ಸತತ ಏರಿಕೆ ಬಳಿಕ ಶುಕ್ರವಾರ ಭರ್ಜರಿ ಕುಸಿತ ಕಂಡ Gold Rate

ಕಳೆದ ಕೆಲವು ದಿನಗಳಿಂದ ನಿರಂತರ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು (ಶುಕ್ರವಾರ) ಇಳಿಕೆಯಾಗಿದೆ. 24 ಕ್ಯಾರಟ್ ಹಾಗೂ 22 ಕ್ಯಾರಟ್ ಚಿನ್ನದ ದರದಲ್ಲಿ ಗ್ರಾಂಗೆ ₹270 ಇಳಿಕೆ ದಾಖಲಾಗಿದೆ. ಬೆಳ್ಳಿ ಬೆಲೆಯೂ ಗ್ರಾಂಗೆ ₹5 ಕಡಿಮೆಯಾಗಿದೆ.
ಪ್ರಸ್ತುತ ದೇಶದಲ್ಲಿ 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹14,433 ಆಗಿದ್ದು, 22 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹13,230ಕ್ಕೆ ಇಳಿದಿದೆ. 18 ಕ್ಯಾರಟ್ ಚಿನ್ನದ 1 ಗ್ರಾಂ ₹10,825 ದರದಲ್ಲಿದೆ. ಬೆಳ್ಳಿ ಗ್ರಾಂಗೆ ₹235 ದರದಲ್ಲಿ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ಇಂದಿನ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,433
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,230
- ಬೆಳ್ಳಿ (1 ಗ್ರಾಂ): ₹235
ಇದನ್ನು ಓದಿ: ಚಿನ್ನದ ದರದಲ್ಲಿ ಮತ್ತೆ ಏರಿಕೆ – ಇಂದು ಹೆಚ್ಚಾಗಿದ್ದು ಇಷ್ಟು

ಪ್ರಮುಖ ನಗರಗಳ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಬೆಂಗಳೂರು – ₹13,230
- ಚೆನ್ನೈ – ₹13,230
- ಮುಂಬೈ – ₹13,230
- ದೆಹಲಿ – ₹13,245
- ಕೋಲ್ಕತಾ – ₹13,230
- ಕೇರಳ – ₹13,230
- ಅಹಮದಾಬಾದ್ – ₹13,235
- ಜೈಪುರ್ – ₹13,245
- ಲಕ್ನೋ – ₹13,245
- ಭುವನೇಶ್ವರ್ – ₹13,230
ವಿದೇಶಗಳಲ್ಲೂ Gold Rate ಇಳಿಕೆ
ದುಬೈ, ಅಮೆರಿಕ, ಮಲೇಷ್ಯಾ, ಸಿಂಗಾಪುರ, ಕತಾರ್, ಸೌದಿ ಅರೇಬಿಯಾ, ಓಮನ್ ಹಾಗೂ ಕುವೇತ್ ಸೇರಿದಂತೆ ಹಲವು ದೇಶಗಳಲ್ಲೂ ಚಿನ್ನದ ಬೆಲೆ ಇಳಿಕೆಯಾಗಿದೆ.

ಸೂಚನೆ: ಇಲ್ಲಿ ನೀಡಿರುವ ದರಗಳು ಪ್ರಮುಖ ಆಭರಣ ಮಳಿಗೆಗಳಿಂದ ಸಂಗ್ರಹಿಸಲಾದ ಮಾಹಿತಿಯಾಗಿದ್ದು, ಜಿಎಸ್ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸಬಹುದು.
ಇದನ್ನು ನೋಡಿ : ತುಮಕೂರು ಅಧಿಕಾರಿಗಳ ರೋಚಕ ಕಾರ್ಯಾಚರಣೆ – ಸಿನಿಮಾ ಸ್ಟೈಲ್ ನಲ್ಲಿ ಜೀತಪದ್ಧತಿಯಲ್ಲಿದ್ದವರ ರಕ್ಷಣೆ




