಳೋದು ಬಿಟ್ಟು – ರೈತರ ಪರ ನಿಲ್ಲಿ ಎಂದ VIJAYENDRA




