ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ತಮ್ಮನಿಂದ ಕಾನೂನು ವಿದ್ಯಾರ್ಥಿನಿಯ Murder – ವಿಚ್ಛೇದಿತ ಪ್ರಿಯಕರ ಸೇರಿ ಇಬ್ಬರು ಅಂದರ್

ಅಣ್ಣನ ಪ್ರೀತಿ ನಿರಾಕರಿಸಿದ ಯುವತಿಯನ್ನು ಆತನ ತಮ್ಮ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಮೃತ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ ಯುವತಿ. ಜು. 13 ರಂದು ಯುವತಿಗೆ ಚಾಕು ಇರಿಯಲಾಗಿತ್ತು. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅಮೃತಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಇದೀಗ ಕೊಲೆಯಾದ ಅಮೃತ ಪೋಷಕರು ಅಮೃತಾಳ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ಕಾನೂನು ವಿದ್ಯಾರ್ಥಿನಿಯ ಹತ್ಯೆ
ನಾಲ್ಕನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ಅಮೃತಾ, ಹೆಚ್ಎಎಲ್ ಕೋಡಿಚಿಕ್ಕನಹಳ್ಳಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಇನ್ನು ಪ್ರಕರಣ ಸಂಬಂಧಿ ಅಮೃತಾಳ ಪ್ರಿಯಕರ ಧನುಷ್ ಹಾಗೂ ಆತನ ಸಹೋದರ ಸೂರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ : ಮದುವೆಯಾದ ನಾಲ್ಕೇ ತಿಂಗಳಿಗೆ ಶಿಕ್ಷಕಿ ಆತ್ಮಹತ್ಯೆ

ಈಗಾಗಲೇ ಧನುಷ್ಗೆ ಮದುವೆಯಾಗಿ ವಿಚ್ಚೇದನ
ಮೂರು ವರ್ಷಗಳ ಹಿಂದೆ ಓಂ ಶಕ್ತಿ ಮಾಲೆ ಧರಿಸುವ ವೇಳೆ ಧನುಷ್ ಮತ್ತು ಅಮೃತಾ ಪರಿಚಯವಾಗಿ, ಬಳಿಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಧನುಷ್ಗೆ ಈಗಾಗಲೇ ಮದುವೆಯಾಗಿದ್ದು, ವಿಚ್ಛೇದನವಾಗಿರುವುದರ ಜೊತೆಗೆ ಒಂದು ಮಗು ಇರುವ ವಿಚಾರವನ್ನು ಆತ ಅಮೃತಾಳಿಂದ ಮುಚ್ಚಿಟ್ಟಿದ್ದ ಎನ್ನಲಾಗಿದೆ. ಈ ಸತ್ಯ ತಿಳಿದ ನಂತರ ಅಮೃತಾ ಧನುಷ್ನಿಂದ ದೂರವಾಗಿದ್ದಳು.
ತಮ್ಮನಿಂದಲೇ ಯುವತಿಯ ಬರ್ಬರ Murder
ಇನ್ನು ಇದ್ರಿಂದ ಕೋಪಗೊಂಡ ಧನುಷ್ ತಮ್ಮ ಸೂರ್ಯ, “ಅಣ್ಣನ ಪ್ರೀತಿಯನ್ನು ನಿರಾಕರಿಸಿದವಳನ್ನು ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ. ಜುಲೈ 13ರಂದು ಸಂಜೆ ಅಮೃತಾಳ ಮನೆಯ ಬಳಿ ತೆರಳಿದ ಆರೋಪಿಗಳು ಗಲಾಟೆ ನಡೆಸಿ, ಆಕೆಯ ಬೆನ್ನು ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಅಮೃತಾಳನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ಅಮೃತಾ, ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಸಂಜೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ನೋಡಿ : ಶಿರಾ ನಗರದಲ್ಲಿ ಮನೆ ಹಂಚಿಕೆ ವಿವಾದ – ಕೊಳಗೇರಿ ಮಂಡಳಿಯಿಂದ ನಡೀತಾ ಗೋಲ್ಮಾಲ್.?




