
Bank Closed : ಕೆನರಾ ಸೇರಿದಂತೆ 5 ದಿನಗಳ ಕಾಲ ಬ್ಯಾಂಕ್ಗಳು ಬಂದ್!? ಡೇಟ್ ನೋಡಿ ಕೆಲಸ ಪ್ಲಾನ್ ಮಾಡಿ
ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬ್ಯಾಂಕ್ ಗ್ರಾಹಕರಿಗೆ ಸೇವಾ ವ್ಯತ್ಯಯ ಎದುರಾಗುವ ಸಾಧ್ಯತೆಯಿದೆ. ಬ್ಯಾಂಕ್ ನೌಕರರ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26ರಿಂದ ಸತತ ಐದು ದಿನಗಳ ಕಾಲ ಬ್ಯಾಂಕ್ಗಳ ಸಾಮಾನ್ಯ ವಹಿವಾಟಿಗೆ ಅಡಚಣೆಯಾಗಲಿದೆ.
5 ದಿನಗಳ ಕಾಲ ಬ್ಯಾಂಕ್ಗಳು ಬಂದ್!
ಸೆಪ್ಟೆಂಬರ್ 26 ನಾಲ್ಕನೇ ಶನಿವಾರ ಹಾಗೂ ಸೆಪ್ಟೆಂಬರ್ 27 ಭಾನುವಾರವಾಗಿರುವುದರಿಂದ ಬ್ಯಾಂಕ್ಗಳಿಗೆ ಈಗಾಗಲೇ ರಜೆ ಇದೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ 28, 29 ಮತ್ತು 30ರಂದು ಬ್ಯಾಂಕ್ ನೌಕರರು ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಒಟ್ಟು ಐದು ದಿನಗಳ ಕಾಲ ಬ್ಯಾಂಕ್ ಶಾಖೆಗಳಲ್ಲಿ ನೇರ ಸೇವೆಗಳು ವ್ಯತ್ಯಯಗೊಳ್ಳುವ ಸಾಧ್ಯತೆಯಿದೆ.

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಬ್ಯಾಂಕ್ ನೌಕರರ ಸಂಘಟನೆಗಳ ಪ್ರಕಾರ, ಹಲವು ಪ್ರಮುಖ ಬೇಡಿಕೆಗಳ ಕುರಿತು ಕಳೆದ ಎರಡು-ಮೂರು ವರ್ಷಗಳಿಂದ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.
ಆದರೆ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುಷ್ಕರಕ್ಕೆ ಕರೆ ನೀಡಲಾಗಿದೆ ಎನ್ನಲಾಗಿದೆ.
ನೌಕರರ ಪ್ರಮುಖ ಬೇಡಿಕೆಗಳಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ಜಾರಿಗೆ ತರುವುದು ಪ್ರಮುಖವಾಗಿದೆ. ಅಂದರೆ ಶನಿವಾರ ಮತ್ತು ಭಾನುವಾರ ಬ್ಯಾಂಕ್ಗಳಿಗೆ ನಿಯಮಿತ ರಜೆ ನೀಡಬೇಕು ಎಂದು ನೌಕರರು ಒತ್ತಾಯಿಸುತ್ತಿದ್ದಾರೆ.
ಇದರ ಜೊತೆಗೆ ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಪಿಂಚಣಿಯನ್ನು ಪ್ರಸ್ತುತ ವೇತನ ಶ್ರೇಣಿಗೆ ಅನುಗುಣವಾಗಿ ಪರಿಷ್ಕರಿಸಬೇಕು
ಹಾಗೂ ಎಲ್ಲಾ ನಿವೃತ್ತ ಪಿಂಚಣಿದಾರರಿಗೆ ಸಮಾನವಾಗಿ ಅನ್ವಯವಾಗುವ ಏಕರೂಪದ ತುಟ್ಟಿಭತ್ಯೆ ಸೂತ್ರ ಜಾರಿಗೆ ತರಬೇಕು ಎಂಬ ಬೇಡಿಕೆಯೂ ಇದೆ.
READ THIS : ಬ್ಯಾಂಕ್ ವ್ಯವಹಾರ ಇದ್ರೆ ಇಂದೇ ಮುಗಿಸಿಕೊಳ್ಳಿ – 4 ದಿನ Bank Bandh

NPS ಬದಲು ಹಳೆಯ ಪಿಂಚಣಿ ಯೋಜನೆಗೆ ಅವಕಾಶ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ವ್ಯಾಪ್ತಿಯಲ್ಲಿರುವ ಬ್ಯಾಂಕ್ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
ಇದಲ್ಲದೆ, ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂಬುದು ಸಂಘಟನೆಗಳ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.
ಆನ್ಲೈನ್ ಸೇವೆಗಳಿಗೆ ಅಡ್ಡಿಯಿಲ್ಲ
ಮುಷ್ಕರದ ಸಂದರ್ಭದಲ್ಲಿ ಬ್ಯಾಂಕ್ ಶಾಖೆಗಳಿಗೆ ತೆರಳಿ ಮಾಡಬೇಕಾದ ಕೆಲಸಗಳಿಗೆ ತೊಂದರೆಯಾಗುವ ಸಾಧ್ಯತೆಯಿದ್ದರೂ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ UPI ಮೂಲಕದ ಡಿಜಿಟಲ್ ಪಾವತಿ ಸೇವೆಗಳು ಎಂದಿನಂತೆ ಲಭ್ಯವಿರುವ ಸಾಧ್ಯತೆಯಿದೆ.

ಹೀಗಾಗಿ ಖಾತೆ ಸಂಬಂಧಿತ ದಾಖಲೆಗಳ ಸಲ್ಲಿಕೆ, ನಗದು ವ್ಯವಹಾರ ಸೇರಿದಂತೆ ಶಾಖೆಗೆ ನೇರವಾಗಿ ಭೇಟಿ ನೀಡಬೇಕಾದ ಅಗತ್ಯ ಕೆಲಸಗಳನ್ನು ಗ್ರಾಹಕರು ಮುಷ್ಕರಕ್ಕೂ ಮುನ್ನವೇ ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.
ಈ ಹಿಂದೆ ಸೆಪ್ಟೆಂಬರ್ 11ರಂದು ಬ್ಯಾಂಕ್ ನೌಕರರು ದೇಶವ್ಯಾಪಿ ಮುಷ್ಕರ ನಡೆಸಿದ್ದರು. ಇದೀಗ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೊಮ್ಮೆ ಮೂರು ದಿನಗಳ ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದಾರೆ.
MUST WATCH : ಬಂಗಾಳ ಕೊಲ್ಲಿ ಸೈಕ್ಲೋನ್ ಎಫೆಕ್ಟ್ – ಬೆಳೆದು ನಿಂತ ಸೋಯಾಗೆ ಜಲಕಂಟಕ





