
BENGALURU : ಸೋಶಿಯಲ್ ಮೀಡಿಯಾ ಸ್ಟಾರ್, ಗಿಚ್ಚಿ ಗಿಲಿಗಿಲಿ ರೇಷ್ಮಾಗೆ ಕಿರುಕುಳ! ಯೂಟ್ಯೂಬ್ನಲ್ಲಿ ವಿಡಿಯೋ ಹರಿಬಿಟ್ಟವ ಮಾಡಿದ್ದೇನು?
‘ಹಾಯ್ ಫ್ರೆಂಡ್ಸ್’ ಎನ್ನುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿ, ಬಳಿಕ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ರೇಷ್ಮಾಗೆ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೌದು.. ಭದ್ರಾವತಿ ಮೂಲದ ಫಯಾಜ್ ಎಂಬಾತ ತನ್ನನ್ನು ಪದೇಪದೇ ಸಂಪರ್ಕಿಸಿ ಅಸಭ್ಯವಾಗಿ ಮಾತನಾಡುತ್ತಿದ್ದಾನೆ ಎಂದು ರೇಷ್ಮಾ ಆರೋಪಿಸಿದ್ದಾರೆ.
ಸೋಶಿಯಲ್ ಮೀಡಿಯಾ ಮೆಸೇಜ್
ಫಯಾಜ್ ಮೊದಲು ಸೋಶಿಯಲ್ ಮೀಡಿಯಾ ಮೂಲಕ ಮೆಸೇಜ್ ಮಾಡುತ್ತಿದ್ದ. ಬಳಿಕ ಫೋನ್ ಕರೆ ಮಾಡಿ ಅಸಭ್ಯವಾಗಿ ಮಾತನಾಡಲು ಆರಂಭಿಸಿದ್ದಾನೆ ಎನ್ನಲಾಗಿದೆ. ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮದಲ್ಲಿ ರೇಷ್ಮಾ ಭಾಗವಹಿಸುತ್ತಿರುವ ವಿಚಾರ ತಿಳಿದು, ಪ್ರಮೋಶನ್ಗಾಗಿ ಸಂಪರ್ಕಿಸುವ ನೆಪದಲ್ಲಿ ಅವರ ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ. ನಂತರ ಆ ನಂಬರ್ ಅನ್ನು ಇತರರಿಗೂ ಹಂಚಿಕೊಂಡು, ಅವರಿಂದಲೂ ಕರೆ ಮಾಡಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ರೇಷ್ಮಾ ದೂರಿದ್ದಾರೆ.
READ THIS : ಪ್ರಿಯಕರನ ಕಿರುಕುಳ ಆರೋಪ – ಯುವತಿ ದಾರುಣ ಸಾವು?

‘ನಿನ್ನ ರೇಟ್ ಎಷ್ಟು?’
ಪದೇಪದೇ ಕರೆ ಮಾಡಿ ಕಿರುಕುಳ ನೀಡುವುದರ ಜೊತೆಗೆ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಲಾಗುತ್ತಿದೆ ಎಂದು ರೇಷ್ಮಾ ಆರೋಪಿಸಿದ್ದಾರೆ. ತಮ್ಮೊಂದಿಗೆ ನಡೆದ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ನಲ್ಲಿ ಹರಿಬಿಟ್ಟು ಬ್ಲ್ಯಾಕ್ಮೇಲ್ ಮಾಡ್ತಿದ್ದಾನೆ.
ಮುಸ್ಲಿಂ ಆಗಿದ್ರೂ ಹಣೆಗೆ ಯಾಕೆ ಬೊಟ್ಟು ಹಾಕ್ತೀನಿ, ಕನ್ನಡದವರಂತೆ ಯಾಕೆ ರಸ್ತೆಯಲ್ಲಿ ಕುಣೀತಿಯಾ ಅಂತ ರೇಷ್ಮಾಗೆ ಟಾರ್ಚರ್ ಕೊಡ್ತಿದ್ದಾನೆ ಎಂದು ರೇಷ್ಮಾ ಆರೋಪಿಸಿದ್ದಾರೆ.
BENGALURU – ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ರೇಷ್ಮಾ
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ ಬಳಿಕ ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳ ಅವಕಾಶಗಳು ಬರುತ್ತಿವೆ. ಇದೇ ವಿಚಾರ ತಿಳಿದು ಫಯಾಜ್ ತನ್ನ ಸಂಪರ್ಕಕ್ಕೆ ಬಂದಿದ್ದಾನೆ ಎಂದು ರೇಷ್ಮಾ ಹೇಳಿದ್ದಾರೆ.
ಈ ಸಂಬಂಧ ರೇಷ್ಮಾ ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದು, ಸಿಸಿಬಿ ಸೈಬರ್ ಠಾಣೆಗೆ ದೂರು ವರ್ಗಾಯಿಸಲು ಕಮಿಷನರ್ ಕಚೇರಿಯಿಂದ ಸೂಚನೆ ನೀಡಿದ್ದಾರೆ.

MUST WATCH : ಆಸ್ತಿ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ಸವಾಲ್ ವಿಶೇಷ ಅಧಿವೇಶನದಲ್ಲಿ ಚರ್ಚಿಸೋಣ ಎಂದ್ರು




