ನಿನ್ನ ನೂರು ಜನರ ಮುಂದೆ ರೇಪ್ ಮಾಡಿ ಕೊಲ್ತಿನಿ : ನಟಿ Kavya Gowda ಗೆ ಪತಿಯ ಸಂಬಂಧಿಕರಿಂದಲೇ ಬೆದರಿಕೆ!

ನಟಿ ಕಾವ್ಯ ಗೌಡಗೆ ಪತಿಯ ಸಂಬಂಧಿಕರಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಕಾವ್ಯ ಜನಪ್ರಿಯತೆ ಸಹಿಸದೆ ಧಮ್ಕಿ ಮಾಡಿರುವ ಆರೋಪ ಕೇಳಿ ಬಂದಿದೆ. ಪತಿ ಸೋಮಶೇಖರ್ ಸಂಬಂಧಿಕರು ಕಾವ್ಯ ಗೌಡಗೆ ಬೆದರಿಕೆ ಹಾಕಿದ್ದಾರೆ.

ಅತ್ಯಾಚಾರ ಮಾಡಿ ಕೊಲೆ ಮಾಡುತ್ತೇನೆ
ಅಲ್ಲದೇ ರವಿಕುಮಾರ್ ಎಂಬಾತ “ನಿನ್ನನ್ನು ನೂರು ಜನರ ಮುಂದೆ ಅತ್ಯಾಚಾರ ಮಾಡಿ ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ನಟಿ ಕಾವ್ಯ ಗೌಡ ಅವರ ಸಹೋದರಿ ಭವ್ಯ ಗೌಡ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನು ಓದಿ : ಬೆಂಗಳೂರಿನಲ್ಲಿ ಮತ್ತೊಂದು ATM ವಾಹನ ದರೋಡೆ

FIR ದಾಖಲು
ಪ್ರಕರಣದಲ್ಲಿ ಪ್ರೇಮ, ನಂದೀಶ್, ಪ್ರಿಯಾ ಹಾಗೂ ರವಿಕುಮಾರ್ ವಿರುದ್ಧFIR ದಾಖಲಿ ಸಿದ್ದಾರೆ. ಈ ಘಟನೆಗಳಿಂದ ನಟಿ ಕಾವ್ಯ ಗೌಡ ಮಾನಸಿಕವಾಗಿ ನೊಂದಿದ್ದಾರೆ ಎನ್ನಲಾಗಿದೆ. ಸೋಮಶೇಖರ್ ನಂದೀಶ್ ಇಬ್ಬರು ಸಹೋದರರು ಒಂದೇ ಮನೆಯಲ್ಲಿ ಇಬ್ಬರು ವಾಸವಿದ್ದರು ಹೀಗಾಗಿ ಆಗಾಗ ಕಾವ್ಯ ಮತ್ತು ಪ್ರೇಮ ನಡುವೆ ಮನಸ್ತಾಪ ಆಗುತ್ತಿತ್ತು. ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ಆಗುತ್ತಿತ್ತು . ನಿನ್ನೆ ಕಾವ್ಯ ಪ್ರೇಮಾ ಸಂಬಂಧಿಕರು ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ಮತ್ತೊಮ್ಮೆ ಗಲಾಟೆ ಆಗಿದೆ.

ಕಾವ್ಯ ಜನಪ್ರಿಯತೆಯನ್ನು ಪ್ರೇಮ ಸಹಿಸುತ್ತಿರಲಿಲ್ಲ
ಈ ಕುರಿತು ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ಮತ್ತು ಪ್ರತಿದವರು ದಾಖಲಾಗಿದೆ. ಈ ಗಲಾಟೆಗೆ ಮತ್ತು ಕಾವ್ಯ ಅವರ ಮೇಲಿನ ಸಿಟ್ಟಿಗೆ ಕಾರಣ ಏನು ಅನ್ನುವ ವಿಚಾರ ಬೆಳಕಿಗೆ ಬಂದಾಗ ಕಾವ್ಯ ಜನಪ್ರಿಯತೆಯನ್ನು ಪ್ರೇಮ ಸಹಿಸುತ್ತಿರಲಿಲ್ಲ ಅಂತೆ ಹಾಗಾಗಿ ಒಂದಿಲ್ಲ ಒಂದು ವಿಚಾರಕ್ಕೆ ದಿನಾಲು ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು.

ಇದನ್ನು ನೋಡಿ : NELAMANGALA | ಹಣದ ವಿಚಾರಕ್ಕೆ ರೌಡಿಶೀಟರ್ನನ್ನು ಕೊಲೆಗೈದ ಸ್ನೇಹಿತರು




