ಕೊಲೆ ಕೇಸ್ ನಲ್ಲಿ ನಟ Darshan ಗೆ ಇಂದು ಬಿಗ್ ಡೇ : ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್ನಲ್ಲಿ ನಿರ್ಧಾರ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಇಂದು ಮಹತ್ವದ ದಿನವಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಪ್ರದೋಷ್ ಸಲ್ಲಿಸಿರುವ ಮಾಫಿ (ಅಪ್ರೂವರ್) ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ ನಗರ ಸಿವಿಲ್ ಮತ್ತು ಸೇಶನ್ಸ್ ನ್ಯಾಯಾಲಯದ CCH-59 ಪೀಠ ಇಂದು ತನ್ನ ಪ್ರಮುಖ ನಿರ್ಧಾರ ಅಥವಾ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.
ಆರೋಪಿ ದರ್ಶನ್ಗೆ ಇಂದು ಬಿಗ್ ಡೇ
ಪ್ರದೂಷ್, ಪ್ರಕರಣದಲ್ಲಿ ಮಾಫಿ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿ, ಅವರನ್ನು ಸರ್ಕಾರಿ ಅಭಿಯೋಗದ ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದ್ದರು.
ತನಿಖೆ ಹಾಗೂ ಪ್ರಕರಣದ ವಿಚಾರಣೆಗೆ ಪ್ರದೋಷ್ ಅವರ ಸಾಕ್ಷ್ಯ ಮಹತ್ವದ್ದಾಗಬಹುದು ಎಂಬ ನಿಲುವನ್ನು ಸರ್ಕಾರಿ ಅಭಿಯೋಜಕರು ಕೋರ್ಟ್ ಮುಂದೆ ಮಂಡಿಸಿದ್ದಾರೆ.
ಇದನ್ನು ಓದಿ : ಆರೋಪಿ Darshan ಗೆ ಎದುರಾಯ್ತು ಮಾಫಿ ಸಾಕ್ಷಿ ಭೀತಿ!

ಕೋರ್ಟ್ ಆದೇಶದತ್ತ ಎಲ್ಲರ ಚಿತ್ತ
ಆದರೆ, ಪ್ರದೋಷ್ ಅವರ ಮಾಫಿ ಅರ್ಜಿಗೆ ನಟ Darshan ಪರ ಜ್ಯೇಷ್ಠ ವಕೀಲ ಹಷ್ಮತ್ ಪಾಷಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಅವರು ಸುದೀರ್ಘ ವಾದ ಮಂಡಿಸಿದ್ದಾರೆ.
ಈ ಅರ್ಜಿಗಳ ಸ್ವೀಕಾರ ಮತ್ತು ಅದರ ಮೇಲಿನ ವಾದ-ಪ್ರತಿವಾದಕ್ಕೆ ಮತ್ತಷ್ಟು ಅವಕಾಶ ನೀಡಬೇಕೇ ಅಥವಾ ಅರ್ಜಿಯ ಕುರಿತು ಮುಂದಿನ ಹಂತಕ್ಕೆ ತೆರಳಬೇಕೇ ಎಂಬ ಬಗ್ಗೆ ನ್ಯಾಯಾಧೀಶರು ಇಂದು ಸ್ಪಷ್ಟ ನಿರ್ದೇಶನ ನೀಡಲಿದ್ದಾರೆ.
ವಿಚಾರಣೆಯಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ
ಒಂದು ವೇಳೆ ನ್ಯಾಯಾಲಯವು ಪ್ರದೋಷ್ ಅವರ ಮಾಫಿ ಅರ್ಜಿಯನ್ನು ಮಾನ್ಯಗೊಳಿಸಿ, ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯನ್ನಾಗಿ ಮಾಡುವ ಪ್ರಕ್ರಿಯೆಗೆ ಅವಕಾಶ ನೀಡಿದರೆ,
ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆಯಿದೆ.

Darshan ಕಾನೂನು ಹೋರಾಟಕ್ಕೆ ಹಿನ್ನಡೆ?
ಆರೋಪಿಯಾಗಿದ್ದ ವ್ಯಕ್ತಿಯೇ ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿ ಬದಲಾದರೆ, ಅದು ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳ ಕಾನೂನು ಹೋರಾಟಕ್ಕೆ ಹಿನ್ನಡೆಯಾಗುವ ಆತಂಕವಿದೆ.
ಹೀಗಾಗಿ ಇಂದು CCH-59 ಕೋರ್ಟ್ ನೀಡಲಿರುವ ಆದೇಶವು ಇಡೀ ಪ್ರಕರಣದ ಮುಂದಿನ ಭವಿಷ್ಯ ಮತ್ತು ದಿಕ್ಕನ್ನು ನಿರ್ಧರಿಸಲಿದ್ದು, ಭಾರಿ ಕುತೂಹಲ ಮೂಡಿಸಿದೆ.
ಇದನ್ನು ನೋಡಿ : ತುಮಕೂರಲ್ಲಿ ಇಂದಿನಿಂದ ಬರ ಅಧ್ಯಯನ – 9 ತಾಲೂಕು ಸುತ್ತಲಿರುವ ಡಿಸಿಎಂ ಪರಂ




