Murder : ಕ್ಷಣಿಕ ಕೋಪಕ್ಕೆ ಎರಡು ಜೀವ ಬಲಿ: ನಾಯಿ ಬೆಲ್ಟ್ʼನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಂದ ಬಳಿಕ ಪತಿ ಆತ್ಮಹತ್ಯೆ!

ಕೌಟುಂಬಿಕ ಕಲಹ ದುರಂತದಲ್ಲಿ ಅಂತ್ಯಗೊಂಡ ಘಟನೆ ನಗರದ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿ, ಬಳಿಕ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಎರಡು ಜೀವ ಬಲಿ!
ಮೃತರನ್ನು ಮೂಲತಃ ಉತ್ತರ ಪ್ರದೇಶದವರಾದ ಮನೋಜ್ ಮತ್ತು ಸ್ವಪ್ನಾ ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ, ಸಿಕೆ ಅಚ್ಚುಕಟ್ಟು ಪ್ರದೇಶದಲ್ಲಿ ಮನೋಜ್ ಅವರ ತಂದೆ-ತಾಯಿಯೊಂದಿಗೆ ಜಂಟಿ ಕುಟುಂಬದಲ್ಲಿ ವಾಸಿಸುತ್ತಿದ್ದರು. ಮನೋಜ್ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನು ಓದಿ : ಅಣ್ಣನ ಪ್ರೀತಿ ನಿರಾಕರಿಸಿದಕ್ಕೆ ತಮ್ಮನಿಂದಲೇ ಯುವತಿಯ ಹತ್ಯೆ!

ನಡೆದಿದ್ದೇನು..?
ಕಳೆದ ನಾಲ್ಕು ದಿನಗಳಿಂದ ಮನೋಜ್ ಕೆಲಸಕ್ಕೆ ತೆರಳದೆ ಮನೆಯಲ್ಲೇ ಇದ್ದರು. ಇದೇ ವೇಳೆ ದಂಪತಿಯ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಪದೇ ಪದೇ ಜಗಳ ನಡೆಯುತ್ತಿತ್ತು. ಇಂದು ಮಧ್ಯಾಹ್ನ ಜಗಳ ತೀವ್ರ ಸ್ವರೂಪ ಪಡೆದಿದೆ. ಕೋಪದ ಭರದಲ್ಲಿ ಮನೋಜ್ ಮನೆಯಲ್ಲಿದ್ದ ನಾಯಿಗೆ ಬಳಸುವ ನೈಲಾನ್ ಬೆಲ್ಟ್ನಿಂದ ಪತ್ನಿ ಸ್ವಪ್ನಾ ಅವರ ಕುತ್ತಿಗೆಯನ್ನು ಬಿಗಿದಿದ್ದು, ಉಸಿರುಗಟ್ಟಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪತ್ನಿ ಮೃತಪಟ್ಟಿರುವುದನ್ನು ಬಳಿಕ ಮನೋಜ್, ಅದೇ ನಾಯಿಯ ನೈಲಾನ್ ಹಗ್ಗವನ್ನು ಬಳಸಿ ಮನೆಯ ಕೋಣೆಯ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Murder – ಪ್ರಕರಣ ದಾಖಲು
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಿಕೆ ಅಚ್ಚುಕಟ್ಟು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ನೋಡಿ : ಶಾಲೆಯೋ ಅಪಾಯದ ಕಟ್ಟಡವೋ? – ಜೀವಭಯದಲ್ಲೇ ನಡೀತಿದೆ ಮಕ್ಕಳಿಗೆ ಪಾಠ




