ಕೊನೆಯಲ್ಲಿ ರೊಚ್ಚಿಗೆದ್ದ ರಿಚಾ, ಹೋರಾಡಿ ಸೋತ RCB – ಮುಂಬೈಗೆ 15 ರನ್ ಜಯ.

ವುಮೆನ್ಸ್ ಪ್ರೀಮಿಯರ್ ಲೀಗ್ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಸೋಲನುಭವಿಸಿದೆ. ಟಾಸ್ ಗೆದ್ದ RCB ತಂಡವು ಬೌಲಿಂಗ್ ಆಯ್ದುಕೊಂಡಿದ್ರು.

15 ರನ್ಗಳಿಂದ ಸೋಲು
ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ರು. ಮುಂಬೈ ಇಂಡಿಯನ್ಸ್ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು, 199 ರನ್ ಕಲೆಹಾಕಿತು. ಈ ಗುರಿಯನ್ನ ಬೆನ್ನತ್ತಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 184 ರನ್ಗಳಿಸಿ 15 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.
ಇದನ್ನು ಓದಿ : ನಟಿ Kavya Gowda ಗೆ ರೇಪ್ ಮಾಡ್ತೀನಿ ಎಂದು ಬೆದರಿಕೆ..!

RCB ವಿಶೇಷ ದಾಖಲೆ
ಇನ್ನು ಈ ಸೋಲಿನ ಹೊರತಾಗಿಯೂ ಆರ್ಸಿಬಿ ತಂಡದ ಹೆಸರಿಗೆ ವಿಶೇಷ ದಾಖಲೆ ಸೇರ್ಪಡೆಯಾಗಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 50ಕ್ಕಿಂತ ಕಡಿಮೆ ಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡು 150ಕ್ಕಿಂ ಅಧಿಕ ರನ್ಗಳಿಸಿದ ಮೊದಲ ತಂಡವೆಂಬ ಭರ್ಜರಿ ದಾಖಲೆಯೊಂದು ಆರ್ಸಿಬಿ ತಂಡದ ಪಾಲಾಗಿದೆ.

ಇದನ್ನು ನೋಡಿ : CHIKKABALLAPURA | ಸರ್ಕಾರಿ ಶಾಲೆಯಲ್ಲಿ ರಾಷ್ಟ್ರದ್ವಜ ಉಲ್ಟಾ ಹಾರಿಸಿ ಯಡವಟ್ಟು




