ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟರ್ Kieron Pollard ಹೊಸ ದಾಖಲೆ ಬರೆದಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಾರು? ಕಳೆದ ಕೆಲ ವರ್ಷಗಳಿಂದ ಈ ಪ್ರಶ್ನೆಗೆ ಸಿಗುತ್ತಿದ್ದ ಉತ್ತರ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್. ಆದರೆ ಇಂದಿನಿಂದ ಈ ಉತ್ತರ ಬದಲಾಗಿದೆ. ಇನ್ಮುಂದೆ ಈ ಪ್ರಶ್ನೆಗೆ ಉತ್ತರ ಪವರ್ ಹಿಟ್ಟರ್ ಕೀರನ್ ಪೊಲಾರ್ಡ್.
ಶತಕ ಸಿಡಿಸುವ ಮೂಲಕ ವಿಶ್ವ ದಾಖಲೆ
ಡಲ್ಲಾಸ್ನಲ್ಲಿ ನಡೆದ ಮೇಜರ್ ಲೀಗ್ ಟಿ20 ಟೂರ್ನಿಯ ಪಂದ್ಯದಲ್ಲಿ Kieron Pollard ಭರ್ಜರಿ ಶತಕ ಸಿಡಿಸುವ ಮೂಲಕ ವಿಶ್ವ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ವಾಷಿಂಗ್ಟನ್ ಫ್ರೀಡಮ್ ವಿರುದ್ಧದ ಪಂದ್ಯದಲ್ಲಿ ಪೊಲಾರ್ಡ್ ಕೇವಲ 56 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ ಅಜೇಯ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು.

ಗೇಲ್ ಸಾರ್ವಕಾಲಿಕ ವಿಶ್ವ ದಾಖಲೆ ಉಡೀಸ್!
ಈ ಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಪೊಲಾರ್ಡ್ ಅಗ್ರಸ್ಥಾನಕ್ಕೇರಿದ್ದಾರೆ. ಕಳೆದ ಹಲವು ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಕ್ರಿಸ್ ಗೇಲ್ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಕ್ರಿಸ್ ಗೇಲ್ ಟಿ20 ಕ್ರಿಕೆಟ್ನಲ್ಲಿ 455 ಇನಿಂಗ್ಸ್ಗಳಲ್ಲಿ 14,562 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಆ ದಾಖಲೆಯನ್ನು ಪೊಲಾರ್ಡ್ ಹಿಂದಿಕ್ಕಿದ್ದಾರೆ.
ಇದನ್ನು ಓದಿ : T20 ವಿಶ್ವಕಪ್ನಿಂದ ಹೊರಬಿದ್ದ ಕನ್ನಡತಿ Shreyanka Patil..!!

ಮತ್ತೊಂದು ಐತಿಹಾಸಿಕ ಸಾಧನೆಯತ್ತ ಗುರಿ
ಟಿ20 ಕ್ರಿಕೆಟ್ನಲ್ಲಿ 653 ಇನಿಂಗ್ಸ್ಗಳನ್ನು ಆಡಿರುವ ಪೊಲಾರ್ಡ್ 2 ಶತಕಗಳೊಂದಿಗೆ ಒಟ್ಟು 14,582 ರನ್ ಗಳಿಸಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಇದೀಗ ಪೊಲಾರ್ಡ್ ಅವರ ಕಣ್ಣು ಮತ್ತೊಂದು ಐತಿಹಾಸಿಕ ಸಾಧನೆಯತ್ತ ನೆಟ್ಟಿದೆ.
ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದರೆ ಟಿ20 ಕ್ರಿಕೆಟ್ನಲ್ಲಿ 15 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗುವ ಸಾಧ್ಯತೆ ಇದೆ.

ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್
ಕ್ರಿಸ್ ಗೇಲ್ ಬಳಿಕ ಟಿ20 ಕ್ರಿಕೆಟ್ನ ಅತ್ಯಂತ ಸ್ಫೋಟಕ ಬ್ಯಾಟರ್ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಕೀರನ್ ಪೊಲಾರ್ಡ್ ಇದೀಗ ವಿಶ್ವದಾಖಲೆಯೊಂದಿಗೆ ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಕೀರನ್ ಪೊಲಾರ್ಡ್, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನು ನೋಡಿ : ಡಿಕೆಶಿ ಜೀವನ, ಬ್ಯಾಗ್ರೌಂಡ್ ಎಲ್ಲಾ ಗೊತ್ತಿದೆ ಬರೀ ನಾಟಕ ಆಡ್ತಾರೆ, ನಂಬಲು ಆಗುತ್ತಾ




