World Record : ಬ್ಯಾಕ್ ಟು ಬ್ಯಾಕ್ 4 ಶತಕ: ಹೊಸ ವಿಶ್ವ ದಾಖಲೆ ಬರೆದ ಜೇಕ್ ಲಿಬ್ಬಿ

ಲಿಸ್ಟ್-ಎ ಕ್ರಿಕೆಟ್ನಲ್ಲಿ ಇಂಗ್ಲೆಂಡ್ನ ಅನುಭವಿ ಬ್ಯಾಟರ್ ಜೇಕ್ ಲಿಬ್ಬಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಮೆಟ್ರೋ ಬ್ಯಾಂಕ್ ಒನ್-ಡೇ ಕಪ್ ಟೂರ್ನಿಯಲ್ಲಿ ವೋರ್ಸೆಸ್ಟರ್ಶೈರ್ ಪರ ಕಣಕ್ಕಿಳಿದಿರುವ ಲಿಬ್ಬಿ ಸತತ ನಾಲ್ಕು ಶತಕಗಳನ್ನು ಸಿಡಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರ
ಸತತ ನಾಲ್ಕು ಭರ್ಜರಿ ಶತಕಗಳ ನೆರವಿನಿಂದ ಲಿಬ್ಬಿ, ಲಿಸ್ಟ್-ಎ ಕ್ರಿಕೆಟ್ನಲ್ಲಿ ಕನಿಷ್ಠ 50 ಇನಿಂಗ್ಸ್ ಆಡಿದ ಬ್ಯಾಟರ್ಗಳ ಪೈಕಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರ ಎಂಬ World Record ನ ತಮ್ಮದಾಗಿಸಿಕೊಂಡಿದ್ದಾರೆ.

ರುತುರಾಜ್ ದಾಖಲೆ ಉಡೀಸ್
ಇದಕ್ಕೂ ಮುನ್ನ ಈ ದಾಖಲೆ ಭಾರತದ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅವರ ಹೆಸರಿನಲ್ಲಿತ್ತು. ಲಿಸ್ಟ್-ಎ ಕ್ರಿಕೆಟ್ನಲ್ಲಿ 100 ಇನಿಂಗ್ಸ್ ಆಡಿರುವ ರುತುರಾಜ್, 58.61ರ ಸರಾಸರಿಯಲ್ಲಿ 5,334 ರನ್ ಗಳಿಸಿದ್ದರು.ಇದೀಗ ಜೇಕ್ ಲಿಬ್ಬಿ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಇದನ್ನು ಓದಿ : ಪೊಲಾರ್ಡ್ ಪವರ್ಗೆ ಗೇಲ್ ಸಾರ್ವಕಾಲಿಕ ವಿಶ್ವ ದಾಖಲೆ ಉಡೀಸ್!
ಲಿಸ್ಟ್-ಎ ಕ್ರಿಕೆಟ್ನಲ್ಲಿ ಇದುವರೆಗೆ 54 ಇನಿಂಗ್ಸ್ ಆಡಿರುವ ಲಿಬ್ಬಿ, 62.46ರ ಸರಾಸರಿಯಲ್ಲಿ 2,561 ರನ್ ಗಳಿಸಿದ್ದಾರೆ.
ಈ ಮೂಲಕ ಕನಿಷ್ಠ 50 ಇನಿಂಗ್ಸ್ ಆಡಿದ ಬ್ಯಾಟರ್ಗಳ ಪೈಕಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರ ಎನಿಸಿಕೊಂಡಿದ್ದಾರೆ.

ಕೊಹ್ಲಿ, ಬೆವನ್ರನ್ನೂ ಹಿಂದಿಕ್ಕಿದ ಲಿಬ್ಬಿ
62.46ರ ಅದ್ಭುತ ಬ್ಯಾಟಿಂಗ್ ಸರಾಸರಿಯೊಂದಿಗೆ ಜೇಕ್ ಲಿಬ್ಬಿ ವಿಶ್ವ ಕ್ರಿಕೆಟ್ನ ದಿಗ್ಗಜರಾದ ಮೈಕಲ್ ಬೆವನ್ (57.86) ಮತ್ತು ವಿರಾಟ್ ಕೊಹ್ಲಿ (57.80) ಅವರನ್ನೂ ಹಿಂದಿಕ್ಕಿದ್ದಾರೆ.
ಲಿಸ್ಟ್-ಎ ಕ್ರಿಕೆಟ್ನಲ್ಲಿ ಕನಿಷ್ಠ 50 ಇನಿಂಗ್ಸ್ ಆಡಿದ ಬ್ಯಾಟರ್ಗಳ ಪೈಕಿ ಲಿಬ್ಬಿ ಇದೀಗ ಅಗ್ರಸ್ಥಾನದಲ್ಲಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಲಿಸ್ಟ್-ಎ ಕ್ರಿಕೆಟ್ನಲ್ಲಿ ಇಷ್ಟೊಂದು ಅದ್ಭುತ ದಾಖಲೆ ಹೊಂದಿದ್ದರೂ ಜೇಕ್ ಲಿಬ್ಬಿ ಇನ್ನೂ ಇಂಗ್ಲೆಂಡ್ನ ಏಕದಿನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಇದನ್ನು ನೋಡಿ : ಅಡುಗೆ ಮಾಡ್ತಿದ್ದಾಗಲೇ CYLINDER BLAST – ತಾಯಿ ಮಗಳಿಗೆ ಗಂಭೀರ ಗಾಯ




