WPL 2026 : ಮಹಿಳಾ ಪ್ರೀಮಿಯರ್ ಲೀಗ್ 2026 ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

WPL 2026 : ಮಹಿಳಾ ಪ್ರೀಮಿಯರ್ ಲೀಗ್ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಟ್ರೋಫಿಗಾಗಿ ಹೈವೋಲ್ಟೇಜ್ ಪೈಪೋಟಿ
ಈ ಹೈವೋಲ್ಟೇಜ್ ಫೈನಲ್ ಪಂದ್ಯ ಫೆಬ್ರವರಿ 5ರ ಗುರುವಾರ ನಡೆಯಲಿದೆ. ಲೀಗ್ ಹಂತದಲ್ಲಿ RCB ಆರು ಪಂದ್ಯಗಳಲ್ಲಿ ಜಯ ಸಾಧಿಸಿ ನೇರವಾಗಿ ಫೈನಲ್ಗೆ ಅರ್ಹತೆ ಪಡೆದಿದೆ.
ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ, ಸತತ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಆದ್ರೆ, ನಾಲ್ಕು ಬಾರಿ ಫೈನಲ್ ಆಡಿದ್ರೂ ಡೆಲ್ಲಿ ತಂಡಕ್ಕೆ ಇದುವರೆಗೆ ಟ್ರೋಫಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ. 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್ನಲ್ಲಿ ಸೋಲಿಸಿ RCB ಚಾಂಪಿಯನ್ ಆಗಿತ್ತು.

ಹೀಗಾಗಿ RCB ತನ್ನ ಚಾಂಪಿಯನ್ ಇತಿಹಾಸವನ್ನು ಮರುಕಳಿಸಲು ಸಜ್ಜಾಗಿದ್ದರೆ, ಡೆಲ್ಲಿ ತಂಡ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಉದ್ದೇಶದಲ್ಲಿದೆ.
ಇದನ್ನೂ ಓದಿ: Team ಇಂಡಿಯಾ ಕಮ್ಬ್ಯಾಕ್ಗೆ ಶ್ರೇಯಸ್ ಅಯ್ಯರ್ ಭರ್ಜರಿ ಸಿದ್ಧತೆ
ಫೈನಲ್ ಎಲ್ಲಿ?
ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯ ಗುಜರಾತ್ನ ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):
ಸ್ಮೃತಿ ಮಂಧಾನ, ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ ಹೇಮಲತಾ.
ಡೆಲ್ಲಿ ಕ್ಯಾಪಿಟಲ್ಸ್ (DC):
ಲಿಜೆಲ್ ಲೀ, ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ಚಿನೆಲ್ಲೆ ಹೆನ್ರಿ, ನಿಕಿ ಪ್ರಸಾದ್, ಸ್ನೇಹ್ ರಾಣಾ, ಮಿನ್ನು ಮಣಿ, ಶ್ರೀ ಚರಣಿ, ನಂದನಿ ಶರ್ಮಾ, ಎಡ್ಲಾ ಸೃಜನಾ, ಪ್ರಗತಿ ಸಿಂಗ್, ಲೂಸಿ ಹ್ಯಾಮಿಲ್ಟನ್, ತಾನಿಯಾ ಭಾಟಿಯಾ, ಅಲಾನಾ ಕಿಂಗ್.

ಟ್ರೋಫಿ ಉಳಿಸಿಕೊಳ್ಳುವ ಕನಸಿನೊಂದಿಗೆ ಆರ್ಸಿಬಿ ಕಣಕ್ಕಿಳಿಯುತ್ತಿದ್ದರೆ, ಮೊದಲ ಬಾರಿ ಚಾಂಪಿಯನ್ ಆಗುವ ಗುರಿಯೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ನಡೆಸಲಿದೆ.
MUST WATCH : ಸಿದ್ದಗಂಗಾ ಮಠದ ಜಾತ್ರೆಗೆ ದಿನಗಣನೆ – ವಸ್ತುಪ್ರದರ್ಶನದ ಬಗ್ಗೆ ಸಮಿತಿ ಮಾಹಿತಿ




