ಇಂದು ಬಿಡುಗಡೆಯಾಗಬೇಕಿದ್ದ ರಾಮಾಯಣ ಟ್ರೇಲರ್ ರಿಲೀಸ್ ರದ್ದು

ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಇಂದು (ಜುಲೈ 24) ಬಿಡುಗಡೆಯಾಗಬೇಕಿದ್ದರೂ, ನಿರ್ಮಾಪಕರು ಅದರ ಬಿಡುಗಡೆಯನ್ನು ಮುಂದೂಡಿದ್ದಾರೆ. ಈ ಕುರಿತು ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರಾಮಾಯಣ ಟ್ರೇಲರ್ ರಿಲೀಸ್ ರದ್ದು
ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ ಜೊತೆಗಿನ ಜಾಗತಿಕ ಪಾಲುದಾರಿಕೆಯ ಹಿನ್ನೆಲೆಯಲ್ಲಿ Trailer ಅನ್ನು ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಈ ಕಾರಣದಿಂದಾಗಿ ಟ್ರೇಲರ್ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಇದನ್ನು ಓದಿ : ಬಹುನಿರೀಕ್ಷಿತ ರಾಮಾಯಣ ಟ್ರೇಲರ್ ರಿಲೀಸ್ಗೆ ಡೇಟ್ ಫಿಕ್ಸ್

ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದೇನು?
ಈ ಬೆಳವಣಿಗೆಯನ್ನು ಘೋಷಿಸಿದ ಮಲ್ಹೋತ್ರಾ, ಇದು ಭಾರತೀಯ ಸಿನಿಮಾಗೆ ಒಂದು ಹೆಗ್ಗುರುತು ಕ್ಷಣ ಎಂದು ಬಣ್ಣಿಸಿದರು ಮತ್ತು ರಾಮಾಯಣವನ್ನು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಕೊಂಡೊಯ್ಯುವ ಅವರ ಬಹುದಿನಗಳ ಕನಸು ಅಂತಿಮವಾಗಿ ನನಸಾಗುತ್ತಿದೆ ಎಂದು ಹೇಳಿದರು.
“ಇಂದು ನಮ್ಮ ರಾಮಾಯಣಕ್ಕೆ ಬಹಳ ವಿಶೇಷವಾದ ಕ್ಷಣ . ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ನೊಂದಿಗಿನ ನಮ್ಮ ಪಾಲುದಾರಿಕೆಯೊಂದಿಗೆ ರಾಮಾಯಣವನ್ನು ಜಗತ್ತಿಗೆ ಕೊಂಡೊಯ್ಯುವ ನನ್ನ ಕನಸು ಈಗ ವಾಸ್ತವವಾಗಿದೆ” ಎಂದು ಅವರು ಬರೆದಿದ್ದಾರೆ.

Trailer ಯಾವಾಗ ಬಿಡುಗಡೆ?
ನಿತೇಶ್ ತಿವಾರಿ ನಿರ್ದೇಶನದ ಈ ಬಿಗ್ಬಜೆಟ್ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಅಭಿನಯಿಸಿದ್ದಾರೆ. ಭಾರತೀಯ ಸಿನಿರಂಗದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ರಾಮಾಯಣ’ ಟ್ರೇಲರ್ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ನಿರ್ಮಾಪಕರು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

ಇದನ್ನು ನೋಡಿ : CONGRESS ಕಾರ್ಯಕರ್ತರಿಂದ ಮೊಟ್ಟೆ ಎಸೆತ ಕೇಸ್ – ತುಮಕೂರಿನಲ್ಲಿ BJP ನಾಯಕರ ಆಕ್ರೋಶದ ಕಿಚ್ಚು




