
HASSAN : ಹಾಸನಾಂಬ ಬಾಗಿಲು ತೆರೆಯೋಕೆ ಕ್ಷಣಗಣನೆ ಆರಂಭ
ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದರ್ಶನಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ನಾಳೆಯಿಂದ ದರ್ಶನಕ್ಕೆ ಅವಕಾಶ
ನಾಳೆ ಬೆಳಗ್ಗೆಯಿಂದಲೇ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈ ಬಾರಿ ಭಕ್ತರ ಅನುಕೂಲಕ್ಕಾಗಿ 24 ಗಂಟೆಯೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ದೇ ದೇವಾಲಯದ ಸುತ್ತಲೂ ಬ್ಯಾರಿಕೇಡಿಂಗ್, ಜರ್ಮನ್ ಟೆಂಟ್ಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
READ THIS : ಹಾಸನಾಂಬೆ ಜಾತ್ರೆಯ ಖರ್ಚು ಕೇಳಿ ಬೆಚ್ಚಿಬಿದ್ದ ರೇವಣ್ಣ!

24×7 ಹಾಸನಾಂಬ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರೋ ಜಿಲ್ಲಾಡಳಿತ
ಸಂತೆಪೇಟೆ ಸರ್ಕಲ್ನಿಂದ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದ್ದು, 300 ರೂಪಾಯಿ ಟಿಕೆಟ್ ಹೊಂದಿರುವವರಿಗೆ ದೇವಾಲಯದ ಹಿಂಭಾಗದಿಂದ, 1,000 ರೂಪಾಯಿ ಟಿಕೆಟ್ ಹೊಂದಿರುವ ಭಕ್ತರಿಗೆ ತೋಟಗಾರಿಕೆ ಇಲಾಖೆ ಕಡೆಯಿಂದ, ಗೋಲ್ಡ್ ಪಾಸ್ ಹೊಂದಿರುವವರು ಬಿ.ಎಂ. ರಸ್ತೆಯ ಮೂಲಕ ದೇವಾಲಯ ಪ್ರವೇಶಿಸಬಹುದಾಗಿದೆ. ಬೆಳಗ್ಗೆ 8ರಿಂದ 10 ಗಂಟೆಯವರೆಗೆ ಪಾಸ್ ಮೂಲಕ ಆಗಮಿಸುವವರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 10.30ರಿಂದ ಮಧ್ಯಾಹ್ನ 12.30ರವರೆಗೆ ಗಣ್ಯರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.
HASSAN – ಶಿವಲಿಂಗೇಗೌಡ ನೇತೃತ್ವದಲ್ಲಿ ಕಾರ್ಯಕ್ರಮ
ಇನ್ನು ಪ್ರವಾಸಿ ಮಂದಿರದಲ್ಲಿ ನೋಂದಣಿ ಮಾಡಿಕೊಂಡು ಗಣ್ಯರು ಹಾಸನಾಂಬೆ ದರ್ಶನಕ್ಕೆ ಆಗಮಿಸಲಿದ್ದಾರೆ. ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ನೇತೃತ್ವದಲ್ಲಿ ದರ್ಶನೋತ್ಸವದ ಕಾರ್ಯಕ್ರಮಗಳು ನಡೆಯಲಿವೆ.
MUST WATCH : ದರ್ಶನ್ ಆಪ್ತನಿಗೆ FIR ಶಾಕ್.! ಧನ್ವೀರ್ ವಿರುದ್ಧ ಮತ್ತೆ ದೂರು





