
MYSURU : ಮುಂದುವರಿದ ದಸರಾ ವಿವಾದ – ರಾಜಮಾತೆ ಪ್ರಮೋದಾದೇವಿ ಪತ್ರಕ್ಕೆ ಪೊಲೀಸ್ ಆಯುಕ್ತೆ ಪ್ರತ್ಯುತ್ತರ
ಮೈಸೂರು ದಸರಾ ಮುಗಿದರೂ ವಿವಾದ ಮಾತ್ರ ಇನ್ನೂ ತಣ್ಣಗಾಗಿಲ್ಲ. ಹೌದು.. ದಸರಾ ಆಯೋಜನೆ ಹಾಗೂ ಅರಮನೆಯ ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ವ್ಯಕ್ತಪಡಿಸಿದ್ದ ಆಕ್ಷೇಪಗಳಿಗೆ ಇದೀಗ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸ್ಪಷ್ಟನೆ ನೀಡಿದ್ದಾರೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಪತ್ರಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸುದೀರ್ಘ ಪತ್ರದ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
READ THIS : DK ಸರ್ಕಾರದ ವಿರುದ್ಧ ರಾಜಮಾತೆ ಪ್ರಮೋದಾದೇವಿ ಕೆಂಡಾಮಂಡಲ!

ಪ್ರಮೋದಾದೇವಿ ಪತ್ರಕ್ಕೆ ಪೊಲೀಸ್ ಆಯುಕ್ತೆ ಪ್ರತ್ಯುತ್ತರ
ದಸರಾ ಮಹೋತ್ಸವದ ವೇಳೆ ಭದ್ರತಾ ವ್ಯವಸ್ಥೆ ಹಾಗೂ ಅರಮನೆಯ ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದ ಆಕ್ಷೇಪಗಳಿಗೆ ಸೀಮಾ ಲಾಟ್ಕರ್ ತಮ್ಮ ಸ್ಪಷ್ಟನೆ ನೀಡಿದ್ದಾರೆ. ಅರಮನೆಯ ಧಾರ್ಮಿಕ ಕಾರ್ಯಗಳಿಗೆ ಪೊಲೀಸರು ಯಾವುದೇ ಅಡ್ಡಿಪಡಿಸಿಲ್ಲ, ಸೂಕ್ತ ಭದ್ರತೆ ಒದಗಿಸಿ, ಕಾಲ್ತುಳಿತದಂತಹ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

MYSURU – ಜಟ್ಟಿ ಕಾಳಗದಲ್ಲಿ ತಮ್ಮ ತಪ್ಪಿಲ್ಲ
ಕಳೆದ ಎರಡು ತಿಂಗಳಿಂದ ಸಮನ್ವಯ ಸಭೆ ಮಾಡಿದ್ದೆವು. ಅರಮನೆ ಆಡಳಿತ ಮಂಡಳಿ ಜೊತೆ ಸಭೆ ಮಾಡಿದ್ದೆವು. ಜಟ್ಟಿ ಕಾಳಗದಲ್ಲಿ ತಮ್ಮ ತಪ್ಪಿಲ್ಲ, ಮೂರು ತಂಡ ನಿಗದಿತ ಸಮಯಕ್ಕೆ ಬಂದಿದ್ದವು.
ನಾಲ್ಕನೇ ತಂಡ ತಡವಾಗಿ ಬಂದಿತ್ತು, ಜೊತೆಗೆ ಪಾಸ್ ಇಲ್ಲದವರನ್ನ ಕರೆದುಕೊಂಡು ಬಂದಿದ್ರು. ಅಂಬಾರಿ ಕಟ್ಟುವ ಸ್ಥಳದಲ್ಲಿ ಅನಧಿಕೃತ ವ್ಯಕ್ತಿಗಳಿರಲಿಲ್ಲ, ಅಧಿಕಾರಿಗಳ ಕುಟುಂಬಸ್ಥರಿಗೆ ಅವಕಾಶ ಕಲ್ಪಿಸಿರಲಿಲ್ಲ. ಹೊಸ ಆನೆ ನಿಯೋಜನೆಗೊಂಡ ಕಾರಣಕ್ಕೆ ಪಾಸ್ ಹೊಂದಿದ್ದವರಿಗಷ್ಟೆ ಅವಕಾಶ ನೀಡಿದ್ದೆವು ಎಂದು ಸ್ಪಷ್ಟನೆ ನೀಡಿದ್ದಾರೆ.

MUST WATCH : ರೈತನನ್ನ ಬಲಿ ಪಡೆದಿದ್ದ ಭಕ್ಷಕ ಚಿರತೆ ಕೊನೆಗೂ ಸೆರೆ




