WPL Champions | ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – 2ನೇ ಬಾರಿಗೆ ಚಾಂಪಿಯನ್ ಕಿರೀಟ; RCB ಹ್ಯಾಟ್ರಿಕ್ ಸಾಧನೆ!

ಮಹಿಳಾಪ್ರೀಮಿಯರ್ಲೀಗ್ (WPL) 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ನಾಯಕಿ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವೋಲ್ ಅವರ ಅಮೋಘ ಬ್ಯಾಟಿಂಗ್ RCB ಗೆಲುವಿಗೆ ಪ್ರಮುಖ ಕಾರಣವಾಯಿತು.
ಈ ಸೋಲಿನೊಂದಿಗೆ ಜೆಮಿಮಾ ರೋಡ್ರಿಗಸ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ ನಾಲ್ಕನೇ ಬಾರಿ ಫೈನಲ್ನಲ್ಲಿ ನಿರಾಸೆ ಅನುಭವಿಸಬೇಕಾಯಿತು. ಬೌಲಿಂಗ್ ವಿಭಾಗದ ವೈಫಲ್ಯ ಡೆಲ್ಲಿಯ ಪಾಲಿಗೆ ಮತ್ತೊಮ್ಮೆ ಶಾಪವಾಗಿ ಪರಿಣಮಿಸಿತು.

ಡೆಲ್ಲಿಕ್ಯಾಪಿಟಲ್ಸ್ ಉತ್ತಮಆರಂಭ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆದಿತು. ಲಿಜೆಲ್ ಲೀ ಆರಂಭಿಕವಾಗಿ ತಂಡಕ್ಕೆ ಚುರುಕು ನೀಡಿದರು. ಅವರ ನಿರ್ಗಮನದ ನಂತರ ನಾಯಕಿ ಜೆಮಿಮಾ ರೋಡ್ರಿಗಸ್ ಕೇವಲ 37 ಎಸೆತಗಳಲ್ಲಿ 57 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಮಧ್ಯಮ ಕ್ರಮಾಂಕದಲ್ಲಿ ಲಾರಾ ವೊಲ್ವಾರ್ಡ್ ಮತ್ತು ಚಿನೆಲ್ಲೆ ಹೆನ್ರಿ 55 ರನ್ಗಳ ಉಪಯುಕ್ತ ಜೊತೆಯಾಟ ನಡೆಸಿದರು. ವೊಲ್ವಾರ್ಡ್ 25 ಎಸೆತಗಳಲ್ಲಿ 44 ರನ್ ಗಳಿಸಿದರೆ, ಹೆನ್ರಿ ಕೇವಲ 15 ಎಸೆತಗಳಲ್ಲಿ ಅಜೇಯ 35 ರನ್ ಚಚ್ಚಿದರು. ಈ ಮೂಲಕ ಡೆಲ್ಲಿ ತಂಡ 203 ರನ್ಗಳ ಬೃಹತ್ ಮೊತ್ತ ದಾಖಲಿಸಿತು.

ಇದನ್ನು ನೋಡಿ : ಪದ್ಮಶ್ರೀ ಪುರಸ್ಕೃತೆಗೆ ಆಡಳಿತದಿಂದ ಅವಮಾನ..!?
ವಿಕೆಟ್ ಕಳೆದುಕೊಂಡು ಹಿನ್ನಡೆ
204 ರನ್ಗಳ ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭದಲ್ಲಿ ಗ್ರೇಸ್ ಹ್ಯಾರಿಸ್ (9) ವಿಕೆಟ್ ಕಳೆದುಕೊಂಡು ಹಿನ್ನಡೆಯಾಯಿತು. ಪವರ್ಪ್ಲೇನಲ್ಲಿ ತಂಡ ಸ್ವಲ್ಪ ಸಂಕಷ್ಟದಲ್ಲಿದ್ದಂತೆ ಕಂಡರೂ, ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವೋಲ್ ಕ್ರೀಸ್ಗೆ ಬಂದ ನಂತರ ಪಂದ್ಯದ ಚಿತ್ರಣವೇ ಬದಲಾಯಿತು.

RCB ಹ್ಯಾಟ್ರಿಕ್ ಸಾಧನೆ!
ಡೆಲ್ಲಿಯ ಯಾವುದೇ ತಂತ್ರಗಳು ಇವರ ಮುಂದೆ ಕೆಲಸ ಮಾಡಲಿಲ್ಲ.ಜಾರ್ಜಿಯಾ ವೋಲ್ 79 ರನ್ ಗಳಿಸಿ ಔಟಾದರೆ, ನಾಯಕಿ ಸ್ಮೃತಿ ಮಂಧಾನ 87 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅಂತ್ಯದಲ್ಲಿ ರಿಚಾ ಘೋಷ್ 6 ರನ್ ಗಳಿಸಿ ಔಟಾದಾಗ ಚಿನೆಲ್ಲೆ ಹೆನ್ರಿ ಡೆಲ್ಲಿಗೆ ಸ್ವಲ್ಪ ಆಸೆ ಮೂಡಿಸಿದರು. ಆದರೆ ನಡಿನ್ ಡಿ ಕ್ಲರ್ಕ್ ಮತ್ತು ರಾಧಾ ಯಾದವ್ ಸಂಯಮದ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲುವಿನ ರನ್ ಹರಿಯುತ್ತಿದ್ದಂತೆ ಆರ್ಸಿಬಿ ಆಟಗಾರರು ಮೈದಾನಕ್ಕೆ ಧಾವಿಸಿ ಸಂಭ್ರಮ ಆಚರಿಸಿದರು. ಇನ್ನೊಂದೆಡೆ ಸತತ ನಾಲ್ಕನೇ ಬಾರಿಯೂ ಫೈನಲ್ ಸೋತ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ತೀವ್ರ ನಿರಾಶೆಗೊಂಡರು.

ಇದನ್ನು ಓದಿ : Dina Bhavishya|ದಿನ ಭವಿಷ್ಯ 6 ಫೆಬ್ರವರಿ 2026




