Karwar : ಸಿದ್ದಾಪುರದಲ್ಲಿ ನಡೆದ ವಸಂತ ನಾಯ್ಕ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳೀಯರು ರೊಚ್ಚಿಗೆದ್ದು ಆರೋಪಿಗಳ ಮೇಲೆ ಹಲ್ಲೆ ಮಾಡಿದ್ದಾರೆ.

Karwar : ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಗ್ರಾಮದಲ್ಲಿ ಗುರೂಜಿ ಜೊತೆಗೆ ಮಹಿಳೆಯ ಅಕ್ರಮ ಸಂಬಂಧದ ಗಲಾಟೆಯಲ್ಲಿ ವಸಂತ ನಾಯ್ಕ ಎಂಬುವರು ಮೃತಪಟ್ಟರೆ, ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಸಂತ ನಾಯ್ಕ್ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದ್ದ ವೇಳೆ, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಆರೋಪಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಏನಿದು ಘಟನೆ.?
ಸುಚಿತ್ರಾ, ಶಿವಮೊಗ್ಗ ಮೂಲದ ಕಮಲಾಕರ್ ಭಟ್ ಗುರೂಜಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರವನ್ನ ಸುಚಿತ್ರಾ ಮಗಳು ತನ್ನ ತಂದೆ ಮಹೇಶ್ ನಾಯ್ಕಗೆ ತಿಳಿಸಿದ್ದಾಳೆ.

ನಂತರ ಮಹೇಶ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಬಳಿಕ, ಕಮಲಾಕರ್ ಭಟ್ ಗುರೂಜಿ, ಸುಚಿತ್ರಾ, ಸುಚಿತ್ರಾ ತಂದೆ ಲೋಕನಾಥ್, ಮತ್ತು ಸಹಚರರಿಂದ ದಾಳಿ ನಡೆದಿದ್ದು, ಮಹೇಶ್ ನಾಯ್ಕ, ವಸಂತ್ ನಾಯ್ಕ್ ಮತ್ತು ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು,
ಕೂಡಲೇ ಅವರನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ವಸಂತ್ ನಾಯ್ಕ್ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಸುಚಿತ್ರಾ, ಎ2 ಲೋಕನಾಥ ಚೌಡಪ್ಪ ನಾಯ್ಕ್, ಎ3 ಅಪರಿಚಿತರು, ಮತ್ತು ಎ4 ಕಮಲಾಕರ್ ಭಟ್ ಗುರೂಜಿ ಸೇರಿ 7 ಜನರನ್ನು ಸಿದ್ದಾಪುರ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದರು.
ಇದನ್ನೂ ಓದಿ: ಖ್ಯಾತ ಜ್ಯೋತಿಷಿ ಜೊತೆ ಮಹಿಳೆ ಅಕ್ರಮ ಸಂಬಂಧಕ್ಕೆ ಓರ್ವನ ಕೊಲೆ.!

ಕೋರ್ಟ್ಗೆ ಬಂದವರಿಗೆ ಬಿತ್ತು ಗೂಸಾ!
ಇಂದು ಎ1 ಸುಚಿತ್ರಾ, ಎ2 ಲೋಕನಾಥ್, ಎ3 ಜ್ಯೋತಿಷಿ ಕಮಲಾಕರ ಭಟ್, ಎ4 ಆಕಾಶ್ ಜೆಎಂಎಫ್ಸಿ ಕೋರ್ಟ್ಗೆ ಹಾಜರು ಪಡಿಸುವ ವೇಳೆ, ಸ್ಥಳೀಯರು ಪೊಲೀಸ್ ಜೀಪ್ ತಡೆದು ಆರೋಪಿಗಳನ್ನು ಮನಬಂದಂತೆ ಥಳಿಸಿದ್ದು, ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.
ಆರೋಪಿ ಸುಚಿತ್ರಾ ಹಾಗೂ ಆಕೆಯ ತಂದೆಗೆ ಜನರು ಚಪ್ಪಲಿಯಿಂದ ಥಳಿಸಿ ಆಕ್ರೋಶ ಹೊರಹಾಕಿದ್ದಾರೆ. ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರು ಬಿಡದೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದು, ಪೊಲೀಸರು ಪರಿಸ್ಥಿ
ಸಿದ್ದಾಪುರ ಪೋಲಿಸ್ ಠಾಣೆ ಎದುರು ತಡರಾತ್ರಿವರೆಗೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡು ತನಿಖೆ ಮುಂದುವರೆಸಿದ್ದಾರೆ.

MUST WATCH : ನಿನ್ನ ಹೆಂಡ್ತಿ ಮತ್ತು ನೀನು ಇಬ್ರು ದುಡ್ ತಿಂದ್ರಿ – ಅಧಿವೇಶನದಲ್ಲಿ SHIVALINGE GOWDA ಫುಲ್ ಗರಂ




