ಬೆಚ್ಚಿ ಬೀಳಿಸೋ ಘಟನೆ : ಬೆಂಗಳೂರಲ್ಲಿ 2 ವರ್ಷದ ಮಗು ಅನುಮಾನಾಸ್ಪದ ಸಾವು

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಎರಡು ವರ್ಷದ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಲಿವ್ ಇನ್ನಲ್ಲಿದ್ದ ತಂದೆ, ತಾಯಿ ಮೇಲೆ ಶಂಕೆ ವ್ಯಕ್ತವಾಗಿದೆ.
ಮಗು ಸಾವು – ಲಿವ್ ಇನ್ನಲ್ಲಿದ್ದ ತಂದೆ, ತಾಯಿ ಮೇಲೆ ಶಂಕೆ
ಲಿವ್ ಇನ್ನಲ್ಲಿದ್ದ ಜೇಸನ್ ಆಂಥೋನಿ ಮತ್ತು ರೋಸ್ಲಿನ್ಯ ಮಗಳು 2 ವರ್ಷದ ಕಾರ್ಲೆಟ್ ಡೈಸಿ ಮೃತ ಕಂದಮ್ಮ. ಮೊನ್ನೆ ಇದ್ದಕ್ಕಿದ್ದಂತೆ ಮಗುವಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಸಾವನ್ನಪ್ಪಿರೋದಾಗಿ ಪೋಷಕರು ತಿಳಿಸಿದ್ದಾರೆ. ಆದರೆ ಮಗುವಿನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದುಕೊಂಡಿದೆ. ಇನ್ನು ಘಟನೆ ಸಂಬಂಧ ಮಗುವಿನ ಸಾವಿಗೆ ರೋಸ್ಲಿನ್ ಸ್ನೇಹಿತೆ ಟ್ವಿಸ್ಟ್ ಕೊಟ್ಟಿದ್ದಾರೆ.
ಇದನ್ನು ಓದಿ : ಮೊದಲ ಮಹಡಿಯಿಂದ ಬಿದ್ದು 2 ವರ್ಷದ ಮಗು ದಾರುಣ ಸಾವು..!!

ಮಗುವಿಗೆ ತಾಯಿ ಹೊಡೆಯುತ್ತಿದ್ದರು
ಮಗು ಸಾವಿನ ಕುರಿತಂತೆ ದಂಪತಿಗಳ ಸ್ನೇಹಿತೆಯೇ ದೂರು ಕೊಟ್ಟಿದ್ದಾರೆ. ಮಗುವಿನ ತಾಯಿ ಮಗುವಿಗೆ ಆಗಾಗ ಹೊಡೆಯುತ್ತಿದ್ದುದನ್ನು ತಾನು ನೋಡಿದ್ದೇನೆ ಎಂದು ಸ್ನೇಹಿತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಮಗುವಿನ ದೇಹದ ಮೇಲೆ ಹಲವು ಗಾಯಗಳ ಗುರುತುಗಳಿದ್ದವು ಎಂದು ಹೇಳಿದ್ದಾರೆ.
2 ವರ್ಷದ ಮಗು ಸಾವು – ಪ್ರಕರಣ ದಾಖಲು
ಮಗುವಿನ ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ರಹಸ್ಯ ಬಯಲಾಗಲಿದ್ದು, ಸದ್ಯ ದೂರಿನನ್ವಯ ಬಿಎನ್ಎಸ್ಎಸ್ (BNSS) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : ತುಮಕೂರಿನಲ್ಲಿ ಚುರುಕಾಗಿದೆ SIR ಕಾರ್ಯ – ಅರ್ಜಿ ಭರ್ತಿಗೆ ತೊಂದ್ರೆ ಆದ್ರೆ ಹೀಗೆ ಮಾಡಿ




