Bengaluru : ಮತ್ತೊಂದು ಎಟಿಎಂ ವಾಹನ ದರೋಡೆ – ಏಜೆನ್ಸಿ ಸಿಬ್ಬಂದಿಯಿಂದ 1.40 ಕೋಟಿ ಲೂಟಿ.

ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿಯಿಂದ ನಡೆದಿದ್ದ ATM ರಾಬರಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪೇಮೆಂಟ್ ಸರ್ವಿಸ್ ಕಂಪನಿಯಲ್ಲಿ ಭಾರೀ ವಂಚನೆ ಬೆಳಕಿಗೆ ಬಂದಿದೆ.
ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ನ ಸಿಬ್ಬಂದಿಗಳು ಎಟಿಎಂಗೆ ಹಣ ತುಂಬುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಹಣದೊಂದಿಗೆ Escape ಆಗಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ.
ಹಣ ದುರುಪಯೋಗ
ಹಿಟಾಚಿ ಕಂಪನಿ ಎಸ್ಬಿಐ ಹಾಗೂ ಆಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಪೇಮೆಂಟ್ ಸರ್ವಿಸ್ ನೀಡುತ್ತಿತ್ತು. ಈ ಸಂಸ್ಥೆಯಲ್ಲಿ ಎಟಿಎಂಗೆ ಹಣ ಡೆಪಾಸಿಟ್ ಮಾಡುವ ಜವಾಬ್ದಾರಿ ಹೊತ್ತಿದ್ದ ಸಿಬ್ಬಂದಿಗಳೇ ಹಣ ದುರುಪಯೋಗ ಪಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನು ಓದಿ : Bengaluru ನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ suicide..!
ಕೋಟಿ ಕೋಟಿ ಹಣ ಲೂಟಿ
ಇನ್ನು ಈ ಪ್ರಕರಣದಲ್ಲಿ ಎರಡು ತಂಡಗಳು ಭಾಗಿಯಾಗಿದ್ದು, ಮೊದಲ ತಂಡದ ನಾಲ್ವರು ಸಿಬ್ಬಂದಿಗಳು 57 ಲಕ್ಷ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಪ್ರವೀಣ್, ಧನಶೇಖರ್, ರಾಮಕ್ಕ ಹಾಗೂ ಹರೀಶ್ ಕುಮಾರ್ ಆರೋಪಿಗಳಾಗಿದ್ದಾರೆ. ಇನ್ನೊಂದು ತಂಡದ ಮೂವರು ಸಿಬ್ಬಂದಿಗಳು 80 ಲಕ್ಷ ರೂಪಾಯಿ ಹಣದೊಂದಿಗೆ ಎಸ್ಕೇಪ್ ಆಗಿದ್ದು, ಈ ಪ್ರಕರಣದಲ್ಲಿ ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಮತ್ತು ವರುಣ್ ಆರೋಪಿಗಳಾಗಿದ್ದಾರೆ.
ದೂರು ದಾಖಲು
ಕೋರಮಂಗಲದ ಆಕ್ಸಿಸ್ ಬ್ಯಾಂಕ್ ಶಾಖೆಯಿಂದ ಎಟಿಎಂಗಳಿಗೆ ಹಣ ಸಾಗಿಸುವ ವೇಳೆ ಆರೋಪಿಗಳು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಒಟ್ಟು 1 ಕೋಟಿ 40 ಲಕ್ಷ ರೂಪಾಯಿ ಹಣ ವಂಚನೆಯಾಗಿದೆ ಎಂದು ಬ್ಯಾಂಕ್ ವತಿಯಿಂದ ದೂರು ದಾಖಲಾಗಿದೆ.

ಆರೋಪಿಗಳಿಗಾಗಿ ಹುಡುಕಾಟ
ಇನ್ನು ಈ ಘಟನೆ ಸಂಬಂಧ 19ನೇ ಕೋರಮಂಗಲ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಘಟನೆ ಸಂಬಂದ ಕೇಸ್ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಯಾವ ಸಮಯದಿಂದ ಕೆಲಸ ಮಾಡುತ್ತಿದ್ದರು ಎಷ್ಟು ಸಮಯದಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಬ್ಯಾಂಕ್ನವರಿಂದ ದಾಖಲೆ ಪಡೆದು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನು ನೋಡಿ : ಕರ್ನಾಟಕ- ಕೇರಳ ಗಡಿಯಲ್ಲಿ ರಾಜೀವ್ ಗೌಡ ಬಂಧನ : ಪೌರಾಯುಕ್ತೆ ಅಮೃತಾಗೌಡಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡ ಆರೆಸ್ಟ್




