WPL 2026 : ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಮ್ಯಾಚ್ ಇಂದು ನಡೆಯಲಿದೆ. ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿಗಾಗಿ ಸೆಣಸಾಡಲಿವೆ.

WPL 2026 : ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯ ಇಂದು ನಡೆಯಲಿದ್ದು, RCB ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ.
ವಡೋದರಾದಲ್ಲಿ ನಡೆಯಲಿರುವ ಈ ಪಂದ್ಯವು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ RCB ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಫೈನಲ್ಗೆ ಲಗ್ಗೆ ಇಟ್ಟಿದೆ.
ಎರಡನೇ ಸೀಸನ್ನಲ್ಲಿ ಚಾಂಪಿಯನ್ ಆಗಿದ್ದ ಆರ್ಸಿಬಿ, ಈ ಬಾರಿ ಕೂಡ ಭರ್ಜರಿ ಫಾರ್ಮ್ನಲ್ಲಿದ್ದು, ಸ್ಮೃತಿ ಮಂಧಾನ ಹಾಗೂ ರಿಚಾ ಘೋಷ್ ಅವರಂತಹ ಆಟಗಾರ್ತಿಯರ ಪ್ರದರ್ಶನ ತಂಡದ ಬಲವಾಗಿದೆ.

ಇನ್ನೊಂದೆಡೆ, ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಂತರ ಲಯ ಪಡೆದು ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ.
3 ಬಾರಿ ಫೈನಲ್ ತಲುಪಿದ್ರೂ ಟ್ರೋಫಿ ಗೆಲ್ಲದ ಡೆಲ್ಲಿ ಈ ಬಾರಿ ಚಾಂಪಿಯನ್ ಆಗುವ ತವಕದಲ್ಲಿದೆ. ಡೆಲ್ಲಿ ಪರ ಲಿಜೆಲ್ ಲೀ 9 ಪಂದ್ಯಗಳಲ್ಲಿ 283 ರನ್ ಗಳಿಸಿದ್ದು, ನಂದಿನಿ ಶರ್ಮಾ 16 ವಿಕೆಟ್ ಹಾಗೂ ಶ್ರೀ ಚರಣಿ 14 ವಿಕೆಟ್ ಪಡೆದು ತಂಡದ ಬೌಲಿಂಗ್ ಹೊಣೆ ಹೊತ್ತಿದ್ದಾರೆ.
ಎಲಿಮಿನೇಟರ್ ಪಂದ್ಯದಲ್ಲಿ ಲಿಜೆಲ್ ಲೀ, ಶಫಾಲಿ ವರ್ಮಾ, ಲಾರಾ ವೋಲ್ವಾರ್ಟ್, ನಾಯಕಿ ಜೆಮಿಮಾ ರೊಡ್ರಿಗಸ್ ಹಾಗೂ ಮರಿಜಾನ್ನೆ ಕಪ್ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇದನ್ನೂ ನೋಡಿ : WPL2026 ಫೈನಲ್ಗೆ ಕ್ಷಣಗಣನೆ- RCB vs DC ನಡುವೆ ಟ್ರೋಫಿಗಾಗಿ ಹೈವೋಲ್ಟೇಜ್ ಪೈಪೋಟಿ

RCB ಪರ ಸ್ಮೃತಿ ಮಂಧಾನ 8 ಪಂದ್ಯಗಳಿಂದ 290 ರನ್ ಬಾರಿಸಿದ್ದು, ನ್ಯಾಡಿನ್ ಡೆ ಕ್ಲರ್ಕ್ 15 ವಿಕೆಟ್ ಹಾಗೂ ಲಾರೆನ್ ಬೆಲ್ 12 ವಿಕೆಟ್ ಪಡೆದು ಮಿಂಚಿದ್ದಾರೆ.
2024ರಲ್ಲಿ ಚಾಂಪಿಯನ್ ಆಗಿದ್ದ ಆರ್ಸಿಬಿ ಫ್ರಾಂಚೈಸಿ ಇದೀಗ ಹ್ಯಾಟ್ರಿಕ್ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. ‘ಈ ಸಲವೂ ಕಪ್ ನಮ್ದೇ’ ಎನ್ನುವ ಆರ್ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಒಟ್ಟಿನಲ್ಲಿ RCB–DC ನಡುವಿನ ಈ ಫೈನಲ್ ಪಂದ್ಯವು ರೋಚಕತೆಯಿಂದ ಕೂಡಿದ್ದು, ಈ ಬಾರಿ ಟ್ರೋಫಿ ಯಾರ ಕೈ ಸೇರುತ್ತೆ? ಎಂಬ ಪ್ರಶ್ನೆಗೆ ಇಂದು ರಾತ್ರಿ ಉತ್ತರ ಸಿಗಲಿದೆ.

MUST WATCH : ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಗೊರವಯ್ಯನ ಭವಿಷ್ಯ ವಾಣಿಗೆ ಭಕ್ತರು ಶಾಕ್




