2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ RCB ತಂಡದ ಸತತ ಗೆಲುವಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ರೇಕ್ ಹಾಕಿದೆ.

2026ರ ಮಹಿಳಾ ಪ್ರೀಮಿಯರ್ ಲೀಗ್ನ 15 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದಿತ್ತು. ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ RCB ವಿರುದ್ದ, ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

109 ರನ್ ಕಲೆ ಹಾಕಿದ ಆರ್ಸಿಬಿ
ಈ ಮೂಲಕ ಆರ್ಸಿಬಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಪಂದ್ಯದಲ್ಲಿ ಟಾಸ್ ಸೋತು ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. 20 ಓವರ್ಗಳಿಗೆ ಆಲೌಟ್ ಆಗಿ 109 ರನ್ಳನ್ನ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಡೆಲ್ಲಿ ತಂಡ 15 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು. ಡೆಲ್ಲಿ ಬೌಲಿಂಗ್ ದಾಳಿಗೆ ಆರ್ಸಿಬಿ ಕ್ಯಾಪ್ಟನ್ ಸ್ಮೃತಿ ಮಂದಾನಾ 38 ಹಾಗೂ ರಾಧಾ ಯಾದವ್ 18, ಗೌತಮಿ ನಾಯಕ್ 11 ರನ್ ಗಳಿಸಿದ್ದು ಬಿಟ್ರೆ, ಉಳಿದ ಯಾರು ಕೂಡ ಎರಡಂಕಿ ರನ್ ದಾಟಲಿಲ್ಲ.
ಇದನ್ನು ಓದಿ : ಡಿವೋರ್ಸ್ ಘೋಷಿಸಿದ ‘ರಾಧಾ ರಮಣ ಧಾರಾವಾಹಿ’ ಖ್ಯಾತಿಯ ನಟಿ Anusha Hegde

ಅತ್ಯುತ್ತಮ ಬೌಲಿಂಗ್
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಮಾರಿನಾನ್ ಕಾಪ್ 4 ಓವರ್ಗಳಿಗೆ 17 ರನ್ ನೀಡಿ ಎರಡು ವಿಕೆಟ್ ಕಿತ್ತರು. ಇವರು ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವಾಲ್ ಅವರನ್ನು ಔಟ್ ಮಾಡಿದರು. ಮಿನ್ನು ಮಣಿ, ಸ್ಮೃತಿ ಮಂಧಾನಾ ಹಾಗೂ ರಿಚಾ ಘೋಷ್ ಅವರನ್ನು ಔಟ್ ಮಾಡಿದರು. ನಂದಿನಿ ಶರ್ಮಾ ಮೂರು ವಿಕೆಟ್ ಕಿತ್ತರು.

ಇದನ್ನು ನೋಡಿ : ರಾಜ್ಯಪಾಲರು ಮೋದಿಯ ಬಾಲದಂತೆ – KPCC ಪ್ರಧಾನ ಕಾರ್ಯದರ್ಶಿ ಆಕ್ರೋಶ




