
‘ಗ್ಯಾರಂಟಿ ಭ್ರಮೆಯಲ್ಲಿ ಇಡೀ ರಾಜ್ಯದ ಅಭಿವೃದ್ಧಿ ಬಲಿ’: ಎಕ್ಸ್ ಪೋಸ್ಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ JDS ಕಿಡಿ
ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಆರ್ಥಿಕ ಇಲಾಖೆ ಪತ್ರ ವಿಚಾರ ಸಂಬಂಧ ಎಕ್ಸ್ ಖಾತೆ ಮೂಲಕ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ.
ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಸ್ವತಃ ಹಣಕಾಸು ಇಲಾಖೆಯ ಪತ್ರವೇ ಜಗಜ್ಜಾಹೀರು ಮಾಡಿದೆ.
ಸಾಲ ಪಡೆಯಲು ಅವಕಾಶವಿಲ್ಲ
ಸರ್ಕಾರ ಈಗಾಗಲೇ ಸಾಲ ಪಡೆಯುವ ಗರಿಷ್ಠ ಮಿತಿಯನ್ನು ಮೀರಿದ್ದು, ಹೊಸ ಯೋಜನೆಗಳಿಗೆ ಸಾಲ ಪಡೆಯಲು ಅವಕಾಶವಿಲ್ಲ ಎಂದು ಹಣಕಾಸು ಇಲಾಖೆ ಆತಂಕ ವ್ಯಕ್ತಪಡಿಸಿದೆ ಎಂದು ಜೆಡಿಎಸ್ ಹೇಳಿದೆ. ಬಜೆಟ್ ನಿರ್ವಹಣೆಯ ಪ್ರಕಾರ ಆದಾಯ ಕೊರತೆ ಶೂನ್ಯವಾಗಿರಬೇಕಿದ್ದರೂ, ಇದೀಗ ರಾಜ್ಯದ ಆದಾಯ ಕೊರತೆ ₹22,957 ಕೋಟಿಗೆ ತಲುಪಿದೆ ಎಂದು ಪಕ್ಷ ಆರೋಪಿಸಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಎದುರಾಗಿದೆ ಎಂದು ಆರೋಪಿಸಿರುವ ಜೆಡಿಎಸ್, ಗ್ರಾಮೀಣಾಭಿವೃದ್ಧಿ ಇಲಾಖೆಯ ₹10,000 ಕೋಟಿ ವೆಚ್ಚದ 15,000 ಕಿ.ಮೀ. ರಸ್ತೆ ಯೋಜನೆಗೂ ಹಣಕಾಸು ಇಲಾಖೆ ಬ್ರೇಕ್ ನೀಡಿದೆ.
READ THIS : ನೈಸ್ ರೋಡ್ ಅಕ್ರಮ ಟೋಲ್ ಸಂಗ್ರಹ ವಿಚಾರ – JDS ನಿಯೋಗದಿಂದ ಸಿಎಸ್ಗೆ ಮನವಿ ಸಲ್ಲಿಕೆ

ಬಜೆಟ್ನಲ್ಲಿ ನಯಾಪೈಸೆ ಇಟ್ಟಿಲ್ಲ
ಇದೇ ವೇಳೆ ಲೋಕೋಪಯೋಗಿ ಸೇರಿದಂತೆ ಮೂರು ಇಲಾಖೆಗಳ ವ್ಯಾಪ್ತಿಯಲ್ಲಿ ಗುತ್ತಿಗೆದಾರರಿಗೆ ಪಾವತಿಸಬೇಕಿರುವ ಬಾಕಿ ಮೊತ್ತ ₹36,136 ಕೋಟಿಯಷ್ಟಿದೆ ಎಂದು ಜೆಡಿಎಸ್ ತಿಳಿಸಿದೆ. ಬರಗಾಲದಿಂದ ಸಂಕಷ್ಟದಲ್ಲಿರುವ ಕೃಷಿ ಪಂಪ್ಸೆಟ್ಗಳಿಗೆ ನೀಡಬೇಕಿರುವ ₹4,500ರಿಂದ ₹5,000 ಕೋಟಿ ಹೆಚ್ಚುವರಿ ಸಹಾಯಧನವೂ ಬಾಕಿ ಉಳಿದಿದೆ ಎಂದು ಪಕ್ಷ ಆರೋಪಿಸಿದೆ. ಮುಂದಿನ ಸಾಲುಗಳಲ್ಲಿ ಹೊಸ ಯೋಜನೆಗಳ ಘೋಷಣೆಗೆ ₹11,000 ಕೋಟಿ ಬೇಡಿಕೆ ಇದ್ದರೂ ಬಜೆಟ್ನಲ್ಲಿ ನಯಾಪೈಸೆ ಇಟ್ಟಿಲ್ಲ ಎಂದು JDS ಕಿಡಿ ಕಾರಿದೆ.
ಗ್ಯಾರಂಟಿ ಭ್ರಮೆಯಲ್ಲಿ ಇಡೀ ರಾಜ್ಯದ ಅಭಿವೃದ್ಧಿ ಬಲಿ
ಇಲಾಖೆಯ ಅಧಿಕಾರಿಗಳು ವಾಸ್ತವ ಸ್ಥಿತಿ ಮುಂದಿಟ್ಟರೆ ‘ನಾನೇ ಆರ್ಥಿಕ ಸಚಿವ, ಯಾವ ಕಾರ್ಯಕ್ರಮ ನಿಲ್ಲಿಸಬೇಕು ಅಂತ ಗೊತ್ತು’ ಎಂಬ ಡಿಕೆಶಿ ಅವರ ಉಡಾಫೆಯ ಸಮರ್ಥನೆ ದಿವಾಳಿತನದ ಪರಮಾವಧಿ.
ಗ್ಯಾರಂಟಿ ಭ್ರಮೆಯಲ್ಲಿ ಇಡೀ ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟಿರುವ ಈ ದಿವಾಳಿ ಕಾಂಗ್ರೆಸ್ ಆಡಳಿತಕ್ಕೆ ಜನರೇ ತಕ್ಕ ಪಾಠ ಕಲಿಸಬೇಕಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

MUST WATCH : ಬೆಳೆನೂ ಇಲ್ಲಾ ರಾಗಿನೂ ಇಲ್ಲಾ ದುಡ್ಡು ಇಲ್ಲಾ – ರೈತರು ಏನ್ ಮಾಡ್ಬೇಕು ಎಂದ ಎಂ.ಟಿ.ಕೃಷ್ಣಪ್ಪ




