ಮಂಗಳೂರಿನಿಂದ ಮಂತ್ರಾಲಯಕ್ಕೆ ನೇರ ಸಂಪರ್ಕ; ಜೂನ್ ಪೂರ್ತಿ ಓಡಲಿದೆ 24 ಬೋಗಿಗಳ ಬೃಹತ್ ವಿಶೇಷ Train !

ಜೂನ್ ತಿಂಗಳಲ್ಲಿ ಪ್ರವಾಸ ಹಾಗೂ ಉದ್ಯೋಗದ ನಿಮಿತ್ತ ರೈಲುಗಳಲ್ಲಿ ಹೆಚ್ಚಾಗಿರುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸಿಹಿ ಸುದ್ದಿ ನೀಡಿದೆ.
ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಹೆಚ್ಚುವರಿ ಸೀಟುಗಳ ಬೇಡಿಕೆಯನ್ನು ಪೂರೈಸಲು ನಾಲ್ಕು ವಾರಗಳ ಕಾಲ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸೇವೆಯನ್ನು ಘೋಷಿಸಲಾಗಿದೆ.
ಜೂನ್ ಪೂರ್ತಿ ಓಡಲಿದೆ 24 ಬೋಗಿಗಳ ಬೃಹತ್ ವಿಶೇಷ ರೈಲು!
ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 07097 ಹೈದರಾಬಾದ್–ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ಜೂನ್ 3ರಿಂದ ಜೂನ್ 24ರವರೆಗೆ ಪ್ರತಿ ಬುಧವಾರ ಸಂಚಾರ ಮಾಡಲಿದೆ.
ಈ ರೈಲು ಹೈದರಾಬಾದ್ನಿಂದ ಮುಂಜಾನೆ 4:20ಕ್ಕೆ ಹೊರಟು, ಮರುದಿನ ಬೆಳಗ್ಗೆ 9:30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಇನ್ನೊಂದೆಡೆ, 07098 ಮಂಗಳೂರು ಸೆಂಟ್ರಲ್–ಹೈದರಾಬಾದ್ ವಿಶೇಷ ಎಕ್ಸ್ಪ್ರೆಸ್ ಜೂನ್ 4ರಿಂದ ಜೂನ್ 25ರವರೆಗೆ ಪ್ರತಿ ಗುರುವಾರ ಸಂಜೆ 8 ಗಂಟೆಗೆ ಮಂಗಳೂರಿನಿಂದ ಹೊರಟು, ಶನಿವಾರ ಮುಂಜಾನೆ 4 ಗಂಟೆಗೆ ಹೈದರಾಬಾದ್ ತಲುಪಲಿದೆ.
ಇದನ್ನು ಓದಿ : ವಾರಾಂತ್ಯದಲ್ಲಿ ಬೆಂಗಳೂರು-ಮೈಸೂರು ನಡುವೆ ವಿಶೇಷ ರೈಲು

ಈ ವಿಶೇಷ Train ನಲ್ಲಿ ಒಟ್ಟು 24 ಬೋಗಿಗಳು
ಪ್ರಯಾಣಿಕರ ಬಜೆಟ್ ಹಾಗೂ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲಿನಲ್ಲಿ ಒಟ್ಟು 24 ಬೋಗಿಗಳನ್ನು ಅಳವಡಿಸಲಾಗಿದೆ.
ಇದರಲ್ಲಿ 3 ಎಸಿ 2-ಟೈರ್ ಕೋಚ್ಗಳು, 5 ಎಸಿ 3-ಟೈರ್ ಕೋಚ್ಗಳು, 10 ಸ್ಲೀಪರ್ ಕ್ಲಾಸ್ ಕೋಚ್ಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಕೋಚ್ಗಳು ಹಾಗೂ 2 ಲಗೇಜ್ ಮತ್ತು ಬ್ರೇಕ್ ವ್ಯಾನ್ಗಳು ಇರಲಿವೆ.

ಪ್ರಮುಖ ನಿಲ್ದಾಣಗಳು
ಈ ವಿಶೇಷ ರೈಲು ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ಸೇಡಂ, ಯಾದಗಿರಿ, ರಾಯಚೂರು, ಮಂತ್ರಾಲಯಂ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಸೇರಿದಂತೆ ಬೆಂಗಳೂರಿನ ಯೆಲಹಂಕ
ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ಪಾಲ್ಘಾಟ್, ಕೋಜಿಕೋಡ್, ಕಣ್ಣೂರು ಹಾಗೂ ಕಾಸರಗೋಡು ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
ಇದನ್ನು ನೋಡಿ : ನನಗೂ ಸಚಿವ ಸ್ಥಾನ ಕೊಡಿ ಎಂದ ಶಾಸಕ ಬಹಿರಂಗವಾಗಿ ಆಸೆ ಬಿಚ್ಚಿಟ್ಟ ಹೆಚ್.ವಿ ವೆಂಕಟೇಶ್




