
CYCLONE : ಆಂಧ್ರ ಕರಾವಳಿಯಲ್ಲಿ ಅರ್ನಬ್ ಚಂಡಮಾರುತದ ಆರ್ಭಟ!
ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 150ರಿಂದ 180 ಕಿಲೋಮೀಟರ್ ವೇಗದಲ್ಲಿ ಅರ್ನಬ್ ಚಂಡಮಾರುತ ಅಪ್ಪಳಿಸಿದ್ದು, ಚಂಡಮಾರುತದ ಪರಿಣಾಮವಾಗಿ ಎಂಟು ಮಂದಿ ಮೃತಪಟ್ಟಿರುವ ವರದಿಯಾಗಿದೆ.

ಚಂಡಮಾರುತಕ್ಕೆ ಎಂಟು ಮಂದಿ ಬಲಿ
ಸಾವಿರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದೆ. ಸಮುದ್ರದಲ್ಲಿ ಬೃಹತ್ ಅಲೆಗಳು ಭೋರ್ಗರೆಯುತ್ತಿದ್ದು, ಕರಾವಳಿ ಭಾಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಚಂಡಮಾರುತದ ಪರಿಣಾಮ ವಿಮಾನ ಸೇವೆಗಳಿಗೆ ಅಡ್ಡಿಯಾಗಿದ್ದು, ಹತ್ತಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.
READ THIS : ಆಂಧ್ರ, ಒಡಿಶಾದಲ್ಲಿ ಭಾರಿ ಮಳೆ – ಚಂಡಮಾರುತ ಎಚ್ಚರಿಕೆ!

ಅರ್ನಬ್ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ!
ಇನ್ನು ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಲು ಅಡಚಣೆ ಎದುರಾಗಿದೆ. ಇನ್ನು ಅರ್ನಬ್ ಚಂಡಮಾರುತದ ಪ್ರಭಾವ ಒಡಿಶಾ, ತೆಲಂಗಾಣ ಹಾಗೂ ಗುಜರಾತ್ ಸೇರಿದಂತೆ ಆರು ರಾಜ್ಯಗಳ ಕರಾವಳಿ ಪ್ರದೇಶಗಳಿಗೂ ತಟ್ಟಿದೆ ಎನ್ನಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಒಟ್ಟಿನಲ್ಲಿ ಅರ್ನಬ್ ಚಂಡಮಾರುತ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ವ್ಯಾಪಕ ಹಾನಿ ಉಂಟುಮಾಡಿದೆ. ಬಿರುಗಾಳಿ, ಭಾರೀ ಮಳೆ ಹಾಗೂ ಸಮುದ್ರದ ಅಲೆಗಳ ಅಬ್ಬರದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
MUST WATCH : ಬೆಳಗಾವಿಯಲ್ಲಿ ಆರದ ಕಬ್ಬಿನ ಕಿಚ್ಚು – ಸಕ್ಕರೆ ಗೋದಾಮಿಗೆ ಬೀಗ..!





