
ದರ್ಶನ್ ಆಪ್ತ ನಟ DHANVEER ಗೆ ದಿನೇ ದಿನೇ ಹೆಚ್ಚಿದ ಸಂಕಷ್ಟ – ಈಗಾಗಲೇ ಎರಡು ಪೊಲೀಸ್ ಠಾಣೆಗಳಲ್ಲಿ ಧನ್ವೀರ್ ವಿರುದ್ಧ FIR ದಾಖಲು
ನಟ ದರ್ಶನ್ ಆಪ್ತ ಧನ್ವೀರ್ಗೆ ದಿನೇ ದಿನೇ ಕಾನೂನು ಸಂಕಷ್ಟಗಳು ಹೆಚ್ಚಾಗ್ತಿದ್ದು, ಈಗಾಗಲೇ ಧನ್ವೀರ್ ವಿರುದ್ಧ 2 ಎಫ್ಐಆರ್ಗಳು ದಾಖಲಾಗಿವೆ.

2 ಪೊಲೀಸ್ ಠಾಣೆಗಳಲ್ಲಿ ಧನ್ವೀರ್ ವಿರುದ್ಧ FIR
ಹೌದು.. ಈಗಾಗಲೇ ಆರ್.ಆರ್. ನಗರ ಹಾಗೂ ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದ್ದು, ಇದೀಗ ಮತ್ತೆರಡು ಠಾಣೆಗಳಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಚಾಮರಾಜಪೇಟೆ ಹಾಗೂ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿ ಕೇಳಿದ್ದಾರೆ ಎನ್ನಲಾಗಿದೆ.
READ THIS : ಯುವಕನಿಗೆ ಹಿಂಸೆಕೊಟ್ಟ ಧನ್ವೀರ್ ವಿಚಿತ್ರ ವಿಡಿಯೋಗಳು ವೈರಲ್!

ಇಂದು DHANVEER ಗೆ ನೋಟಿಸ್ ನೀಡುವ ಸಾಧ್ಯತೆ!
ಇನ್ನು ಆರ್.ಆರ್. ನಗರ ಹಾಗೂ ಬಸವೇಶ್ವರನಗರ ಪೊಲೀಸರು ಇಂದು ನಟ ಧನ್ವೀರ್ಗೆ ನೋಟಿಸ್ ನೀಡುವ ಸಾಧ್ಯತೆಯಿದೆ. ಬೆದರಿಕೆ, ಅವಮಾನ ಹಾಗೂ ಶಾಂತಿಭಂಗಕ್ಕೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಯ ಭಾಗವಾಗಿ ಈಗಾಗಲೇ ಪೊಲೀಸರು ಸಂಬಂಧಿತ ಆಡಿಯೋಗಳನ್ನು ಸಂಗ್ರಹಿಸಿದ್ದು, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮುಂದಾಗಿದ್ದಾರೆ.

MUST WATCH : ರಾಜಮಾತೆ ಪ್ರಮೋದಾದೇವಿಗೆ ಪೊಲೀಸ್ ಕಮಿಷನರ್ ಟಕ್ಕರ್..!



