
Murder ಮಾಡ್ತಿರುವಾಗ್ಲೇ ಹಂತಕರಿಗೆ ಬಂತು ಅಮ್ಮನ ಫೋನ್ ಕಾಲ್! ಬಾಲಕನ ಕಿಡ್ನ್ಯಾಪ್ ಕೇಸ್ನ ಬೆಚ್ಚಿಬೀಳಿಸೋ ವಿಚಾರಗಳು ಬಯಲು
ಯಲಹಂಕದಲ್ಲಿ 13 ವರ್ಷದ ಬಾಲಕ ಪ್ರಜ್ವಲ್ನನ್ನು ಜಾಲಿ ರೈಡ್ಗೆ ಕರೆದೊಯ್ಯುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಸ್ಪೋಟಕ ಅಂಶಗಳು ಬೆಳಕಿಗೆ ಬಂದಿವೆ. ಬಾಲಕನನ್ನು ಅಪಹರಿಸಿ ಹಣ ಪಡೆಯುವ ಉದ್ದೇಶದಿಂದ ಆರೋಪಿ ಭಾಸ್ಕರ್ ಸುಮಾರು 15 ದಿನಗಳ ಹಿಂದೆಯೇ ಕೃತ್ಯಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್!
ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಬಾಲಕನ ಕುಟುಂಬದ ಹಿನ್ನೆಲೆ ಹಾಗೂ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮೊದಲೇ ಮಾಹಿತಿ ಕಲೆಹಾಕಿದ್ದ ಎನ್ನಲಾಗಿದೆ. ಬಳಿಕ ಕುಟುಂಬದವರ ವಿಶ್ವಾಸ ಗಳಿಸಿಕೊಂಡು, ಅದೇ ಪರಿಚಯವನ್ನು ಬಳಸಿಕೊಂಡು ಬಾಲಕನನ್ನು ಮನೆಯಿಂದ ಹೊರಗೆ ಕರೆತರುವ ಯೋಜನೆ ರೂಪಿಸಿದ್ದ ಎಂದು ತಿಳಿದುಬಂದಿದೆ.

ಪಟಾಕಿ ತರಲು ಹೋಗೋಣ ಎಂದು ಕರೆ
ಘಟನೆ ನಡೆದ ದಿನ ಎಂದಿನಂತೆ ಶಾಲೆ ಮುಗಿಸಿ ಪ್ರಜ್ವಲ್ ಸಂಜೆ ಮನೆಗೆ ಮರಳಿದ್ದ. ಈ ವೇಳೆ ಆರೋಪಿ ಭಾಸ್ಕರ್ ಬಾಲಕನನ್ನು ಸಂಪರ್ಕಿಸಿ, ಪಟಾಕಿ ತರಲು ಏಳುಕೊಂಡಲಕ್ಕೆ ಹೋಗೋಣ ಎಂದು ಹೇಳಿದ್ದ ಎನ್ನಲಾಗಿದೆ. ಈ ವಿಚಾರವನ್ನು ತಾಯಿಗೆ ತಿಳಿಸಬಾರದು ಎಂದು ಬಾಲಕನಿಗೆ ಸೂಚಿಸಿದ್ದ ಎನ್ನಲಾಗಿದೆ.
ಬಳಿಕ ಪಕ್ಕದ ಬೀದಿಯಲ್ಲಿ ನಿಲ್ಲಿಸಿದ್ದ ಕಾರಿನ ಕೀಯನ್ನು ಪ್ರಜ್ವಲ್ಗೆ ನೀಡಲಾಗಿದ್ದು, ಸಂಜೆ ಸುಮಾರು 6.45ರ ವೇಳೆಗೆ ಬಾಲಕ ಕಾರಿನಲ್ಲಿ ತೆರಳಿದ್ದಾನೆ ಎನ್ನಲಾಗಿದೆ. ಜಾಲಿ ರೈಡ್ಗೆ ಕರೆದೊಯ್ಯುವ ನೆಪದಲ್ಲಿ ಬಾಲಕನನ್ನು ಕಾರಿನಲ್ಲಿ ಕರೆದೊಯ್ಯಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
READ THIS : ಬಾಲಕನ ಕಿಡ್ನ್ಯಾಪ್ ಮಾಡಿ ಕೊಲೆ – ಪೊಲೀಸರ ಮುಂದೆ ಆರೋಪಿ ಕಥೆ ಕಟ್ಟಿದ್ದೇ ಬೇರೆ!

ಅಪಹರಣದ ಬಳಿಕ ಕೊಲೆ?
ಇನ್ನು ಬಾಲಕನನ್ನು ಕರೆದೊಯ್ದ ಬಳಿಕ ನಡೆದ ಬೆಳವಣಿಗೆಗಳು ಇದೀಗ ಪೊಲೀಸರ ತನಿಖೆಯ ಪ್ರಮುಖ ಅಂಶವಾಗಿವೆ. ಪ್ರಜ್ವಲ್ನನ್ನು ಅಪಹರಿಸಿ ಬಳಿಕ ಕೊಲೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಶ್ರೀಮಂತ ಕುಟುಂಬಗಳ ಮಕ್ಕಳನ್ನು ಅಪಹರಿಸಿ ಹಣ ಪಡೆಯುವ ಉದ್ದೇಶದಿಂದಲೇ ಈ ಕೃತ್ಯಕ್ಕೆ ಮುಂಚಿತವಾಗಿ ಯೋಜನೆ ರೂಪಿಸಲಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸುಮಾರು 15 ದಿನಗಳ ಹಿಂದೆಯೇ ರೂಪಿಸಲಾಗಿದ್ದ ಯೋಜನೆಯಂತೆ ಬಾಲಕನ ಕುಟುಂಬದ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರ ವಿಶ್ವಾಸ ಗಳಿಸಿಕೊಂಡಿದ್ದ ಆರೋಪಿ, ಬಳಿಕ ಬಾಲಕನನ್ನು ಮನೆಯಿಂದ ಹೊರಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ. ಕುಟುಂಬದೊಂದಿಗೆ ಇದ್ದ ಪರಿಚಯ ಹಾಗೂ ವಿಶ್ವಾಸವನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

MUST WATCH : ಜನರಿಗೆ ಮತ್ತೊಂದು ದರ ಏರಿಕೆ ಶಾಕ್ – ತರಕಾರಿ ರೇಟ್ ಕೇಳಿದ್ರೆ ಶಾಕ್ ಆಗ್ತೀರಾ




