Cricket : ಕಳೆದ ಕೆಲವು ಸಮಯದಿಂದ ಟೆಸ್ಟ್ ಮತ್ತು ಟಿ20 ತಂಡದಿಂದ ದೂರವಿದ್ದ ಶ್ರೇಯಸ್ ಅಯ್ಯರ್ , ಇದೀಗ ಆಲ್ ಫಾರ್ಮೆಟ್ ಪ್ಲೇಯರ್ ಆಗಿ ಕಮ್ಬ್ಯಾಕ್ ಮಾಡಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

Cricket : ಟೀಮ್ ಇಂಡಿಯಾದ ಸ್ಟೈಲಿಶ್ ಬ್ಯಾಟರ್ ಶ್ರೇಯಸ್ ಅಯ್ಯರ್ ಇದೀಗ ಆಲ್ ಫಾರ್ಮೆಟ್ ಪ್ಲೇಯರ್ ಆಗಿ ಬಲಿಷ್ಠ ಕಮ್ಬ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಟಿ20 ವಿಶ್ವಕಪ್ ತಂಡದಲ್ಲಿ ಅಯ್ಯರ್ ಹೆಸರು ಇಲ್ಲದಿದ್ದರೂ, ಅವರು ತೋರಿಸುತ್ತಿರುವ ತಯಾರಿ ಹಾಗೂ ಬದ್ಧತೆ ನೋಡಿದರೆ ಮುಂದಿನ ದಿನಗಳಲ್ಲಿ ಅದೃಷ್ಟ ಖುಲಾಯಿಸುವ ಮುನ್ಸೂಚನೆಯಾ ಎನ್ನಲಾಗುತ್ತಿದೆ.
ವೈರಲ್ ವೀಡಿಯೋಗೆ ಅಭಿಮಾನಿಗಳ ಮೆಚ್ಚುಗೆ
ವಿಶಾಖಪಟ್ಟಣಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ T20 ಪಂದ್ಯದ ಬಳಿಕ, ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದೆ.ವೀಡಿಯೋದಲ್ಲಿ ಶ್ರೇಯಸ್ ನ್ಯೂಜಿಲೆಂಡ್ನ ಸ್ಟಾರ್ ಬ್ಯಾಟರ್ ಡ್ಯಾರೆಲ್ ಮಿಚೆಲ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸುತ್ತಿರುವುದು ಕಾಣಿಸಿದೆ.
ಮಿಚೆಲ್ ಅವರು ಬ್ಯಾಟಿಂಗ್ ಸ್ಟಾನ್ಸ್ ಹಾಗೂ ತಾಂತ್ರಿಕತೆ ಬಗ್ಗೆ ಸಲಹೆ ನೀಡುತ್ತಿದ್ದರೆ, ಅಯ್ಯರ್ ಅದನ್ನು ಅತ್ಯಂತ ಗಂಭೀರವಾಗಿ ಆಲಿಸುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದಿದ್ದರೂ, ತಮ್ಮ ಆಟವನ್ನು ಮತ್ತಷ್ಟು ತೀಕ್ಷ್ಣಗೊಳಿಸಲು ಅಯ್ಯರ್ ತೋರಿಸುತ್ತಿರುವ ಆಸಕ್ತಿ ಅವರ ರನ್ ದಾಹವನ್ನು ಸ್ಪಷ್ಟಪಡಿಸುತ್ತದೆ.
ಇದನ್ನೂ ಓದಿ : ಅಕ್ರಮ ಸಂಬಂಧಕ್ಕೆ ಕೊಲೆ.. ನಡುರಸ್ತೆಯಲ್ಲೇ ಜ್ಯೋತಿಷಿ ಕಮಲಾಕರ್, ಮಹಿಳೆಗೆ ಧರ್ಮದೇಟು.!
ಟಿ20 ಅವಕಾಶಕ್ಕಾಗಿ ಪೈಪೋಟಿ
2024ರಿಂದ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಪರ ಯಾವುದೇ ಟಿ20 ಪಂದ್ಯವನ್ನಾಡಿಲ್ಲ. ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ಗೆ ಮಾತ್ರ ಸೀಮಿತರಾಗಿದ್ದ ಅವರು, ಏಕದಿನ ತಂಡದಲ್ಲಿ ಖಾಯಂ ಸ್ಥಾನ ಹೊಂದಿದ್ದರೂ ಟಿ20 ತಂಡಕ್ಕೆ ಮರಳಲು ಪರದಾಡುತ್ತಿದ್ದಾರೆ.
ಇದೀಗ ವಿಶ್ವಕಪ್ ತಂಡಕ್ಕೆ ಎಂಟ್ರಿ ಪಡೆದು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅಯ್ಯರ್ ತುದಿಗಾಲಲ್ಲಿ ನಿಂತಿದ್ದಾರೆ.
ನಾಯಕತ್ವದ ಆಯ್ಕೆಯಲ್ಲೂ ಅಯ್ಯರ್?
T20 ಬಳಿಕ ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ ಇದೆ. ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ 35 ವರ್ಷ ವಯಸ್ಸಾಗಿದ್ದು, 2028ರ ವಿಶ್ವಕಪ್ ಆಡುವುದು ಅನುಮಾನ ಎನ್ನಲಾಗುತ್ತಿದೆ.
BCCI ಹೊಸ ನಾಯಕನ ಹುಡುಕಾಟ ನಡೆಸುವ ಸಾಧ್ಯತೆ ಹೆಚ್ಚಿದೆ. IPLನಲ್ಲಿ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿರುವ ಶ್ರೇಯಸ್ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ನಾಯಕತ್ವದ ಜವಾಬ್ದಾರಿ ಸಿಕ್ಕರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ.

ಟಿಕೆಟ್ಗಾಗಿ ಪೈಪೋಟಿ
ವಿಶ್ವಕಪ್ ತಂಡದ ಟಿಕೆಟ್ಗಾಗಿ ಇದೀಗ ತಿಲಕ್ ವರ್ಮಾ ಮತ್ತು ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಶುರುವಾಗಿದೆ. ಅಯ್ಯರ್ ಅವರ ಅನುಭವ ತಂಡಕ್ಕೆ ಪ್ಲಸ್ ಪಾಯಿಂಟ್ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
MUST WATCH : ಸಿದ್ದಗಂಗಾ ಮಠದ ಜಾತ್ರೆಗೆ ದಿನಗಣನೆ – ವಸ್ತುಪ್ರದರ್ಶನದ ಬಗ್ಗೆ ಸಮಿತಿ ಮಾಹಿತಿ




