ಹಸುಗೂಸನ್ನ ಬಾವಿಗೆ ಎಸೆದ ಕಿರಾತಕರು – ಮಗುವನ್ನು Murder ಮಾಡಿ ದೇವರು ಕೊಂಡೊಯ್ದ ಅಂತ ಕಥೆ ಕಟ್ಟಿದ್ರಾ ಮನೆಮಂದಿ.?

ಹೆತ್ತ ತಾಯಿಯ ಮಡಿಲಲ್ಲಿ ಇದ್ರೆ ಮಗು ಸುರಕ್ಷಿತವಾಗಿರುತ್ತೆ ಅನ್ನೋ ನಂಬಿಕೆ ಎಲ್ಲರದ್ದು. ಆದ್ರೆ ಬೀದರ್ನಲ್ಲಿ ನಡೆದಿರೋ ಈ ಘಟನೆ ಕೇಳಿದ್ರೆ ಎಂಥವರಿಗೂ ಎದೆ ಝಲ್ ಅನ್ನಿಸದೇ ಇರಲ್ಲ.
ಹುಟ್ಟಿ ಕೇವಲ ಎರಡು ತಿಂಗಳಾಗಿದ್ದ ಮುದ್ದು ಕಂದಮ್ಮನನ್ನೇ ಹೆತ್ತ ತಾಯಿ ಸೇರಿದಂತೆ ಕುಟುಂಬಸ್ಥರೇ ಬಾವಿಗೆಸೆದು Murder ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಅಲ್ದೇ ಮಗುವನ್ನ ಕೊಂದು ದೇವರು ಕೊಂಡೊಯ್ದಿದ್ದಾನೆ ಅಂತ ಕಥೆ ಕಟ್ಟಿ ಇಡೀ ಗ್ರಾಮವನ್ನೇ ನಂಬಿಸಲು ಹೊರಟಿದ್ದ ಕುಟುಂಬದ ಅಸಲಿ ಮುಖವಾಡವನ್ನ ಪೊಲೀಸರು ಕಳಚಿದ್ದಾರೆ.

ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಮಗು ಕಾಣೆ
ಇಂತಹದೊಂದು ಬೆಚ್ಚಿಬೀಳಿಸುವ ಘಟನೆ ನಡೆದಿರೋದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮದಲ್ಲಿ.ಮಹಾರಾಷ್ಟ್ರದ ಕವಳಗಡ ಗ್ರಾಮದ ಸಂಜಯ ಎಂಬುವವರ ಪತ್ನಿ ವಾಣಿಶ್ರೀ ಹೆರಿಗೆಗಾಗಿ ತಾಯಿಯ ಮನೆಗೆ ಬಂದಿದ್ರು.
ಎರಡು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ರು. ಆದ್ರೆ ಕಳೆದ ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಮಗು ಕಾಣೆಯಾಗಿರೋದಾಗಿ ಪತಿಗೆ ಫೋನ್ ಮಾಡಿ ಹೇಳಿದ್ದಾಳೆ.
ಇದನ್ನು ಓದಿ : ಶಿವಗಂಗೆ ಬೆಟ್ಟದಲ್ಲಿ ಟೆಕ್ಕಿ ನಾಪತ್ತೆ – ಲ್ಯಾಪ್ಟಾಪ್ನಲ್ಲಿ ಶಾಂತಲಾ ಡ್ರಾಪ್ ಪಾಯಿಂಟ್ ಸರ್ಚ್

ಮಗುವನ್ನು ಕೊಂದು ದೇವರು ಕೊಂಡೊಯ್ದ ಅಂತ ಕಥೆ ಕಟ್ಟಿದ್ರಾ ಮನೆಮಂದಿ.?
ಮಗು ಕಾಣೆಯಾಗಿದೆ ಅನ್ನೋ ಸುದ್ದಿ ತಿಳಿದು ಪತಿ ಸಂಜಯ್ ಗ್ರಾಮಕ್ಕೆ ಬಂದಿದ್ದಾರೆ. ಎಲ್ಲೆಡೆ ಮಗುವನ್ನ ಹುಡುಕಾಡಿದ್ದಾರೆ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಂತಪುರ ಪೊಲೀಸರು ಕುಟುಂಬಸ್ಥರನ್ನ ವಿಚಾರಣೆ ನಡೆಸಿದಾಗ, ಕುಟುಂಬಸ್ಥರು ನೀಡಿದ ಹೇಳಿಕೆಗಳಲ್ಲಿ ಒಂದಕ್ಕೊಂದು ವ್ಯತ್ಯಾಸ ಕಂಡುಬಂದಿದೆ. ಗ್ರಾಮದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಬಾವಿಯಲ್ಲಿ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ವಿಚಾರಣೆ ತೀವ್ರಗೊಳಿಸುತ್ತಿದ್ದಂತೆ ನಡೆಸುತ್ತಿದ್ದಂತೆ ಕುಟುಂಬಸ್ಥರು ಕಟ್ಟಿದ್ದ ದೇವರ ಕಥೆ ಬಯಲಾಗಿದೆ. ಮಗು ಕಾಣೆಯಾಗಿಲ್ಲ. ದೇವರು ಮಗುವನ್ನ ಕೊಂಡೊಯ್ದಿದ್ದಾನೆ ಅಂತ ಕುಟುಂಬಸ್ಥರು ಕಥೆ ಕಟ್ಟಿದ್ದರು ಎನ್ನಲಾಗಿದೆ.

Murder – ಕಂದಮ್ಮನ ಸಾವಿನ ಹಿಂದಿನ ಅಸಲಿ ಕಾರಣವೇನು?
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಗು ತಾಯಿ ವಾಣಿಶ್ರೀ, ಸೋದರ ಮಾವ ಸಂತೋಷ ಮಸ್ಕಲೆ, ಅಜ್ಜ ಬಸಪ್ಪ ಮಸ್ಕಲೆ ಹಾಗೂ ಅಜ್ಜಿ ರತ್ನಮ್ಮ ಅವರನ್ನು ಸಂತಪುರ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಅದೇನೆ ಆಗಲಿ. ಎರಡು ತಿಂಗಳ ಹಸುಗೂಸಿನ ಸಾವಿನ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ತಾಯಿ ಸೇರಿ ನಾಲ್ವರು ಬಂಧನಕ್ಕೊಳಗಾಗಿದ್ದಾರೆ.
ಆದರೆ, ಕಂದಮ್ಮನ ಸಾವಿನ ಹಿಂದಿನ ಅಸಲಿ ಕಾರಣವೇನು ಅನ್ನೋದು ಪೊಲೀಸ್ ತನಿಖೆಯಿಂದಷ್ಟೇ ಬಯಲಾಗಬೇಕಿದೆ.

ಇದನ್ನು ನೋಡಿ : ದೆಹಲಿಯಲ್ಲಿ ಸಚಿವರಿಗೆ ಖಾತೆ ಕ್ಲೈಮಾಕ್ಸ್ – ಹೈಕಮಾಂಡ್ ಭೇಟಿಯಾದ ಸಿಎಂ ಡಿಕೆ




