Karwar : ಗುರೂಜಿ ಜೊತೆಗೆ ಮಹಿಳೆಯ ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದಿದೆ.

Karwar : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಗ್ರಾಮದಲ್ಲಿ ಗುರೂಜಿ ಜೊತೆಗೆ ಮಹಿಳೆಯ ಅಕ್ರಮ ಸಂಬಂಧದ ಆರೋಪ ಕುರಿತು ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ಗುರೂಜಿ–ಮಹಿಳೆ ಅಕ್ರಮ ಸಂಬಂಧ ಗಲಾಟೆ
ಇನ್ನು ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆ ಮಾಹಿತಿ ಪ್ರಕಾರ, ಪ್ರಕರಣ ಸಂಬಂಧ ಹಲವಾರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆಯ ಸಂಬಂಧಿ ಆರೋಪಿ ಮಹಿಳೆ ಸುಚಿತ್ರಾ, ಶಿವಮೊಗ್ಗ ಮೂಲದ ಕಮಲಾಕರ್ ಭಟ್ ಗುರೂಜಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರವನ್ನ ಸುಚಿತ್ರಾ ಮಗಳು ತನ್ನ ತಂದೆ ಮಹೇಶ್ ನಾಯ್ಕಗೆ ತಿಳಿಸಿದ್ದು, ನಂತರ ಮಹೇಶ್ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: 16 ಬಾರಿ ಮಚ್ಚಿನಿಂದ ಕೊಚ್ಚಿ, ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟ ಹಂತಕ

ಗಲಾಟೆಯಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ
ಈ ದೂರು ಹಿನ್ನೆಲೆಯಲ್ಲಿ ಕಮಲಾಕರ್ ಭಟ್ ಗುರೂಜಿ, ಸುಚಿತ್ರಾ, ಸುಚಿತ್ರಾ ತಂದೆ ಲೋಕನಾಥ್, ಮತ್ತು ಸಹಚರರಿಂದ ದಾಳಿ ನಡೆದಿದ್ದು, ಮಹೇಶ್ ನಾಯ್ಕ, ವಸಂತ್ ನಾಯ್ಕ್ ಮತ್ತು ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು, ಕೂಡಲೇ ಅವರನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ವಸಂತ್ ನಾಯ್ಕ್ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಪ್ರಕರಣ ಕುರಿತು ಆರೋಪಿಗಳಲ್ಲಿ ಎ1 ಸುಚಿತ್ರಾ, ಎ2 ಲೋಕನಾಥ ಚೌಡಪ್ಪ ನಾಯ್ಕ್, ಎ3 ಅಪರಿಚಿತರು, ಮತ್ತು ಎ4 ಕಮಲಾಕರ್ ಭಟ್ ಸ್ವಾಮೀಜಿ ಇದ್ದಾರೆ. ಪ್ರಕರಣ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲವಾಗಿದೆ ಮತ್ತು ಗುರೂಜಿ ಸೇರಿ 7 ಜನರನ್ನು ಪೊಲೀಸರ ವಿಚಾರಣೆಗೆ ಒಳಪಡಿಸಲಾಗಿದೆ.

MUST WATCH : ವರನ ಮೇಲೆ ಚಾಕು ಇರಿತ ಕೇಸ್ – ತನಿಖೆಯ ವೇಳೆ ಪೊಲೀಸರೇ ಶಾಕ್




