‘ರಾಧಾ ರಮಣ ಧಾರಾವಾಹಿ’ ಖ್ಯಾತಿಯ ನಟಿ ಅನುಷಾ ಹೆಗಡೆ ಬದುಕಲ್ಲಿ ಬಿರುಗಾಳಿ! ಡಿವೋರ್ಸ್ ಘೋಷಿಸಿದ ನಟಿ

ಜನಪ್ರಿಯ ಕನ್ನಡ ಧಾರಾವಾಹಿ ರಾಧಾ–ರಮಣದಲ್ಲಿ ವಿಲನ್ ದೀಪಿಕಾ ಪಾತ್ರದ ಮೂಲಕ ಮನೆಮಾತಾಗಿದ್ದ ನಟಿ ಅನುಷಾ ಹೆಗಡೆ ಅವರ ವೈಯಕ್ತಿಕ ಜೀವನದಲ್ಲಿ ಬಿರುಕು ಮೂಡಿದೆ. ಮೂರು ವರ್ಷಗಳ ವೈವಾಹಿಕ ಜೀವನಕ್ಕೆ ಅವರು ಅಧಿಕೃತವಾಗಿ ತೆರೆ ಎಳೆದಿದ್ದು, ಡಿವೋರ್ಸ್ ಪಡೆದಿರುವುದಾಗಿ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
Anusha Hegde ಬದುಕಲ್ಲಿ ಬಿರುಗಾಳಿ!
ನಟಿ Anusha Hegde ಅವರು ನಟ ಪ್ರತಾಪ್ ಅವರೊಂದಿಗೆ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ ಇದೀಗ ಪರಸ್ಪರ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿರುವುದಾಗಿ ತಿಳಿಸಿದ್ದಾರೆ. ಈ ವಿಚಾರವನ್ನು ಅವರು ಸ್ವತಃ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಇದನ್ನು ಓದಿ : ತಂದೆ-ತಾಯಿ ಮಾರಾಟ ಮಾಡಿದ್ದ 6 ತಿಂಗಳ ಮಗು ಪತ್ತೆ..!!

ಪೋಸ್ಟ್ನಲ್ಲಿ ಏನಿದೆ?
“ನಿಮಗೆ ಈಗಾಗಲೇ ತಿಳಿದಿರುವಂತೆ, 2023 ರಿಂದ ನನ್ನ ಮದುವೆ, ದಾಂಪತ್ಯ ಜೀವನದಲ್ಲಿ ಬದಲಾವಣೆಗಳು ನಡೆಯುತ್ತಿದ್ದವು. 2025 ರಲ್ಲಿ ನಾವು ಕಾನೂನುಬದ್ಧವಾಗಿ ಬೇರೆಯಾಗಿದ್ದೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಈ ಬಗ್ಗೆ ಹೆಚ್ಚಿನ ಚರ್ಚೆ ಅಥವಾ ಪ್ರಶ್ನೆಗಳನ್ನು ಮಾಡಬೇಡಿ ಎಂದು ವಿನಂತಿಸುತ್ತೇನೆ ನನ್ನ ಜೀವನದ ಈ ಅಧ್ಯಾಯವು ಪರಸ್ಪರ ಗೌರವ ಸಾಮರಸ್ಯದೊಂದಿಗೆ ಮುಕ್ತಾಯಗೊಂಡಿದೆ.
ನಾನು ಈಗ ಶಾಂತಿ ಮತ್ತು ಸ್ಪಷ್ಟತೆಯೊಂದಿಗೆ ನನ್ನ ವೃತ್ತಿಜೀವನ, ನನ್ನ ಕುಟುಂಬ ಮತ್ತು ವೈಯಕ್ತಿಕ ಬೆಳವಣಿಗೆಯ ಕಡೆಗೆ ಗಮನ ಹರಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದನ್ನು ನೋಡಿ : ಮೌನಿ ರಾಯ್ಗೆ ವೃದ್ಧರಿಂದ ಕಿರುಕುಳ; ಬೇಸರ ಹೊರಹಾಕಿದ ನಟಿ

